Asianet Suvarna News Asianet Suvarna News

ವಿದೇಶದಲ್ಲಿ ನೆಲೆಯೂರುವ ಮುನ್ನ ಆರ್ಥಿಕ ನಿರ್ವಹಣೆ ನಿಭಾಯಿಸುವ ಮಾರ್ಗಗಳು

ಭಾರತದಲ್ಲಿ ನಿಮಗೆ ಬಾಡಿಗೆ, ಬಡ್ಡಿ, ಡೆವಿಡೆಂಡ್ಸ್ ಇತರೆ ಯಾವುದೇ ಆದಾಯ ಬರುತ್ತಿದ್ದರೆ ಅದನ್ನು ಅವನ್ನು ಎನ್'ಆರ್'ಒ ಖಾತೆಗೆ ಮಾರ್ಪಡಿಸಿ. ನೀವು ವಿದೇಶಕ್ಕೆ ಹೋದ ನಂತರವೂ ಭಾರತಕ್ಕೆ ಹಣ ಕಳಿಸಬೇಕೆಂದಿದ್ದರೆ ಅನಿವಾಸಿ ಭಾರತೀಯ ಖಾತೆಯ ಮೂಲಕ ವರ್ಗಾಯಿಸಿ. ಎನ್'ಆರ್'ಇ ಹಾಗೂ ಎನ್'ಆರ್'ಒ ಖಾತೆಗಳನ್ನು ಪಡೆದುಕೊಳ್ಳಬೇಕಾದರೆ ಗ್ರಾಹಕರು ತಿಳಿದಿರಬೇಕಾದ ನಿಯಮಗಳ ಅನುಸರಣೆಗೆ ಅನುಗುಣವಾಗಿರುತ್ತವೆ ಎಂಬುದನ್ನು ಖಚಿತಪಡಿಸಿಕೊಂಡು ಅದಕ್ಕೆ ಸಂಬಂಧಿತ ದಾಖಲೆಗಳನ್ನು ನೀವು  ಸಲ್ಲಿಸಬೇಕಾಗುತ್ತದೆ.

Are you settling abroad How to manage your finances

ಇತ್ತೀಚಿನ ದಿನಗಳಲ್ಲಿ ತಮ್ಮ ಹಲವು  ಉದ್ದೇಶಗಳ ಕಾರಣದಿಂದ ನಾಗರಿಕರು ವಿದೇಶಕ್ಕೆ ತೆರಳುವುದು ಸಾಮಾನ್ಯವಾಗಿದೆ. ವಿದೇಶದಲ್ಲಿ ನೆಲೆಯೂರುವುದು ಸಂತಸದ  ವಿಚಾರವಾದರೂ ನಿಮ್ಮ ಆರ್ಥಿಕ ವಿಚಾರಗಳ ವಿಷಯ ಬಂದಾಗ ಕೆಲವು ಕ್ಲಿಷ್ಟತೆಗಳಿರುತ್ತವೆ. ಆದ ಕಾರಣ ಕೆಲವು ಹಣಕಾಸು ವಿಷಯಗಳಲ್ಲಿ ಕಾಳಜಿ ವಹಿಸುವುದು ನಿಮ್ಮ ಹಿತದೃಷ್ಟಿಯಿಂದ ಎಚ್ಚರಿಕೆಯ ಮಾರ್ಗವಾಗಿದೆ. ದೇಶ ಬಿಡುವ ಮುನ್ನ ನೀವು ಕೆಳಗಿನ ಕೆಲವು ಆರ್ಥಿಕ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.

ಖಾತೆಯನ್ನು ಮುಚ್ಚಿರಿ ಅಥವಾ ವಿದೇಶ ಖಾತೆಯೊಂದಿಗೆ ಮಾರ್ಪಡಿಸಿ

ನೀವು ವಿದೇಶದಲ್ಲಿ ವಾಸಿಸುವ ದಿನದಿಂದ ನಿಮ್ಮನ್ನು ಅನಿವಾಸಿ ಭಾರತೀಯ ಎಂದು ಮಾನ್ಯ ಮಾಡಲಾಗುತ್ತದೆ. ನಿಮ್ಮ ಉಳಿತಾಯ ಖಾತೆ , ಸ್ಥರ ಠೇವಣಿಗಳು, ಮರುಗಳಿಸುವ ಖಾತೆಗಳನ್ನು ಮುಚ್ಚಿರಿ ಅಥವಾ ಅನಿವಾಸಿ ಖಾತೆಯೊಂದಿಗೆ(ಎನ್'ಆರ್'ಒ) ಬದಲಾಯಿಸಿ.

