Asianet Suvarna News Asianet Suvarna News

ತಮಿಳುನಾಡು ಭದ್ರಕೋಟೆಗೆ ಬಿಜೆಪಿ ಎಂಟ್ರಿ.. ಸಿಎಂ ಗದ್ದುಗೆ ವಿವಾದ ಬಗೆಹರಿಸಿದ್ದೇ ಬಿಜೆಪಿ ನಾಯಕರು

ಜಯಲಲಿತಾ ನಿಧನದ ಬಳಿಕ ಅಣ್ಣಾಡಿಎಂಕೆಯಲ್ಲಿ ಉಂಟಾಗಿದ್ದ ನಾಯಕತ್ವ ವಿವಾದ ಬಗೆಹರಿಸಿದ್ದೇ ಕೇಂದ್ರ ಬಿಜೆಪಿ ನಾಯಕರು ಎಂಬ ಮಾಹಿತಿ ಸಿಕ್ಕಿದೆ.  ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಆಯ್ಕೆಗೆ ಸಚಿವರಾದ ತಂಬಿದೊರೈ, ಎಡಪ್ಪಾಡಿ ಪಳನಿಸ್ವಾಮಿ ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಜಯಲಲಿತಾ ನಿಧನರಾದ ಸುದ್ದಿ ಘೋಷಣೆಯಾದ ಬಳಿಕ ನಡೆದ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಬೇಡ ಎಂದು ಪ್ರಮುಖ ನಾಯಕರು ಪಟ್ಟು ಹಿಡಿದಿದ್ದರು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ಕೇಂದ್ರ ಸಚಿವ ವೆಂಕಯ್ಯನಾಯ್ಡು, ತಂಬಿದೊರೈ ಸೇರಿ ಪ್ರಮುಖ ಮುಖಂಡರ ಮನವೊಲಿಸಿ ಪನ್ನೀರ್ ಸೆಲ್ವಂ ಆಯ್ಕೆ ಸುಲಭಗೊಳಿಸಿದರು ಎಂದು ತಿಳಿದುಬಂದಿದೆ.

bjp leaders solves cm selection crisis in tamilnadu

ಚೆನ್ನೈ(ಡಿ.07): ತಮಿಳುನಾಡು ರಾಜ್ಯದಲ್ಲಿ ಹಲವು ದಶಕಗಳಿಂದ ಡಿಎಂಕೆ ಮತ್ತು ಅಣ್ಣಾಡಿಎಂಕೆ ಪಕ್ಷಗಳು ಮಾತ್ರ ಅಸ್ತಿತ್ವ ಉಳಿಸಿಕೊಂಡಿವೆ. ಬೇರಾವುದೇ ಪಕ್ಷ ಅಲ್ಲಿ ನೆಲೆಯೂರಲು ಸಾಧ್ಯವಾಗಿಲ್ಲ. ಇದೀಗ, ಬಿಜೆಪಿ ಪಕ್ಷ ತಮಿಳುನಾಡು ಭದ್ರಕೋಟೆಯೊಳಗೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಸುವರ್ಣ ನ್ಯೂಸ್`ಗೆ ಸಿಕ್ಕಿದೆ.

ಜಯಲಲಿತಾ ನಿಧನದ ಬಳಿಕ ಅಣ್ಣಾಡಿಎಂಕೆಯಲ್ಲಿ ಉಂಟಾಗಿದ್ದ ನಾಯಕತ್ವ ವಿವಾದ ಬಗೆಹರಿಸಿದ್ದೇ ಕೇಂದ್ರ ಬಿಜೆಪಿ ನಾಯಕರು ಎಂಬ ಮಾಹಿತಿ ಸಿಕ್ಕಿದೆ.  ಮುಖ್ಯಮಂತ್ರಿ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಆಯ್ಕೆಗೆ ಸಚಿವರಾದ ತಂಬಿದೊರೈ, ಎಡಪ್ಪಾಡಿ ಪಳನಿಸ್ವಾಮಿ ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಜಯಲಲಿತಾ ನಿಧನರಾದ ಸುದ್ದಿ ಘೋಷಣೆಯಾದ ಬಳಿಕ ನಡೆದ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಬೇಡ ಎಂದು ಪ್ರಮುಖ ನಾಯಕರು ಪಟ್ಟು ಹಿಡಿದಿದ್ದರು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ಕೇಂದ್ರ ಸಚಿವ ವೆಂಕಯ್ಯನಾಯ್ಡು, ತಂಬಿದೊರೈ ಸೇರಿ ಪ್ರಮುಖ ಮುಖಂಡರ ಮನವೊಲಿಸಿ ಪನ್ನೀರ್ ಸೆಲ್ವಂ ಆಯ್ಕೆ ಸುಲಭಗೊಳಿಸಿದರು ಎಂದು ತಿಳಿದುಬಂದಿದೆ.

ಜಯಲಲಿತಾ ಅಂತಿಮ ಸಂಸ್ಕಾರ ಮುಗಿಯುವವರೆಗೂ ವೆಂಕಯ್ಯನಾಯ್ಡು ಅಲ್ಲಿಯೇ ಇದ್ದರು. ಈಗಾಗಲೇ ಹಲವು ಎಐಡಿಎಂಕೆ ನಾಯಕರು  ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ಸುವರ್ಣ ನ್ಯೂಸ್`ಗೆ​ ಉನ್ನತ ಮೂಲಗಳ ಖಚಿತ ಮಾಹಿತಿ ಸಿಕ್ಕಿದೆ.