Asianet Suvarna News Asianet Suvarna News

ಸಿಎಂ ಬುಡಕ್ಕೆ ಬಾಂಬ್ ಇಟ್ಟ ನಾಗ !

ಅಜ್ಞಾತ ಸ್ಥಳದಿಂದಲೇ ಬುಸುಗುತ್ತಿರವ ರೌಡಿ ನಾಗ, ನನ್ನ ಮೇಲೆ ರಾಜಕೀಯ ಕಾರಣಕ್ಕೆ ದಾಳಿ ನಡೆದಿದೆ ಎಂದು ಬುಸುಗುತ್ತಿದ್ದಾನೆ, ಸಂಸದ ಪಿ.ಸಿ.ಮೋಹನ್​ಗೆ ನನ್ನ ಮೇಲೆ ಹೊಟ್ಟೆ ಉರಿ ಇದ್ದು ಷಡ್ಯಂತ್ರ ನಡೆಸಿದ್ದಾರೆ. ಪಿ.ಸಿ. ಮೋಹನ್ ಇದೇ ನಿನ್ನ ಫೈನಲ್​ ಚುನಾವಣೆ, ಮುಂದಿನ ದಿನಗಳಲ್ಲಿ ಕೌನ್ಸಿಲರ್​ ಕೂಡ ಆಗಲ್ಲ ಎಂದು ಆರ್ಭಟಿಸಿದ್ದಾನೆ.

Bomb naga blast aganist CM PA

ಪೊಲೀಸರಿಂದ ತಲೆಮರೆಸಿಕೊಂಡು ತಿರುಗುತ್ತಿರುವ ರೌಡಿ ನಾಗ ರಾಜಕಾರಣಿಗಳು ತನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆಂದು ಆರೋಪಿಸಿದ್ದಾನೆ. ದಾಳಿ ಹಿಂದಿನ ಸೂತ್ರದಾರಿಗಳು ಶಾಸಕ ಗುಂಡೂರಾವ್​​ ಸಂಸದ ಪಿಸಿ ಮೋಹನ್​ ವಿರುದ್ಧ ನಾಗ ದೂರಿದ್ದಾನೆ. ಅಲ್ಲದೆ, ಸಿಎಂ ಬುಡಕ್ಕೂ ನಾಗ ಬಾಂಬ್ ಇಟ್ಟಿದ್ದಾನೆ.

ಬ್ಲಾಕ್​ ಅಂಡ್​ ವೈಟ್​ ದಂಧೆಯಲ್ಲಿ ಭಾಗಿಯಾಗಿ ರೌಡಿನಾಗ ಪೊಲೀಸರ ದಾಳಿ ಸುಳಿವು ಸಿಗುತ್ತಿದ್ದಂತೆ ಪರಾರಿಯಾದ್ದು, ಇದೀಗ ರಾಜಕಾರಣಿಗಳ ವಿರುದ್ಧ ಬುಸ್​​ಗುಟ್ಟಿದ್ದಾನೆ. ಅಜ್ಞಾತ ಸ್ಥಳದಿಂದಲೇ ವಿಡೀಯೋ ಮಾಡಿ ಸುವರ್ಣ ನ್ಯೂಸ್​​ಗೆ ಕಳುಹಿಸಿದ ನಾಗ ರಾಜಕೀಯ ಕಾರಣಕ್ಕಾಗಿ ನನ್ನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದಾನೆ.

