Asianet Suvarna News Asianet Suvarna News

ತೇಜಸ್ವಿಗೆ ಡಿಮ್ಯಾಂಡು..! ದೂರು ಸಲ್ಲಿಸಲು ನೀಡಿದ್ದ ವಾಟ್ಸಾಪ್ ನಂಬರ್'ಗೆ ಬಂತು 44 ಸಾವಿರ ಮದುವೆ ಪ್ರೊಪೋಸಲ್ಸ್

ಕುತೂಹಲದ ವಿಷಯವೆಂದರೆ ಮದುವೆ ಪ್ರೊಪೋಸಲ್ ಕಳುಹಿಸಿದವರಲ್ಲಿ ಹೆಚ್ಚಿನವರು ಸ್ವತಃ ಹುಡುಗಿಯರೇ ಆಗಿದ್ದಾರೆ. ದೇಹದ ಎತ್ತರ, ಅಳತೆ, ಮೈಬಣ್ಣ ಇತ್ಯಾದಿ ವೈಯಕ್ತಿಕ ವಿವರಗಳನ್ನು ಈ ಹುಡುಗಿಯರು ತಿಳಿಸಿದ್ದಾರೆ.

bihar dy cm tejaswi gets 44000 marriage proposals on whatsapp

ಪಾಟ್ನಾ(ಅ. 21): ಬಿಹಾರದಲ್ಲೀಗ ಲಾಲೂ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸುದ್ದಿಯೇ ಹೆಚ್ಚು. 26 ವರ್ಷದ ಅವರು ಸದ್ಯ ಬಿಹಾರದ ಮೋಸ್ಟ್ ವಾಂಟೆಡ್ ಬ್ಯಾಚಿಲರ್ ಆಗಿದ್ದಾರೆ. ಇದಕ್ಕೆ ಸಾಕ್ಷಿ, ಸರಕಾರದ ವಾಟ್ಸಾಪ್ ನಂಬರ್'ಗೆ ಬಂದ ಮ್ಯಾರೇಜ್ ಪ್ರೊಪೋಸಲ್'ಗಳು. ಆಡಳಿತ ಯಂತ್ರ ಚುರುಕುಗೊಳಿಸುವ ಸಲುವಾಗಿ ತೇಜಸ್ವಿ ಯಾದವ್ ಅವರ ಮಾರ್ಗದರ್ಶನದಲ್ಲಿ ಲೋಕೋಪಯೋಗಿ ಇಲಾಖೆಯು ವಾಟ್ಸಾಪ್ ನಂಬರನ್ನು ಸಾರ್ವಜನಿಕರಿಗೆ ನೀಡಿತ್ತು. ರಸ್ತೆ ಸಮಸ್ಯೆಗಳಿದ್ದಲ್ಲಿ ಅದನ್ನು ಈ ನಂಬರ್'ಗೆ ಮಾಹಿತಿ ನೀಡಬೇಕೆಂದು ಕೋರಲಾಗಿತ್ತು.

ಬರೋಬ್ಬರಿ 47 ಸಾವಿರ ಮೆಸೇಜ್'ಗಳು ಈ ನಂಬರ್'ಗೆ ಹರಿದುಬಂದವು. ಆದರೆ, ಇದರಲ್ಲಿ ಬಹುಪಾಲು, ಅಂದರೆ 44 ಸಾವಿರದಷ್ಟು ಮೆಸೇಜ್'ಗಳು ತೇಜಸ್ವಿ ಯಾದವ್'ಗೆ ಬಂದ ಮದುವೆಯ ಪ್ರೊಪೋಸಲ್'ಗಳೇ ಆಗಿದ್ದವು. ಇನ್ನುಳಿದ 3 ಸಾವಿರ ಸಂದೇಶಗಳಷ್ಟೇ ರಸ್ತೆ ರಿಪೇರಿಗೆ ಸಂಬಂಧಪಟ್ಟಿವೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿತ್ತು ಮ್ಯಾರಿಯೇಜ್ ಪ್ರೊಪೋಸಲ್'ನಲ್ಲಿ..?
ಕುತೂಹಲದ ವಿಷಯವೆಂದರೆ ಮದುವೆ ಪ್ರೊಪೋಸಲ್ ಕಳುಹಿಸಿದವರಲ್ಲಿ ಹೆಚ್ಚಿನವರು ಸ್ವತಃ ಹುಡುಗಿಯರೇ ಆಗಿದ್ದಾರೆ. ದೇಹದ ಎತ್ತರ, ಅಳತೆ, ಮೈಬಣ್ಣ ಇತ್ಯಾದಿ ವೈಯಕ್ತಿಕ ವಿವರಗಳನ್ನು ಈ ಹುಡುಗಿಯರು ತಿಳಿಸಿದ್ದಾರೆ. ಸಾರ್ವಜನಿಕ ಕುಂದುಕೊರತೆ ವಿಚಾರಿಸಲು ನೀಡಿದ್ದ ಈ ವಾಟ್ಸಾಪ್ ನಂಬರು ಲಾಲೂ ಪುತ್ರನ ವೈಯಕ್ತಿಕ ನಂಬರ್ ಎಂದು ಭಾವಿಸಿ ಈ ಮೆಸೇಜ್'ಗಳನ್ನು ಕಳುಹಿಸಲಾಗಿತ್ತು.

ತಮಾಷೆಯಾಗಿರುವುದು, ಈ ಮೆಸೇಜ್'ಗಳ ಬಗ್ಗೆ ತೇಜಸ್ವಿ ಯಾದವ್ ನೀಡಿದ ಉತ್ತರ. ತಾನಿನ್ನೂ ಮದುವೆಯಾಗದೇ ಬ್ಯಾಚಿಲರ್ ಆಗಿರುವುದರಿಂದ ಬಚಾವಾದೆ. ಮದುವೆಯಾಗಿದ್ದರೆ ಭಾರೀ ಕಷ್ಟವಾಗುತ್ತಿತ್ತು ಎಂದು ತೇಜಸ್ವಿ ಯಾದವ್ ಹೇಳುತ್ತಾರೆ.

ಲಾಲೂ ಅವರ ಇಬ್ಬರು ಪುತ್ರರಲ್ಲಿ ತೇಜಸ್ವಿ ಯಾದವ್ ಕಿರಿಯರು. ಇವರ ಅಣ್ಣ ತೇಜ ಪ್ರತಾಪ್ ಯಾದವ್ ಕೂಡ ಅವಿವಾಹಿತರಾಗಿದ್ದಾರೆ. ಇವರಿಬ್ಬರು ಸದ್ಯ ಬಿಹಾರದ ಮೋಸ್ಟ್ ಎಲಿಜಬಲ್ ಬ್ಯಾಚಿಲರ್ ಎನಿಸಿದ್ದಾರೆ.

Follow Us:
Download App:
  • android
  • ios