Asianet Suvarna News Asianet Suvarna News

ರಾಜ್ಯದಲ್ಲಿ ಸಂಭವಿಸಿರುವ ಬೋರ್‌'ವೆಲ್ ದುರಂತ ಒಂದೆರಡಲ್ಲ! ಇಲ್ಲಿದೆ ಸಂಪೂರ್ಣ ವಿವರ

ರಾಜ್ಯದಲ್ಲಿ ಸಂಭಸಿರುವ ಕೊಳವೆ ಬಾವಿ ದುರಂತಗಳು ಒಂದೆರಡಲ್ಲ. ಒಂದೊಂದು ದುರಂತ ನಡೆದಾಗಲು ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಎಷ್ಟೆ ಆಗ್ರಹ ಕೇಳಿ ಬಂದರೂ ನಿರ್ಲಕ್ಷ್ಯ ಇದರ ಪರಿಣಾಮವಾಗಿಯೇ ಇದೀಗ ಮತ್ತೊಂದು ಇಂತಹುದೇ ದುರಂತ ಸಂಭವಿಸಿದೆ. ಬೆಳಗಾವಿಯ ಝಂಜರವಾಡಿ ಗ್ರಾಮದಲ್ಲಿ 6 ವರ್ಷದ ಕಾವೇರಿ ಕೊಳವೆ ಬಾವಿಯೊಳಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

Borewell Tragedies In Karnatka

ರಾಜ್ಯದಲ್ಲಿ ಸಂಭಸಿರುವ ಕೊಳವೆ ಬಾವಿ ದುರಂತಗಳು ಒಂದೆರಡಲ್ಲ. ಒಂದೊಂದು ದುರಂತ ನಡೆದಾಗಲು ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಎಷ್ಟೆ ಆಗ್ರಹ ಕೇಳಿ ಬಂದರೂ ನಿರ್ಲಕ್ಷ್ಯ ಇದರ ಪರಿಣಾಮವಾಗಿಯೇ ಇದೀಗ ಮತ್ತೊಂದು ಇಂತಹುದೇ ದುರಂತ ಸಂಭವಿಸಿದೆ. ಬೆಳಗಾವಿಯ ಝಂಜರವಾಡಿ ಗ್ರಾಮದಲ್ಲಿ 6 ವರ್ಷದ ಕಾವೇರಿ ಕೊಳವೆ ಬಾವಿಯೊಳಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಇಂತಹ ದುರಂತ ಸಂಭವಿಸಿರೋದು ಇದೆ ಮೊದಲೇನಲ್ಲ.. ಈ ಹಿಂದೆ ಹಲವು ಕೊಳವೆ ಬಾವಿ ದುರಂತಗಳು ಸಂಭವಿಸಿವೆ. ಆ ಘಟನೆಗಳ ಬಗ್ಗೆ ಕಣ್ಣು ಹಾಯಿಸುವುದಾದರೆ.

ಬೋರ್​ವೆಲ್ ದುರಂತಗಳು

- ದಾವಣಗೆರೆ- 2000ರಲ್ಲಿ ದಾವಣಗೆರೆಯಲ್ಲಿ ದುರ್ಘಟನೆ

2000ರಲ್ಲಿ ದಾವಣಗೆರೆಯಲ್ಲಿ  ಬೋರ್‌ವೆಲ್ ದುರಂತ ಸಂಭವಿಸಿತ್ತು. ಕರಿಯ ಎಂಬ ಬಾಲಕ ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಯೊಳಗೆ ಬಿದ್ದಿದ್ದ . ಎಷ್ಟೆ ಪ್ರಯತ್ನ ನಡೆಸಿದರೂ ಕರಿಯನನ್ನು ಬದುಕುಳಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

-ರಾಯಚೂರು- 2007ರ ಏಪ್ರಿಲ್ 27 ರಂದು ಮಾನ್ವಿಯ ನೀರಮಾನವಿಯಲ್ಲಿ ದುರಂತ

ಇನ್ನೂ 2007- ಏ.27 ರಲ್ಲಿ  ಮಾನ್ವಿಯ ನೀರಮಾನವಿಯಲ್ಲಿ ಮತ್ತೊಂದು ದುರಂತ ಸಂಭವಿಸಿತ್ತು. ಇಲ್ಲಿ ಸಂದೀಪ್ ಎನ್ನುವ ಬಾಲಕ ತೆರೆದ ಕೊಳವೆಬಾವಿಯೊಳಗೆ ಬಿದ್ದದ್ದ. ಈತನನ್ನು ರಕ್ಷಸಿಲು ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಸಂದೀಪ್ ಕೊಳವೆಬಾವಿಯಿಂದ ಹೊರಬಂದಿದ್ದು ಶವವಾಗಿ.

