Asianet Suvarna News Asianet Suvarna News

ಕೆರೆಗಳ ಪುನರುಜ್ಜೀವನಕ್ಕೆ ಆರ್ಟ್ ಆಫ್ ಲೀವಿಂಗ್ ಕಾಯಕಲ್ಪ

ಕರ್ನಾಟಕದ ಬಹುತೇಕ ಭಾಗಗಳಲ್ಲಿ  ನೀರಿನ  ಅಭಾವ  ಸೃಷ್ಟಿಯಾಗಿದೆ.  ಈ ಸಂದರ್ಭ ಕೆರೆ, ಕಟ್ಟೆಗಳು ಒಣಗಿ ನಿಂತಿವೆ. ಇಂಥಾ ಸಂದರ್ಭದಲ್ಲಿ  ಕಳೆದ ಕೆಲವು ವರ್ಷಗಳಿಂದ ಆರ್ಟ್​ ಆಪ್ ಲೀವಿಂಗ್ ಸಂಸ್ಥೆ ನೀರಿನ ಮೂಲಗಳಾದ ಕೆರೆ, ನದಿಗಳನ್ನು  ಪುನರುಜ್ಜೀವನಗೊಳಿಸುವ  ಕಾರ್ಯಕ್ಕೆ ಮುಂದಾಗಿದೆ. ಅಂತರ್ಜಲದ ನೀರಿನ ಮಟ್ಟ ಹೆಚ್ಚಿಸಿ  ಕರ್ನಾಟಕದ ನೀರಿನ ಅಭಾವದ ಸಮಸ್ಯೆಯನ್ನು ನೀಗಿಸಲು ಮುಂದಾಗಿದೆ.

Art Of Living Ready to Rejuvenate Tanks

ಬೆಂಗಳೂರು (ಆ.12): ಕರ್ನಾಟಕದ ಬಹುತೇಕ ಭಾಗಗಳಲ್ಲಿ  ನೀರಿನ  ಅಭಾವ  ಸೃಷ್ಟಿಯಾಗಿದೆ.  ಈ ಸಂದರ್ಭ ಕೆರೆ, ಕಟ್ಟೆಗಳು ಒಣಗಿ ನಿಂತಿವೆ. ಇಂಥಾ ಸಂದರ್ಭದಲ್ಲಿ  ಕಳೆದ ಕೆಲವು ವರ್ಷಗಳಿಂದ ಆರ್ಟ್​ ಆಪ್ ಲೀವಿಂಗ್ ಸಂಸ್ಥೆ ನೀರಿನ ಮೂಲಗಳಾದ ಕೆರೆ, ನದಿಗಳನ್ನು  ಪುನರುಜ್ಜೀವನಗೊಳಿಸುವ  ಕಾರ್ಯಕ್ಕೆ ಮುಂದಾಗಿದೆ. ಅಂತರ್ಜಲದ ನೀರಿನ ಮಟ್ಟ ಹೆಚ್ಚಿಸಿ  ಕರ್ನಾಟಕದ ನೀರಿನ ಅಭಾವದ ಸಮಸ್ಯೆಯನ್ನು ನೀಗಿಸಲು ಮುಂದಾಗಿದೆ.

