Asianet Suvarna News Asianet Suvarna News

ತನ್ನ ಸ್ವಾಧೀನದ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡಲು ಬಿಡಿಎ ಆದೇಶ

ರಾಜಾಜಿ ನಗರದ ವೆಸ್ಟ್ ಅಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಬಡಾವಣೆ, ನಾಗರಭಾವಿ ಮೊದಲ ಹಂತ, ಬನಶಂಕರಿ, ಬಿಟಿಎಂ ಲೇಔಟ್'​ನಲ್ಲಿ ಒಟ್ಟು 2888 ಎಕರೆಯನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಈಗ ಸ್ವಾಧೀನ ಪಡಿಸಿಕೊಂಡ ಭೂಮಿಯ ಪತ್ತೆ ಕಾರ್ಯಕ್ಕೆ ಬಿಡಿಎ ಮುಂದಾಗಿದೆ.

bda chairman orders to allot sites on acquired plots

ಬೆಂಗಳೂರು(ಜೂನ್ 22): ಬಿಡಿಎ ಸ್ವಾಧೀನ ಪಡಿಸಿಕೊಂಡ ಸಾವಿರಾರು ಎಕರೆ ಪ್ರದೇಶವನ್ನು ಬಳಕೆ ಮಾಡದ ಹಿನ್ನೆಲೆಯಲ್ಲಿ, ಆ ಭೂಮಿಯಲ್ಲಿ ನಿವೇಶನಗಳನ್ನ ಹಂಚಿಕೆ ಮಾಡುವಂತೆ ಬಿಡಿಎ ಅಧ್ಯಕ್ಷ ಕೆ. ವೆಂಕಟೇಶ್ ಆದೇಶಿಸಿದ್ದಾರೆ. ಬಡಾವಣೆ ನಿರ್ಮಾಣ ಉದ್ದೇಶಕ್ಕೆ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಗೆ ಖಾಸಗಿಯವರು ಬೇಲಿ ಹಾಕಿದ್ದಾರೆ. ಹೀಗಾಗಿ ಸರ್ವೇ ನಡೆಸಿ ಸೂಕ್ತ ಭದ್ರತೆ ತೆಗೆದುಕೊಳ್ಳುವಂತೆ ಹಾಗೂ ಇನ್ನು 15 ದಿನದೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜಾಜಿ ನಗರದ ವೆಸ್ಟ್ ಅಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಬಡಾವಣೆ, ನಾಗರಭಾವಿ ಮೊದಲ ಹಂತ, ಬನಶಂಕರಿ, ಬಿಟಿಎಂ ಲೇಔಟ್'​ನಲ್ಲಿ ಒಟ್ಟು 2888 ಎಕರೆಯನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಈಗ ಸ್ವಾಧೀನ ಪಡಿಸಿಕೊಂಡ ಭೂಮಿಯ ಪತ್ತೆ ಕಾರ್ಯಕ್ಕೆ ಬಿಡಿಎ ಮುಂದಾಗಿದೆ.

Follow Us:
Download App:
  • android
  • ios