ಬಿಗ್'ಬಾಸ್ -5ಕ್ಕೆ ಸ್ಪರ್ಧಿಗಳ ಭೇಟೆ ಶುರು: ವೀಕ್ಷಕರಿಗಾಗಿ ಫುಲ್ ಮಸ್ತಿ ಸುದ್ದಿ
news
By Suvarna Web Desk | 06:16 PM May 16, 2017

ಕಳೆದ 4 ಆವೃತ್ತಿ'ಗಳಲ್ಲಿ ಸಿನಿಮಾ, ಕಿರುತೆರೆ ಒಳಗೊಂಡು ವಿವಿಧ ವಲಯದ ಗಣ್ಯರು ಬೆಗ್'ಬಾಸ್ ಮನೆಯೊಳಗೆ ಹೋಗುತ್ತಿದ್ದರು.

ಬಿಗ್'ಬಾಸ್ 4ನೇ ಆವೃತ್ತಿ ಮುಗಿದು ಕಿರಿಕ್ ಕೀರ್ತಿ ಹಾಗೂ ಪ್ರಥಮ್ ಅವರ ಸ್ಪರ್ಧೆಯಲ್ಲಿ ವೀಕ್ಷಕರ ಬೆಂಬಲದೊಂದಿಗೆ ಪ್ರಥಮ್ ಅಮೋಘವಾಗಿ ಜಯಗಳಿಸಿದ್ದರು.

ಈಗ ಮತ್ತೆ 5ನೇ ಆವೃತ್ತಿಯ ಭೇಟೆ ಶುರುವಾಗಿದೆ. ಈ ಬಾರಿ ಸ್ಟಾರ್'ಗಳ ಜೊತೆ ಸಾಮಾನ್ಯರಿಗೂ ಅವಕಾಶವಿದೆ. ಇದನ್ನು ಸ್ವತಃ ಕನ್ನಡ ಬಿಗ್'ಬಾಸ್'ನ ನಿರ್ದೇಶಕರಾದ ಪರಮೇಶ್ವರ್ ಗುಂಡ್ಕಲ್ ಸುಳಿವು ನೀಡಿದ್ದಾರೆ. ಕಳೆದ 4 ಆವೃತ್ತಿ'ಗಳಲ್ಲಿ ಸಿನಿಮಾ, ಕಿರುತೆರೆ ಒಳಗೊಂಡು ವಿವಿಧ ವಲಯದ ಗಣ್ಯರು ಬೆಗ್'ಬಾಸ್ ಮನೆಯೊಳಗೆ ಹೋಗುತ್ತಿದ್ದರು.

ಈ ಆವೃತ್ತಿಯಲ್ಲಿ ಗಣ್ಯರ ಜೊತೆ ಸಾಮಾನ್ಯರು ಬಿಗ್'ಬಾಸ್ ಮನೆಗೆ ಹೋಗಬಹುದು. ನಿರ್ದೇಶಕರಾದ ಪರಮೇಶ್ವರ್ ಗುಂಡ್ಕಲ್ ಇನ್'ಸ್ಟಾ'ಗ್ರಾಂ ಖಾತೆಯಲ್ಲಿ ಸುದೀಪ್ ಜೊತೆಯಿರುವ ಚಿತ್ರದೊಂದಿಗೆ Bigg Boss house of common people. Would that interest you? ಎಂಬುದಾಗಿ ಪೋಸ್ಟ್ ಮಾಡಿದ್ದಾರೆ.

ಈ ಸುಳಿವೇ ಸಾಮಾನ್ಯರು ಸ್ಪರ್ಧಿಸಲು ಅವಕಾಶ'ವಿದೆ ಎಂದರ್ಥ. ಹಾಗಾದರೆ 5ನೇ ಆವೃತ್ತಿಯ ಬಿಗ್'ಬಾಸ್ ಮನೆಯಲ್ಲಿ ಗಣ್ಯರೊಂದಿಗೆ ಸಾಮಾನ್ಯರು ಜಟಾಪಟಿ ನಡೆಸಬಹುದು.   

 

Show Full Article