ದಶಕಗಳ ಹಿಂದೆ ಚಿಕ್ಕಮಗಳೂರಿನ ವೇದಾವತಿ ನದಿ ಜಿಲ್ಲೆಯ ಜನರಿಗೆ ಜೀವನಾಡಿಯಾಗಿತ್ತು. ಆದರೆ  ಇತ್ತೀಚಿಗೆ  ವೇದಾವತಿ ನದಿಯಲ್ಲಿ  ನೀರಿನ  ಕುರುಹು ಸಹ  ಸಿಗುತ್ತಿಲ್ಲ.  ಅಷ್ಟರ ಮಟ್ಟಿಗೆ  ನದಿ ಬತ್ತಿ ಹೋಗಿದೆ. ಅದರಲ್ಲೂ  ಜನರಿಗೆ  ಕುಡಿಯಲು ಸಹ  ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಾ ಭೀಕರ  ಚಿತ್ರಣವನ್ನು  ಮನ ಗಂಡ ಆರ್ಟ್​ ಆಫ್ ಲೀವಿಂಗ್ ಸಂಸ್ಥೆ  ನದಿಗಳ ಪುನಶ್ಚೇತನಕ್ಕೆ ಮುಂದಾಗಿದೆ. ಅದರಲ್ಲೂ  ಪ್ರಮುಖವಾಗಿ  ಚಿಕ್ಕಮಗಳೂರಿನ  ವೇದಾವತಿ, ಕೋಲಾರದ ಪಾಲಾರ್, ನೆಲಮಂಗಲದಲ್ಲಿ  ಕುಮುದ್ವತಿ ನದಿಗಳ ಪುನಶ್ಚೇತನಕ್ಕೆ  ನಿರ್ಧರಿಸಿದೆ.  ನಾಲ್ಕು ಹಂತಗಳಲ್ಲಿ  ವೇದಾವತಿ ನದಿ  ಜೀರ್ಣೋದ್ಧಾರಕ್ಕೆ  ಆರ್ಟ್​ ಆಫ್​ ಲೀವಿಂಗ್​ ಸಂಸ್ಥೆ  ಯೋಜನೆಯನ್ನು  ರೂಪಿಸಿದೆ. ಅದರಲ್ಲಿ  ಈಗಾಗಲೇ ಫೇಸ್​ 1 ಕಾಮಗಾರಿ  ಮುಕ್ತಾಯವಾಗಿದ್ದು , ಲಕ್ಯಾ ಹೋಬಳಿಯಲ್ಲಿ  ಇದರ ಯಶಸ್ಸು  ಕಾಣಲಾಗಿದೆ.  ಪೋಲಾಗುವ ನೀರನ್ನೇ  ಬಳಸಿಕೊಂಡು ಕೆರೆಗಳ  ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. 

ಸೈನ್​ಟಿಫಿಕ್​ ಆಗಿ ಆ್ಯಕ್ಷನ್  ಪ್ಲಾನ್​ ನಿರ್ಮಿಸಿಕೊಂಡು  ಉಪಗ್ರಹದ ಮಾಹಿತಿ ಚಿತ್ರಗಳ ಸಹಾಯದಿಂದ ನೀರನ್ನು  ಸಂಗ್ರಹಿಸುವ  ಕಾರ್ಯವನ್ನು  ಆರ್ಟ್​ ಆಫ್​ ಲೀವಿಂಗ್​ನ  ಸಂಸ್ಥೆ  ಮಾಡಿದೆ.  

ವ್ಯರ್ಥವಾಗಿ ಹಳ್ಳಕೊಳ್ಳ ಸೇರುವ ನೀರಿಗೆ  ಬೌಲ್ಡರ್​ ಚೆಕ್​ಗಳನ್ನು  ನಿರ್ಮಿಸಿ  ರಭಸವಾಗಿ  ಹರಿಯುವ  ನೀರಿನ ಮಟ್ಟವನ್ನು  ತಗ್ಗಿಸಲಾಗುತ್ತೆ.  ನಂತರ ನೆಲದ ಆಳದಲ್ಲಿ  ಎಲ್ಲಿ ಹೆಚ್ಚು ಅಂತರ್​ ಜಲಗಾರದಲ್ಲಿ ಮೃದು ಶಿಲೆ ಇರುತ್ತೋ ಅಲ್ಲೆಲ್ಲಾ  ನೀರು ಸೇರಿದಾಗ ಅಲ್ಲಿ ನೀರನ್ನು ಕೆಳಗೆ ಇಳಿಸುವಂತಹ ಇಂಗು ಬಾವಿಗಳನ್ನು  ನಿರ್ಮಿಸಲಾಗುತ್ತೆ.  ಇಂಗು ಬಾವಿಗಳು ಕೆಳಗೆ ಹೋಗುವ  ನೀರನ್ನು  ನೆಲದ ಆಳಕ್ಕೆ ಇಳಿಸಿ ಅಂತರ್ಜಲ ಮಟ್ಟವನ್ನು  ಮೇಲಕ್ಕೆ ಎತ್ತುತ್ತೆ . ಹಾಗೆ ನಿಧಾನವಾಗಿ ಏರುವ ನೀರು ಹಳ್ಳಗಳ ಮೂಲಕ ಹರಿದು ಕೆರೆಗಳಿಗೆ ಸೇರುತ್ತೆ. ಎಲ್ಲಿಯೂ  ನೀರು  ವೇಸ್ಟ್​ ಆಗದೆ  ಕೆರೆಗಳಲ್ಲಿ ನ ಅಂತರ್ಜಲ ಮಟ್ಟ ಹೆಚ್ಚಾಗುತ್ತೆ. ಇದರಿಂದ ಕೆರೆ ಬತ್ತುವುದಾಗಲೀ , ನೀರು ಆವಿಯಾಗುವುದಾಗಲೀ  ಆಗುವುದಿಲ್ಲ.    

