ರುದ್ರೇಶ್ ಹತ್ಯೆ: ಹೈಕೋರ್ಟ್ ಮೊರೆ ಹೋದ ಆರೋಪಿಗಳು
news
By Suvarna Web Desk | 12:52 PM Friday, 17 February 2017

ಕೊಲೆ ಪ್ರಕರಣದ ಬಿರುಸಿನ ತನಿಖೆ ನಡೆಸುತ್ತಿರುವ ಎನ್ಐಎ ತಂಡ ನಾಲ್ವರು ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆದಿದೆ.

ಬೆಂಗಳೂರು (ಫೆ.17): ಆರೆಸ್ಸೆಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಆರೋಪಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ದಿನಾಂಕವನ್ನು ಹೈಕೋರ್ಟ್ ಮುಂದೂಡಿದೆ.

ಕೊಲೆ ಪ್ರಕರಣದ ಬಿರುಸಿನ ತನಿಖೆ ನಡೆಸುತ್ತಿರುವ ಎನ್ಐಎ ತಂಡ ನಾಲ್ವರು ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆದಿದೆ.

ಡಿವೈಎಸ್ಪಿ ವಿಕ್ರಮನ್ ನೇತೃತ್ವದಲ್ಲಿ 7 ಅಧಿಕಾರಿಗಳ ಎನ್ಐಎ ತನಿಖೆ ನಡೆಸುತ್ತಿದ್ದು, ಎನ್ಐಎ ಐಜಿ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ.

ಇರ್ಫಾನ್, ವಾಸಿಂ, ಮುಜಿಬುಲ್ಲಾ ಹಾಗೂ ಮಜರ್ ಎಂಬವರನ್ನು ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಲಾಗಿದೆ.

Show Full Article