-ವಿಜಯಪುರ- 2008ರ ಸೆಪ್ಟೆಂಬರ್'ನಲ್ಲಿ ಇಂಡಿಯ ದೇವರನಿಂಬರಗಿಯಲ್ಲಿ ದುರಂತ

2008ರ ಸೆಪ್ಟೆಂಬರ್'ನಲ್ಲಿ ಇಂಡಿಯ ದೇವರನಿಂಬರಗಿಯಲ್ಲಿ  ಕಾಂಚನಾ ಎಂಬ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ತೋಟದ ಮನೆಯಲ್ಲಿ ಆಟವಾಡುವಾಡುತ್ತಿದ್ದಾಗ ಕೊಳವೆಬಾವಿಗೆ ಬಿದ್ದಿದ್ದಳು. ಈ ಬಾಲಕಿ ಕೂಡ ಕೊಳವೆ ಬಾವಿಯಿಂದ ಹೊರ ಬಂದಿದ್ದು ಶವವಾಗಿಯೆ.

-ಬಾಗಲಕೋಟೆ- 2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲಿ ದುರಂತ

2008ರಲ್ಲಿ ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ ಕೊಳವೆಬಾವಿ ದುರಂತ ಸಂಭವಿಸಿತ್ತು. ಇಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಕೊಳವೆಬಾವಿಗೆ ಬಿದ್ದಿದ್ದರು ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಳು ಕಲ್ಲವ್ವ. ಸುರಂಗ ಕೊರೆದು ಕಲ್ಲವ್ವಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು.

-ವಿಜಯಪುರ: ಜೂನ್ 17, 2014

2014 ಜೂನ್ 17ರಂದು ವಿಜಯಪುರ ಜಿಲ್ಲೆಯ ನಾಗತಾನ ಹಳ್ಳಿಯಲ್ಲಿ ಇಂಥಾದೊಂದು ದುರಂತ ಸಂಭವಿಸತ್ತು. ಅಕ್ಷತಾ ಎಂಬ ಬಾಲಕಿ ಅಟ್ಟಿಸಿಕೊಂಡು ಬಂದ ನಾಯಿಂದ ತಪ್ಪಿಸಿಕೊಳ್ಳುವ ವೇಳೆ ಕೊಳವೆಬಾವಿಗೆ ಬಿದ್ದಿದ್ದಳು. ಅಕ್ಷತಾಳನ್ನು ಕಾಪಾಡಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.

-ಬಾಗಲಕೋಟೆ: ಆಗಸ್ಟ್ 4, 2014 ಬಾಗಲಕೋಟೆಯ ಸೂಳಿಕೇರಿ ಗ್ರಾಮದಲ್ಲಿ ದುರಂತ

ಆಗಸ್ಟ್ 4, 2014 ಬಾಗಲಕೋಟೆಯ ಸೂಳಿಕೇರಿ ಗ್ರಾಮದಲ್ಲಿ ದುರಂತ ಸಂಭವಿಸಿತ್ತು. 6 ವರ್ಷದ ತಿಮ್ಮಣ್ಣ ಅನ್ನೋ ಬಾಲಕ ಆಟವಾಡುತ್ತ 350 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ, ತಿಮ್ಮಣ್ಣನೂ ಕೂಡ ಬದುಕಿ ಬರಲಿಲ್ಲ.

ಒಟ್ಟಾರೆ ಇಷ್ಟೆಲ್ಲ ದುರಂತಗಳಲ್ಲಿ ಕಲ್ಲವ್ವನನ್ನು ಬಿಟ್ಟರೆ ಇನ್ಯಾರು ಕೂಡ ಜೀವಂತವಾಗಿ ಸಿಕ್ಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೋ. ಜನರ ಬೇಜವ್ದಾರಿಯೋ ಗೊತ್ತಿಲ್ಲ. ತೆರೆದ ಕೊಳವೆಬಾವಿಗೆ ಬಲಿಯಾಗ್ತಿರೋದು ಮುಗ್ಧ ಮಕ್ಕಳು. ಕಾವೇರಿಯಾದರೂ ಜೀವಂತವಾಗಿ ಕೊಳವೆ ಬಾವಿಯಿಂದ ಹೊರ ಬರಲಿ ಎಂದು ದೇವರ ಪ್ರಾರ್ಥಿಸೋಣ.

 

Follow Us:
Download App:
  • android
  • ios