 ಬೌಲ್ಡರ್ ಚೆಕ್ , ಇನ್​ಜೆಕ್ಷನ್  ಬೋರ್​ ವೆಲ್ , ರಿಚಾರ್ಜ್​ ವೆಲ್ ,  ವಾಟರ್ ಪೂಲ್ ಗಳೆಂಬ  ವೈಜ್ಞಾನಿಕ  ವಿಧಾನದ ಮೂಲಕ ಕೆರೆಗಳ ಪುನರ್​ಶ್ಚೇತನಕ್ಕೆ  ಆರ್ಟ್​ ಲೀವಿಂಗ್ ಮುಂದಾಗಿದ್ದು , ಚಿಕ್ಕಮಗಳೂರಿನ ಲಕ್ಯಾ ಹೋಬಳಿಯ  ಕಳಸಾಪುರ , ಸಿಂದಿಗೆರೆ ಗ್ರಾಮಗಳಲ್ಲಿ ಕೆರೆಗಳ ಅಭಿವೃದ್ಧಿಯನ್ನು  ಮಾಡಲಾಗಿದೆ. ಇದರ ಮೊದಲ ಹಂತದ ಯಶಸ್ಸನ್ನು  ವೀಕ್ಷಿಸಲು  ಸ್ವತಃ  ಆರ್ಟ್​ ಆಫ್​ ಲೀವಿಂಗ್​ ಸಂಸ್ಥೆಯ  ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರೇ ಖುದ್ದು  ಕಳಸಾಪುರ ಹಾಗೂ ಸಿಂದಿಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದರು.

ಚಿಕ್ಕಮಗಳೂರಿನಲ್ಲಿ  ಈಗಾಗಲೇ  ಶೇ 40 ರಷ್ಟು  ಕೆಲಸ ಪೂರ್ಣ ಗೊಂಡಿದ್ದು , ನೀರಿನ ಮಟ್ಟ ಏರಲು  ಆರಂಭಿಸಿದೆ.  ಜಿಯೋ ಹೈಡ್ರಾಲಜಿ ತಜ್ಞರು, ಸಿವಿಲ್ ಎಂಜಿನಿಯರ್​ಗಳನ್ನು ಒಳಗೊಂಡ ತಂಡ ಉಪಗ್ರಹ ಮೂಲಕ ನೀರನ್ನು  ಶೇಖರಿಸುವ ಯೋಜನೆಯನ್ನು  ಅಭಿವೃದ್ಧಿ ಪಡಿಸಿದ್ದಾರೆ.  ವರ್ಷವಿಡೀ  ಹರಿಯುತ್ತಿದ್ದ  ವೇದಾವತಿ ನದಿಯು ಈಗ ಒಣಗಿ ಹೋಗಿದ್ದು , ಕೇವಲ ಮಳೆಗಾಲದಲ್ಲಿ  ಮಾತ್ರ ಹರಿಯುತ್ತೆ.  ಕಳೆದ 20 ವರ್ಷಗಳಿಂದ ಅಂತರ್ಜಲ ನೀರಿನ ಹೆಚ್ಚು ಬಳಕೆ , ನಗರೀಕರಣ  ಮತ್ತು ಕಾಡಿನ  ನಾಶದಿಂದಾಗಿ  ವೇದಾವತಿ ನದಿ ಸಾಯುತ್ತಿದೆ. ಹೀಗೆ ಅವಸಾದ ಅಂಚಿನಲ್ಲಿರುವ  ವೇದಾವತಿಯ  ಪುನಶ್ಚೇತ ಮಾಡುವ  ಕಾರ್ಯಕ್ಕೆ  ಆರ್ಟ್​ ಆಫ್​ ಲೀವಿಂಗ್​ ಸಂಸ್ಥೆ ಮುಂದಾಗಿದ್ದು , ಕೆರೆಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಿದೆ.

Follow Us:
Download App:
  • android
  • ios