Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ; ಮುಂಬೈ, ಥಾಣೆ ಬಿಟ್ಟರೆ ಉಳಿದೆಡೆ ಶಿವಸೇನೆಗೆ ಮುಖಭಂಗ; ಕಾಂಗ್ರೆಸ್ ಬಹುತೇಕ ಧೂಳೀಪಟ

ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. 411 ಸ್ಥಾನಗಳನ್ನು ಪಡೆದು ನಂಬರ್ ಒನ್ ಸ್ಥಾನ ಪಡೆದಿದೆ.

bjp emerge victorious in maharashtra local elections

ಮುಂಬೈ(ಫೆ. 23): ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಕೇಸರೀ ಪಡೆ ಗೆಲುವಿನ ನಾಗಾಲೋಟ ಓಡಿದೆ. 10 ಮಹಾನಗರ ಪಾಲಿಕೆಗಳ ಪೈಕಿ ಎಂಟರಲ್ಲಿ ಬಿಜೆಪಿ ಪ್ರಚಂಡ ಸಾಧನೆ ಮಾಡಿದೆ. ಥಾಣೆ ಮತ್ತು ಮುಂಬೈನಲ್ಲಿ ಮಾತ್ರ ಶಿವಸೇನೆ ಉಸಿರಾಡಿದೆ. ನಾಗಪುರ್'ನಲ್ಲಿ ಶಿವಸೇನೆ ಶೂನ್ಯ ಸಂಪಾದನೆ ಮಾಡಿದೆ. ಕಾಂಗ್ರೆಸ್ ಪಕ್ಷ ಹಲವು ನಗರ ಪಾಲಿಕೆಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು, ಶರದ್ ಪವಾರ್ ನೇತೃತ್ವದ ಎನ್'ಸಿಪಿ ಪಕ್ಷವು ಥಾಣೆ, ಪುಣೆ ಮತ್ತು ಪಿಂಪ್ರಿ ಚಿಂಚವಾಡದಲ್ಲಿ ಮಾತ್ರ ಮಾನ ಉಳಿಸಿಕೊಂಡಿದೆ. ಉಳಿದೆಡೆ ಎರಡಂಕಿ ಮೊತ್ತವನ್ನೂ ಮುಟ್ಟಿಲ್ಲ. ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಇನ್ನೂ ಹೀನಾಯ ಫಲಿತಾಂಶ ಪಡೆದಿದೆ.

ಇನ್ನು, ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. 411 ಸ್ಥಾನಗಳನ್ನು ಪಡೆದು ನಂಬರ್ ಒನ್ ಸ್ಥಾನ ಪಡೆದಿದೆ.

ಚುನಾವಣೆ ನಡೆದ ನಗರಪಾಲಿಕೆಗಳು:
1)ಮುಂಬೈ, 2)ಥಾಣೆ, 3)ನಾಶಿಕ್, 4)ಪುಣೆ, 5)ಪಿಂಪರಿ ಚಿಂಚವಾಡ, 6)ಅಮರಾವತಿ, 7)ಉಲ್ಹಾಸ್'ನಗರ್, 8)ಅಕೋಲಾ, 9)ಸೋಲಾಪುರ್, 10)ನಾಗಪುರ್

ಪಕ್ಷಾವಾರು ಹೈಲೈಟ್ಸ್:

ಶಿವಸೇನೆ:
* ಥಾಣೆಯಲ್ಲಿ ಬಹುಮತ
* ಮುಂಬೈನಲ್ಲಿ ನಂ. 1
* ನಾಗಪುರದಲ್ಲಿ ವಾಶೌಟ್

ಬಿಜೆಪಿ:
* ನಾಶಿಕ್, ಪುಣೆ, ಪಿಂಪರಿ ಚಿಂಚವಾಡ, ಅಮರಾವತಿ, ಅಕೋಲಾ ಮತ್ತು ನಾಗಪುರ್'ನಲ್ಲಿ ಬಹುಮತ
* ಉಲ್ಲಾಸನಗರ್ ಮತ್ತು ಸೋಲಾಪುರ್'ನಲ್ಲಿ ನಂ. 1
* ಒಟ್ಟು 10 ನಗರಪಾಲಿಕೆಗಳ ಪೈಕಿ ಎಂಟರಲ್ಲಿ ಬಿಜೆಪಿ ಮೇಲುಗೈ
* ನಾಗಪುರ್ ನಗರಪಾಲಿಕೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಪ್ರಚಂಡ ಬಹುಮತ ಪಡೆದಿದೆ.

ಕಾಂಗ್ರೆಸ್:
* ಪಿಂಪರಿ ಚಿಂಚವಾಡದಲ್ಲಿ ವಾಶೌಟ್;
* ಉಲ್ಲಾಸನಗರ್'ನಲ್ಲಿ ಕೇವಲ 1 ಸ್ಥಾನ.

ಜಿಲ್ಲಾ ಪರಿಷತ್ ಚುನಾವಣೆ:
ಬಿಜೆಪಿ: 411
ಶಿವಸೇನೆ: 274
ಕಾಂಗ್ರೆಸ್: 306
ಎನ್'ಸಿಪಿ: 376
ಇತರೆ: 140

Follow Us:
Download App:
  • android
  • ios