Asianet Suvarna News Asianet Suvarna News

ರೈತರಿಗೆ ಶಕ್ತಿಯಾದ ಅನಿತಾ ರೆಡ್ಡಿ : ಅಸಾಮಾನ್ಯ ಕನ್ನಡಿಗ

ಮೂಲತಃ ಕೋಲಾರದವರಾದ, ಬೆಂಗಳೂರಿನ ನಿವಾಸಿ ಅನಿತಾ ರೆಡ್ಡಿ ಆನೇಕಲ್ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.  ಇಲ್ಲಿ ಕೆಲ ವರ್ಷಗಳ ಹಿಂದೆ ರೈತರನ್ನು `ಭೇಟಿ ಮಾಡಿ ರಾಸಾಯನಿಕಗಳ ಬಳಕೆ ಇಲ್ಲದೇ ವಿಷಮುಕ್ತ ತರಕಾರಿ ಬೆಳೆಯುವ ಕಲ್ಪನೆಯ ಬೀಜವನ್ನು ಬಿತ್ತಿದಾಗ ಅನೇಕರಿಂದ ವಿರೋ` ವ್ಯಕ್ತವಾಯಿತು. ಆದರೆ, ಅನಿತಾ ಛಲಬಿಡದೇ ರೈತರನ್ನು ಪದೇ ಪದೇ ಭೇಟಿ ಮಾಡಿ ಮನವೊಲಿಸಿದರು.

Anitha reddy asamanya kanndati

ನಿತ್ಯ ತೋಟದಿಂದ ತೋಟಕ್ಕೆ ಓಡಾಟ. ರೈತರನ್ನು ಭೇಟಿ ಮಾಡುವುದು, ಗಂಟೆಗಟ್ಟಲೇ ಮಾತನಾಡಿ ಅವರ ಮನವೊಲಿಕೆ ಮಾಡುವುದು. ಭೇಟಿ ಮಾಡಿದ ರೈತರಲ್ಲಿ ಒಂದಿಬ್ಬರು ಬದಲಾವಣೆಗೆ ಒಪ್ಪಿದರೂ ಸಂಜೆಯ ಹೊತ್ತಿಗೆ ಸಾರ್ಥಕ ಭಾವ. ಇದು ಅನಿತಾ ರೆಡ್ಡಿಯವರ ದಿನಚರಿ. ಈಕೆ ದಣಿವರಿಯದ ದಿಟ್ಟ ರೈತ ಹೋರಾಟಗಾರ್ತಿ.

ಮೂಲತಃ ಕೋಲಾರದವರಾದ, ಬೆಂಗಳೂರಿನ ನಿವಾಸಿ ಅನಿತಾ ರೆಡ್ಡಿ ಆನೇಕಲ್ ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.  ಇಲ್ಲಿ ಕೆಲ ವರ್ಷಗಳ ಹಿಂದೆ ರೈತರನ್ನು `ಭೇಟಿ ಮಾಡಿ ರಾಸಾಯನಿಕಗಳ ಬಳಕೆ ಇಲ್ಲದೇ ವಿಷಮುಕ್ತ ತರಕಾರಿ ಬೆಳೆಯುವ ಕಲ್ಪನೆಯ ಬೀಜವನ್ನು ಬಿತ್ತಿದಾಗ ಅನೇಕರಿಂದ ವಿರೋ` ವ್ಯಕ್ತವಾಯಿತು. ಆದರೆ, ಅನಿತಾ ಛಲಬಿಡದೇ ರೈತರನ್ನು ಪದೇ ಪದೇ ಭೇಟಿ ಮಾಡಿ ಮನವೊಲಿಸಿದರು. ಸಣ್ಣ ರೈತರು ಅಂದರೆ ಒಂದು ಎಕರೆ `ಭೂಮಿ ಹೊಂದಿರುವವರನ್ನೇ ಆಯ್ಕೆ ಮಾಡಿಕೊಂಡಿ ತರಕಾರಿ ಕೃಷಿ ಆರಂಭಿಸಿದರು. ಅನೇಕ ವರ್ಷಗಳಿಂದ ಕೃಷಿಯಲ್ಲಿ ರಾಸಾಯನಿಕ ಬಳಸಿದ್ದರಿಂದ `ಭೂಮಿಯನ್ನು ಮೊದಲು ವಿಷಮುಕ್ತಗೊಳಿಸುವ ಕೆಲಸ ಆರಂಭಿಸಲಾಯಿತು.

