2019ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಾಗ ಅಚ್ಚೇ ದಿನಗಳು ಬರಲಿವೆ: ರಾಹುಲ್
news
By Suvarna Web Desk | 10:30 AM January 11, 2017

ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದ ಆರ್'ಬಿಐನಂತಹ ಸಂಸ್ಥೆಗಳನ್ನು ಬಲಹೀನ ಮಾಡುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು.

ನವದೆಹಲಿ(ಜ.11): ಜನರು ಅಚ್ಚೇ ದಿನ ಬರುವುದು ಯಾವಾಗ ಎಂದು ಕೇಳುತ್ತಿದ್ದಾರೆ. 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದಾಗ ಮಾತ್ರ ಜನರಿಗೆ ಅಚ್ಚೇ ದಿನ(ಒಳ್ಳೆಯ ದಿನ) ಬರಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಜನವೇದನಾ ಸಮಾವೇಶದಲ್ಲಿ ನೋಟು ಅಮಾನ್ಯದ ಬಗ್ಗೆ ಹರಿಹಾಯ್ದಿರುವ ರಾಹುಲ್, ನರೇಂದ್ರ ಮೋದಿಯ ಈ ಕ್ರಮ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಿರ್ಧಾರ ಎಂದು ಗುಡುಗಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ. ಆ ಮೂಲಕ 2019ರಿಂದ ಅಚ್ಚೇದಿನ್ ಪ್ರಾರಂಭವಾಗಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದ ಆರ್'ಬಿಐನಂತಹ ಸಂಸ್ಥೆಗಳನ್ನು ಬಲಹೀನ ಮಾಡುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು.

Show Full Article