ಅಜ್ಞಾತ ಸ್ಥಳದಿಂದಲೇ ಬುಸುಗುತ್ತಿರವ ರೌಡಿ ನಾಗ, ನನ್ನ ಮೇಲೆ ರಾಜಕೀಯ ಕಾರಣಕ್ಕೆ ದಾಳಿ ನಡೆದಿದೆ ಎಂದು ಬುಸುಗುತ್ತಿದ್ದಾನೆ, ಸಂಸದ ಪಿ.ಸಿ.ಮೋಹನ್​ಗೆ ನನ್ನ ಮೇಲೆ ಹೊಟ್ಟೆ ಉರಿ ಇದ್ದು ಷಡ್ಯಂತ್ರ ನಡೆಸಿದ್ದಾರೆ. ಪಿ.ಸಿ. ಮೋಹನ್ ಇದೇ ನಿನ್ನ ಫೈನಲ್​ ಚುನಾವಣೆ, ಮುಂದಿನ ದಿನಗಳಲ್ಲಿ ಕೌನ್ಸಿಲರ್​ ಕೂಡ ಆಗಲ್ಲ ಎಂದು ಆರ್ಭಟಿಸಿದ್ದಾನೆ.

ಶಾಸಕ ದಿನೇಶ್​ ಗುಂಡೂರಾವ್​​ ವಿರುದ್ಧವೂ ಗಂಭೀರವಾಗಿ ಆರೋಪಿಸಿದ್ದು, ರಾಜಕೀಯ ಪ್ರತಿಸ್ಪರ್ಧಿ ಆಗಿರುವುದರಿಂದ ಷಡ್ಯಂತ್ರ ಮಾಡಿದ್ದಾರೆ. ಹಲವು ಬಾರಿ ನನ್ನ ವಿರುದ್ಧ ರೌಡಿ ಶೀಟ್​ ಹಾಕಿದ್ದು, ಇದೇ ದಿನೇಶ್​ ಅಂತ ಗುಡುಗಿದ್ದಾನೆ. ನಾಗ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ದಿನೇಶ್​ ಗುಂಡೂರಾವ್​, ನನಗೂ ರೌಡಿ ನಾಗನಿಗೂ ಯಾವುದೇ ಸಂಬಂಧವಿಲ್ಲ. ನಾಗ ಕಾಂಗ್ರೆಸ್​ ಪಕ್ಷಕ್ಕೆ ಸೇರಿಸುವುದಕ್ಕೆ ನಾನೇ ವಿರೋಧಿಸಿದ್ದೆ. ಆಧಾರ ರಹಿತ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ, ಸಿಎಂ ಸಿದ್ದರಾಮಯ್ಯ  ಅವರ ಸ್ಪೆಷಲ್ ಪಿಎ ಮಂಜುನಾಥ್, ಹಲವು ಬಾರಿ ಕರೆ ಮಾಡಿ ಬ್ಲಾಕ್ ಹಣವನ್ನು ವೈಟ್ ಮಾಡಲು ಕೇಳುತ್ತಿದ್ದರು. ಐಪಿಎಸ್​ ಅಧಿಕಾರಿಗಳ ಹಣವನ್ನು ಬದಲಾಯಿಸಿಕೊಡುವಂತೆ ಒತ್ತಾಯ ಮಾಡಿದ್ದರು ಎಂದಿದ್ದಾನೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ  ಮಂಜುನಾಥ್ ಎಂಬ ಪಿಎ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಭವಿಷ್ಯ ಹಾಳು ಮಾಡೋಕೆ ಪೊಲೀಸರ ಮೂಲಕ ದಾಳಿ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಸ್ಪರ್ಧಿಸಬಾರದೆಂದು ಷಡ್ಯಂತ್ರ ನಡೆಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಮಾತ್ರ ಸತ್ಯಾಂಶ ಹೊರ ಬರುತ್ತೆ ಅಂತ ಸವಾಲು ಎಸೆದಿದ್ದಾನೆ. ಆದರೆ, ರಾಜಕಾರಿಗಳು ಮಾತ್ರ ಆರೋಪ ಅಲ್ಲಗಳೆದಿದ್ದು, ನಮಗೂ ನಾಗ ಆರೋಪಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಸಮಗ್ರ ತನಿಖೆಯ ನಂತರವಷ್ಟೇ, ಸ್ಪಷ್ಟ ಚಿತ್ರ ಸಿಗಲಿದೆ.

Follow Us:
Download App:
  • android
  • ios