ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಬಿಎಸ್'ವೈಗೆ ಟಾಂಗ್ ನೀಡಿದ ಈಶ್ವರಪ್ಪ
news
By Suvarna Web Desk | 03:10 AM April 21, 2017

ಬೈ ಎಲೆಕ್ಷನ್ 'ನಲ್ಲಿ ಸೋತು ಸುಣ್ಣವಾದ ಬಳಿಕ ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ತಮ್ಮ ಅಸಮಾಧಾನ, ಸಿಟ್ಟು ಹೊರಹಾಕುವಾಗ ಬಳಸಿಕೊಳ್ಳುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವೇದಿಕೆಯಿಂದಲೇ ಈಶ್ವರಪ್ಪ, ಯಡಿಯೂರಪ್ಪ ಅಂಗಳಕ್ಕೆ ಅಸಮಾಧಾನದ ಬಾಂಬ್ ಎಸೆದಿದ್ದಾರೆ.

ಬೆಂಗಳೂರು(ಎ.21): ಬೈ ಎಲೆಕ್ಷನ್ 'ನಲ್ಲಿ ಸೋತು ಸುಣ್ಣವಾದ ಬಳಿಕ ಮತ್ತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ತಮ್ಮ ಅಸಮಾಧಾನ, ಸಿಟ್ಟು ಹೊರಹಾಕುವಾಗ ಬಳಸಿಕೊಳ್ಳುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವೇದಿಕೆಯಿಂದಲೇ ಈಶ್ವರಪ್ಪ, ಯಡಿಯೂರಪ್ಪ ಅಂಗಳಕ್ಕೆ ಅಸಮಾಧಾನದ ಬಾಂಬ್ ಎಸೆದಿದ್ದಾರೆ.

ಹೀಗಂತಾ ರಾಯಣ್ಣ ಬ್ರಿಗೇಡ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳುವ ಮೂಲಕ ಉಪಚುನಾವಣಾ ಸೋಲಿಗೆ ಯಡಿಯೂರಪ್ಪ ಅವ್ರಿಗೆ ಟಾಂಗ್ ನೀಡಿದ್ರು. ಬಿಜೆಪಿ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಗೊಂದಲ ಬಗೆಹರಿಸಿಕೊಳ್ಳಲು ಬಿಎಸ್‌ವೈ  ಮರುಳಿಧರ್ ರಾವ್ ಒಳಗೊಂಡ ಸಮಿತಿ ರಚಿಸಲಾಗಿದೆ. ಆದರೆ ಈ ಸಮಿತಿ ಒಮ್ಮೆಯೂ ಸಭೆ ನಡೆಸಿಲ್ಲ. ಇದು ಪಕ್ಷ ವಿರೋಧಿ ಅಲ್ಲವೇ ಎನ್ನುವುದು ಈಶ್ವರಪ್ಪನವರ ವಾದ.

ಈ ಮಧ್ಯೆ ಅತೃಪ್ತರು ಇದೇ 27ರಂದು ನಡೆಸುವ ಸಭೆಗೆ ಹೋಗೋದಾಗಿ ಈಶ್ವರಪ್ಪ ಹೇಳಿದ್ರು. ಮೇ 6 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದ್ದು ಅವರ ಸಮ್ಮುಖದಲ್ಲೇ ಇವರಿಬ್ಬರ ನಡುವಿನ ಒಳಜಗಳ ಇತ್ಯರ್ಥವಾಗತ್ತಾ ಅಥವಾ ಮುಗಿಯದ ಕಥೆಯಾಗತ್ತಾ ಕಾದು ನೋಡಬೇಕಾಗಿದೆ.

Show Full Article