Asianet Suvarna News Asianet Suvarna News

10 ರಲ್ಲಿ 6 ಮಂದಿಗೆ ಪರೀಕ್ಷೆ ಇಲ್ಲದೇ ಡ್ರೈವಿಂಗ್ ಲೈಸೆನ್ಸ್!

ವಾಹನ ಓಡಿಸುವ ಪರೀಕ್ಷೆಗೆ ಒಳಪಡಿಸಿಯೇ ವಾಹನ ಚಾಲಕರಿಗೆ ಚಾಲನಾ ಪರವಾನಗಿ (ಡಿಎಲ್) ನೀಡಬೇಕು ಎಂದು ನಿಯಮ ಹೇಳುತ್ತದೆ. ಆದರೆ ದೇಶದಲ್ಲಿ ಡಿಎಲ್ ಹೊಂದಿರುವವರ ಪೈಕಿ ಪ್ರತಿ 10 ಮಂದಿಯಲ್ಲಿ ಆರು ಜನರು ಇಂತಹ ಯಾವುದೇ ಪರೀಕ್ಷೆಗೂ ಹಾಜರಾಗಿಲ್ಲ ಎಂಬ ಕಳವಳಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಬಯಲಿಗೆಳೆದಿದೆ.

6 out of 10 people gets driving licence without exams

ನವದೆಹಲಿ(ಜು.17): ವಾಹನ ಓಡಿಸುವ ಪರೀಕ್ಷೆಗೆ ಒಳಪಡಿಸಿಯೇ ವಾಹನ ಚಾಲಕರಿಗೆ ಚಾಲನಾ ಪರವಾನಗಿ (ಡಿಎಲ್) ನೀಡಬೇಕು ಎಂದು ನಿಯಮ ಹೇಳುತ್ತದೆ. ಆದರೆ ದೇಶದಲ್ಲಿ ಡಿಎಲ್ ಹೊಂದಿರುವವರ ಪೈಕಿ ಪ್ರತಿ 10 ಮಂದಿಯಲ್ಲಿ ಆರು ಜನರು ಇಂತಹ ಯಾವುದೇ ಪರೀಕ್ಷೆಗೂ ಹಾಜರಾಗಿಲ್ಲ ಎಂಬ ಕಳವಳಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಬಯಲಿಗೆಳೆದಿದೆ.

ರಸ್ತೆ ಅಪಘಾತಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳ ಪ್ರಮಾಣ ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಪ್ರಕಟಗೊಂಡಿರುವ ಈ ವರದಿ, ಸಾರಿಗೆ ಇಲಾಖೆಗಳಲ್ಲಿ ಯಾವ ಪರಿಯ ಭ್ರಷ್ಟಾಚಾರ ಇದೆ ಎಂಬುದನ್ನು ಅನಾವರಣಗೊಳಿಸಿದೆ. ಅತಿ ಹೆಚ್ಚು ವಾಹನಗಳು ಇರುವ ಐದು ಮಹಾನಗರಗಳು ಸೇರಿ 10 ನಗರಗಳಲ್ಲಿ ‘ಸೇವ್ ಲೈಫ್ ಫೌಂಡೇಶನ್’ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ. ಆ ಪೈಕಿ ಉತ್ತರಪ್ರದೇಶದ ಆಗ್ರಾದಲ್ಲಿ ಶೇ.88ರಷ್ಟು ಜನರು ತಾವು ಡಿಎಲ್ ಪಡೆಯಲು ಯಾವುದೇ ಪರೀಕ್ಷೆಗೂ ಹೋಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಜೈಪುರದಲ್ಲಿ ಶೇ.72, ಗುವಾಹಟಿಯಲ್ಲಿ ಶೇ.64 ಹಾಗೂ ದೆಹಲಿಯಲ್ಲಿ ಶೇ.54, ಮುಂಬೈನಲ್ಲಿ ಶೇ.50 ಮಂದಿ ಇಂತಹುದೇ ಉತ್ತರ ನೀಡಿದ್ದಾರೆ

 

Follow Us:
Download App:
  • android
  • ios