ಭಾರತದಲ್ಲಿ ನಿಮಗೆ ಬಾಡಿಗೆ, ಬಡ್ಡಿ, ಡೆವಿಡೆಂಡ್ಸ್ ಇತರೆ ಯಾವುದೇ ಆದಾಯ ಬರುತ್ತಿದ್ದರೆ ಅದನ್ನು ಅವನ್ನು ಎನ್'ಆರ್'ಒ ಖಾತೆಗೆ ಮಾರ್ಪಡಿಸಿ. ನೀವು ವಿದೇಶಕ್ಕೆ ಹೋದ ನಂತರವೂ ಭಾರತಕ್ಕೆ ಹಣ ಕಳಿಸಬೇಕೆಂದಿದ್ದರೆ ಅನಿವಾಸಿ ಭಾರತೀಯ ಖಾತೆಯ ಮೂಲಕ ವರ್ಗಾಯಿಸಿ. ಎನ್'ಆರ್'ಇ ಹಾಗೂ ಎನ್'ಆರ್'ಒ ಖಾತೆಗಳನ್ನು ಪಡೆದುಕೊಳ್ಳಬೇಕಾದರೆ ಗ್ರಾಹಕರು ತಿಳಿದಿರಬೇಕಾದ ನಿಯಮಗಳ ಅನುಸರಣೆಗೆ ಅನುಗುಣವಾಗಿರುತ್ತವೆ ಎಂಬುದನ್ನು ಖಚಿತಪಡಿಸಿಕೊಂಡು ಅದಕ್ಕೆ ಸಂಬಂಧಿತ ದಾಖಲೆಗಳನ್ನು ನೀವು  ಸಲ್ಲಿಸಬೇಕಾಗುತ್ತದೆ.

ಹಾಲಿಯಿರುವ ಸಾಲಗಳನ್ನು ತೀರಿಸಬೇಕು

ದೇಶ ಬಿಡುವ ಮುನ್ನ ಹಾಲಿಯಿರುವ ಸಾಲಗಳನ್ನು ಅಥವಾ ಕ್ರೆಡಿಟ್ ಕಾರ್ಡ್ ಬಿಲ್'ಗಳು ತೀರಿಸಿಬೇಕಾಗುವುದು ಅತಿ ಮುಖ್ಯವಾಗಿರುತ್ತದೆ.

ಎಲ್ಲ ವಿಮೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವ ಅಗತ್ಯವಿಲ್ಲ

ಹಲವು ವೈಯುಕ್ತಿಕ ಜೀವ ಹಾಗೂ ಆರೋಗ್ಯ ವಿಮೆಗಳ ಯೋಜನೆಗಳು ವಿದೇಶಕ್ಕೆ ಹೋಗುವ ಮುನ್ನವೆ ಕೊನೆಗೊಳ್ಳುತ್ತವೆ. ವಿದೇಶದಲ್ಲಿ ನೂತನ ವಿಮೆಗಳನ್ನು ಮಾಡಿಸುವವರೆಗೂ ಅವು ಅಸುರಕ್ಷಿತವಾಗಿರುತ್ತವೆ. ನೀವು ಪ್ರೀಮಿಯಂ'ಗಳನ್ನು ಮುಂದುವರಿಸಬೇಕಾದರೆ ನಿಮ್ಮ ಬ್ಯಾಂಕ್'ಗಳಿಗೆ  ಸಕಾಲಕ್ಕೆ ಇಸಿಎಸ್ ನೀಡುವುದು ಕಡ್ಡಾಯವಾಗಿರುತ್ತದೆ. ಕೆಲವೊಂದು  ಆರೋಗ್ಯ ವಿಮೆಗಳು ವಾಪಸ್ ಬಂದಾಗ ಮುಂದುವರಿಸುವ ಅವಕಾಶವೂ ಇರುತ್ತದೆ. ನೀವು ನೆಲೆಗೊಳ್ಳುವ ದೇಶದಲ್ಲಿ ಯೋಜನೆ ಮಾನ್ಯಗೊಳ್ಳುವುದಾದರೆ ನಿಮ್ಮ ವಿಮಾದಾರರೊಂದಿಗೆ ಪರಿಶೀಲಿಸಬಹುದು.

