ಮೊಟ್ಟೆಮೇಲೆ ತಾನೇ ಕೂತು ಮರಿ ಮಾಡಿದ! ಈತ ಕಾವು ಕೊಟ್ಟಿದ್ದೇಕೆ ಗೊತ್ತಾ?
news
By Suvarna Web Desk | 03:16 PM Friday, 21 April 2017

ಕೋಳಿಗಳು, ಮೂರು ವಾರ ಕಾಲ ಮೊಟ್ಟೆಗಳ ಮೇಲೆ ಕೂತು ಅವುಗಳನ್ನು ಮರಿ ಮಾಡೋದು ಗೊತ್ತು. ಆದರೆ ಫ್ರಾನ್ಸ್ನ ವ್ಯಕ್ತಿಯೊಬ್ಬ ಪ್ರದರ್ಶನದ ಹೆಸರಲ್ಲಿ ತಾನೇ 23 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ಅವುಗಳನ್ನು ಮರಿ ಮಾಡಿದ್ದಾನೆ. ಆದರೆ ಆತನ ಈ ಪ್ರದರ್ಶನದ ಬಗ್ಗೆ ಪ್ರಾಣಿದಯಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪ್ಯಾರಿಸ್(ಎ.21): ಕೋಳಿಗಳು, ಮೂರು ವಾರ ಕಾಲ ಮೊಟ್ಟೆಗಳ ಮೇಲೆ ಕೂತು ಅವುಗಳನ್ನು ಮರಿ ಮಾಡೋದು ಗೊತ್ತು. ಆದರೆ ಫ್ರಾನ್ಸ್ನ ವ್ಯಕ್ತಿಯೊಬ್ಬ ಪ್ರದರ್ಶನದ ಹೆಸರಲ್ಲಿ ತಾನೇ 23 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ಅವುಗಳನ್ನು ಮರಿ ಮಾಡಿದ್ದಾನೆ. ಆದರೆ ಆತನ ಈ ಪ್ರದರ್ಶನದ ಬಗ್ಗೆ ಪ್ರಾಣಿದಯಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕೋಳಿ ಬದಲು ಅಬ್ರಹಾಂ ಕಾವು ಕೊಟ್ಟಿದ್ದೇಕೆ?

ವಿಶಿಷ್ಟಪ್ರದರ್ಶನ ನೀಡುವುದಕ್ಕೆ ಹೆಸರುವಾಸಿಯಾದ ಅಬ್ರಹಾಂ ಪೊಯಿಂಚೆವಾಲ್ ಪ್ಯಾರಿಸ್ ಆರ್ಟ್ ಮ್ಯೂಸಿಯಂನಲ್ಲಿ ವಿಶೇಷವಾಗಿ ರಚಿಸಿದ ಗಾಜಿನ ಮನೆಯಲ್ಲಿ ವಿಶೇಷವಾಗಿ ರಚಿಸಿದ ಕುರ್ಚಿಯೊಂದರ ಮೇಲೆ 11 ಮೊಟ್ಟೆಗಳನ್ನು ಇಟ್ಟಿದ್ದ. ಅವುಗಳು ಒಡೆಯದ ರೀತಿಯಲ್ಲಿ ಆತ ಅವುಗಳ ಮೇಲೆ ಕುಳಿತು ಕಾವು ಕೊಡುತ್ತಿದ್ದ. ಮಾ.29ರಂದು ಗಾಜಿನ ಮನೆ ಪ್ರವೇಶಿಸಿದ್ದ ಅಬ್ರಹಾಂ ನಿರಂತರವಾಗಿ 23 ದಿನಗಳ ಕಾಲ ಕಾವು ನೀಡಿದ್ದು ಅದರ ಫಲವಾಗಿ ಇದೀಗ ಮೊಟ್ಟೆಒಡೆದು ಮರಿ ಹೊರಬಂದಿವೆ. 11ರ ಪೈಕಿ 9 ಮೊಟ್ಟೆಗಳಿಂದ ಮರಿ ಹೊರಬಂದಿವೆ. ಬುಧವಾರ ಆತ ಗಾಜಿನ ಮನೆಯಿಂದ ಹೊರಬಂದಿದ್ದಾನೆ. ಈ ಗಾಜಿನ ಮನೆಯೊಳಗೆ ಕನಿಷ್ಠ 37 ಡಿ.ಸೆ. ತಾಪಮಾನ ಇರುವಂತೆ ನೋಡಿಕೊಳ್ಳಲಾಗಿತ್ತು. ದಿನಕ್ಕೆ ಅರ್ಧ ಗಂಟೆ ಮಾತ್ರ ಆತನಿಗೆ ಗಾಜಿನ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿತ್ತು.

 

Show Full Article