ಈಗ ಆನೇಕಲ್ನಲ್ಲಿ ಸಾವಯವ ಕೃಷಿಕರ ಸಂಘ ಮಾಡಿಕೊಂಡು ವಿಷರಹಿತ ತರಕಾರಿ ಬೆಳೆಸಲಾಗುತ್ತಿದೆ. ಆ ತರಕಾರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ತಕ್ಕ ಬೆಲೆಯನ್ನೂ ದೊರಕಿಸಿಕೊಡಲಾಗುತ್ತದೆ. ತಾವು ಬೆಳೆದ ಬೆಳೆ ಖಚಿತವಾಗಿ ಮಾರಾಟವಾಗುತ್ತದೆ ಹಾಗೂ ಉತ್ತಮ ದರ ಕೂಡ ಸಿಗುತ್ತದೆ ಎನ್ನುವ ಕಾರಣಕ್ಕೆ ಈಗ ಆನೇಕಲ್ ಸುತ್ತಮುತ್ತ ಅನೇಕ ರೈತರು ವಿಷಮುಕ್ತ ತರಕಾರಿ ಕೃಷಿಗೆ ಮುಂದಾಗುತ್ತಿದ್ದಾರೆ. ತೋಟದಿಂದ ತರಕಾರಿ ತೆಗೆದುಕೊಂಡು ಹೋಗಿ ನೇರವಾಗಿ ಗ್ರಾಹಕರಿಗೆ ಸಿಗುವಂತೆ ಮಾಡಲಾಗುತ್ತದೆ. ಎಲ್ಲೂ ತರಕಾರಿಗಳನ್ನು ಸಾಗಿಸಲು ಅಥವಾ ಸಂಗ್ರಹಿಸಿಡಲು ಫ್ರಿಡ್ಜ್ಗಳನ್ನು ಬಳಸುವುದಿಲ್ಲ.

ಅನಿತಾ ರೆಡ್ಡಿಯವರು ಸಹಜ ಸಮೃದ್ಧ ಎನ್ನುವ ಸಂಸ್ಥೆಯೊಂದರಲ್ಲಿ ನಿರ್ದೆಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಘಟನೆ ಹೆಚ್ಚೆಚ್ಚು ರೈತರನ್ನು ಸಾವಯವ ಕೃಷಿಗೆ ಬರುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಹೆಚ್ಚೆಚ್ಚು ರೈತರನ್ನು ಭೇಟಿ ಮಾಡಿವ ಅನಿತಾ, ಹಳ್ಳಿಗಳಿಗೆ ಹೋಗಿ ರೈತರಿಗೆ ಕೃಷಿಗೆ ಸಂಬಂಧಿಸಿದ ಕಿರುಚಿತ್ರಗಳನ್ನು ತೋರಿಸಿ, ವಿಜ್ಞಾನಿಗಳೊಂದಿಗೆ ಸಂವಾದಗಳನ್ನು ಆಯೋಜಿಸುತ್ತಾರೆ. ಅಷ್ಟೇ ಅಲ್ಲ, ರೈತರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಅವರು ಬೆಳೆದ ಬೆಳೆ ಖರೀದಿಸಿ ಆರಂಭ`ದ ಗ್ರಾಹಕರಾಗಿಯೂ ತಾವೇ ಕಾರ್ಯ ನಿರ್ವಹಿಸುತ್ತಾರೆ.

ಅನಿತಾ ರೆಡ್ಡಿಯವರ ರೈತ ಪರ ಕೆಲಸಗಳಿಂದಾಗಿ ಈಗ ಆನೇಕಲ್ ಸುತ್ತಮುತ್ತಲಿನ ಸಾವಯವ ಕೃಷಿಕರು ನೆಮ್ಮದಿಯಿಂದಿದ್ದಾರೆ. ವಿಷಮುಕ್ತ ತರಕಾರಿ ಬೆಳೆಗಾರರ ಸಂಘ 1 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದಾರೆ. ಅನಿತಾ ರೆಡ್ಡಿ ಸೇವೆಯಿಂದ ಉತ್ತೇಜನಗೊಂಡು ಇನ್ನಷ್ಟು ಜನ ಇಂತಹ ರೈತ ಕ್ರಾಂತಿ ನಡೆಸಬೇಕಿದೆ.

Follow Us:
Download App:
  • android
  • ios