ವಿಶ್ವಾಸಾರ್ಹ ವ್ಯಕ್ತಿಗೆ ಪವರ್ ಆಫ್ ಅಟಾರ್ನಿ ಹಸ್ತಾಂತರಿಸಿ

ಹಲವು ಖಾತೆಗಳನ್ನು ಸ್ಥಗಿತಗೊಳಿಸಲು ನೀವು ನಿರ್ಧರಿಸಿದ್ದರೂ ಕೆಲವೊಂದು ಆರ್ಥಿಕ ವ್ಯವಹಾರಗಳು ನಿಮ್ಮಲ್ಲೆ ಉಳಿದುಕೊಂಡಿರುತ್ತದೆ. ಇಂತಹ ಆರ್ಥಿಕ ವ್ಯವಹಾರಗಳ ಪವರ್ ಆಫ್ ಅಟಾರ್ನಿ'ಯನ್ನು ನೀವು ಅತೀ ನಂಬುವ ವ್ಯಕ್ತಿಗಳಿಗೆ ಹಸ್ತಾಂತರಿಸಿ. ಅವರು ನಿಮ್ಮ ಹೆಸರಿನ ಪರವಾಗಿ ಭಾರತದಲ್ಲಿ ಕಾನೂನುಬದ್ಧವಾಗಿ ಆರ್ಥಿಕ ವ್ಯವಹಾರಗಳನ್ನು ಮುಂದುವರಲು ಸಾಧ್ಯವಾಗುತ್ತದೆ.

ಒಂದು ಬಂಡವಾಳ ಹೂಡಿಕೆಯ ಯೋಜನೆ ಖಾತೆಯನ್ನು ತೆರೆಯಿರಿ

ನೀವು ಒಂದು ಬಂಡವಾಳ ಹೂಡಿಕೆ ಯೋಜನೆಯ ಖಾತೆಯನ್ನು ತೆರೆಯುವ(ಪಿಐಎಸ್) ಮೂಲಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆದ್ಯಾಗಿಯು, ಷೇರು'ಗಳನ್ನು ಮಾರಲು ಹಾಗೂ ಖರೀದಿಸಲು ಒಂದು ಖಾತೆಯನ್ನು ಮಾತ್ರ ತೆರೆಯಬೇಕಾಗುತ್ತದೆ. ಆದರೆ ನೆನಪಿಡಿ ಎನ್'ಆರ್'ಐ'ಗಳಿಗೆ ಷೇರು ವ್ಯವಹಾರ ಅಥವಾ ಸಣ್ಣ ವಹಿವಾಟು ಮಾಡಲು ಅನುಮತಿಯಿರುವುದಿಲ್ಲ. ಮ್ಯೂಚುವೆಲ್ ಫಂಡ್ ಹೂಡಿಕೆಗಳಿಗಾಗಿ, ಎನ್'ಆರ್'ಒ ಖಾತೆಯಿಂದ ಆಯಾ ಮ್ಯೂಚುವೆಲ್ ಫಂಡ್'ಗಳು ಹೂಡಿಕೆಯನ್ನು ಅನುಮತಿಸುತ್ತವೆಯೇ ಎಂದು ಪರಿಶೀಲಿಸಿ.

ನಿಮ್ಮ ಡಿಮ್ಯಾಟ್ ಖಾತೆಯನ್ನು ಮುಚ್ಚಲೇಬೇಕಾಗುತ್ತದೆ. ನೀವು ಎನ್'ಆರ್'ಐ ಆಗಿ PPF, NSC, NPS ನಂತಹ ಸರ್ಕಾರದ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡಲಾಗುವುದಿಲ್ಲ ಗಮನಿಸುವುದು ಮುಖ್ಯವಾಗಿದೆ. ಆದ್ಯಾಗಿಯು ನಿಮ್ಮ ಬಳಿ ಈಗಾಗಲೆ ಇಂತಹ ಖಾತೆಗಳಿದ್ದರೆ ಹೂಡಿಕೆ ಮಾಡಲು ಮುಂದುವರಿಯಬಹುದು.

ತೆರಿಗೆಯನ್ನು ನಿರ್ಲಕ್ಷಿಸಬೇಡಿ

ನೀವು ಭಾರತದಲ್ಲಿ ಉಳಿದಿದ್ದ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಿದ ದಿನಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಭಾರತೀಯ ನಾಕರಿಕನಿಂದ ಅನಿವಾಸಿ ಭಾರತೀಯ ನಿವಾಸಿಯಾಗುವವರೆಗೂ ಸುಗಮವಾಗಿ ಖಚಿತಪಡಿಸಿಕೊಳ್ಳುವರೆಗೂ ನಿಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ತೆರಿಗೆ ಸಮಾಲೋಚಕರನ್ನು ನೇಮಿಸಿಕೊಳ್ಳಿ.

ನೀವು ವಿದೇಶಕ್ಕೆ ಹೋಗುವ ಮುನ್ನ, ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ಜಾಗೃತಿವಹಿಸಿ ಜೊತೆಗೆ ಎಲ್ಲವೂ ಸುಗಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ಪರಿಶೀಲನಾಪಟ್ಟಿ ಮಾಡಿ.

ಲೇಖಕರು: ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್'ಬಜಾರ್.ಕಾಂ 

 

Follow Us:
Download App:
  • android
  • ios