Asianet Suvarna News Asianet Suvarna News

ಉಗ್ರರ ಸ್ವರ್ಗ ತಾಣಗಳ ಪಟ್ಟಿಯಲ್ಲಿ ಪಾಕಿಸ್ತಾನ: ಅಮೆರಿಕದ ವಾರ್ಷಿಕ ವರದಿಯಲ್ಲಿ ಉಲ್ಲೇಖ

ಭಾರತದ ಮೇಲೆ ಮಾವೊವಾದಿ ಬಂಡಾಯಕೋರರು ಸೇರಿದಂತೆ, ಪಾಕಿಸ್ತಾನ ಮೂಲದ ಭಯೋತ್ಪಾದಕರ ದಾಳಿ ಮುಂದುವರಿದಿದೆ. ಜಮ್ಮು-ಕಾಶ್ಮೀರದಲ್ಲಿ ಗಡಿಯಾಚೆಗಿನ ದಾಳಿಗಳಿಗೆ ಭಾರತ ಪಾಕಿಸ್ತಾನವನ್ನು ದೂರುವುದೂ ಮುಂದುವರಿದಿದೆ ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ.

america adds pakistan in its list of nations that are haven for terrorists

ವಾಷಿಂಗ್ಟನ್: ಅಮೆರಿಕ ರಚಿಸಿರುವ ಉಗ್ರರ ‘ಸುರಕ್ಷಿತ ಸ್ವರ್ಗ’ ತಾಣಗಳಾಗಿರುವ ದೇಶ ಮತ್ತು ವಲಯಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರ್ಪಡೆಯಾಗಿದೆ. 2016ರಲ್ಲಿ ಲಷ್ಕರೆ ತೊಯ್ಬಾ ಮತ್ತು ಜೆಇಎಂನಂತಹ ಉಗ್ರ ಸಂಘಟನೆಗಳು ಪಾಕ್‌'ನಲ್ಲಿ ತರಬೇತಿ, ನಿಧಿ ಕ್ರೋಢೀಕರಣ, ಸಂಘಟನೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದವು ಎಂಬ ಆಪಾದನೆಗಳೊಂದಿಗೆ, ಆ ದೇಶವನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಅಮೆರಿಕ ಸಂಸತ್ತಿನಿಂದ ಅನುಮತಿ ಪಡೆದಿರುವ ‘ಭಯೋತ್ಪಾದನೆ ಕುರಿತ ದೇಶದ ವರದಿ’ ಎಂಬ ವಾರ್ಷಿಕ ವರದಿಯಲ್ಲಿ, ಈ ವಿಷಯ ತಿಳಿಸಲಾಗಿದೆ. ತಹ್ರಿಕೆ ತಾಲಿಬಾನ್ ಪಾಕಿಸ್ತಾನ್‌ನಂತಹ ಸಂಘಟನೆಗಳು ಪಾಕಿಸ್ತಾನದಲ್ಲಿ ನಡೆಸಿದ್ದ ದಾಳಿಗಳಿಗೆ ಸಂಬಂಧಿಸಿ, ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಆದರೆ ಅಫ್ಘಾನಿಸ್ತಾನ ತಾಲಿಬಾನ್ ಅಥವಾ ಹಕ್ಕಾನಿ ಅಥವಾ ಅಫ್ಘಾನಿಸ್ತಾನದಲ್ಲಿನ ಅಮೆರಿಕದ ಹಿತಾಸಕ್ತಿಗಳಿಗೆ ಅಡ್ಡಿಪಡಿಸುವ ಅವುಗಳ ಸಾಮರ್ಥ್ಯವನ್ನು ಮಿತಿಗೊಳಿಸುವ ವಿರುದ್ಧ ಪಾಕಿಸ್ತಾನ ಪ್ರಮುಖ ಕ್ರಮ ಕೈಗೊಂಡಿಲ್ಲ. ಆದರೂ ಅಫ್ಘಾನ್ ನೇತೃತ್ವದ ಶಾಂತಿ ಪ್ರಕ್ರಿಯೆಗಳ ಪ್ರಯತ್ನಗಳನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತದ ಮೇಲೆ ಮಾವೊವಾದಿ ಬಂಡಾಯಕೋರರು ಸೇರಿದಂತೆ, ಪಾಕಿಸ್ತಾನ ಮೂಲದ ಭಯೋತ್ಪಾದಕರ ದಾಳಿ ಮುಂದುವರಿದಿದೆ. ಜಮ್ಮು-ಕಾಶ್ಮೀರದಲ್ಲಿ ಗಡಿಯಾಚೆಗಿನ ದಾಳಿಗಳಿಗೆ ಭಾರತ ಪಾಕಿಸ್ತಾನವನ್ನು ದೂರುವುದೂ ಮುಂದುವರಿದಿದೆ ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ.

ಜನವರಿಯಲ್ಲಿ ಪಂಜಾಬ್‌'ನ ಪಠಾಣ್‌'ಕೋಟ್‌ನಲ್ಲಿ ಉಗ್ರರ ದಾಳಿಯನ್ನು ಭಾರತ ಎದುರಿಸಿದೆ. ಜೆಇಎಂ ಉಗ್ರರು ದಾಳಿಗೆ ಕಾರಣ ಎಂದು ಭಾರತೀಯ ಆಡಳಿತ ಆಪಾದಿಸಿದೆ. 2016ರಲ್ಲಿ, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಸಹಭಾಗಿತ್ವವನ್ನು ತೀವ್ರಗೊಳಿಸುವ ಮತ್ತು ಅಮೆರಿಕದೊಂದಿಗೆ ಮಾಹಿತಿ ಹಂಚಿಕೊಳ್ಳುವ ಆಸಕ್ತಿ ಭಾರತ ತೋರಿದೆ ಎಂದು ಅದು ತಿಳಿಸಿದೆ.

epaperkannadaprabha.com

Follow Us:
Download App:
  • android
  • ios