Asianet Suvarna News Asianet Suvarna News

ಐಪಿಎಲ್ ಬೆಟ್ಟಿಂಗ್: ಮಿಂಚಿನ ಕಾರ್ಯಾಚರಣೆಯಲ್ಲಿ ಐವರ ಸೆರೆ

ವಿಜಯಪುರದ ಮಲಿಕ್ ಮುರಸಲ್, ಕಲ್ಲು ಮದಾಪೂರ ಜಾಯನಗೌಡ ಪಾಟೀಲ, ವಿಷ್ಣು ಹಳ್ಳದಮನಿ, ಸಂಗಣ್ಣ ಹರವಾಳ ಬಂಧಿತ ಆರೋಪಿಗಳು.

ಬಂಧಿತರಿಂದ 97 ಸಾವಿರ ನಗದು, 2 ಟಿವಿ, 10 ಮೊಬೈಲ್ ಫೋನ್, 12 ಸಿಮ್ ಹಾಗೂ 2 ಸೆಟ್’ಟಾಪ್ ಬಾಕ್ಸ್’ಗಳನ್ನು ವಶಪಡಿಸಿಕೊಂಡಿದ್ದಾರೆ.

5 arrested for IPL Betting

ವಿಜಯಪುರ (ಏ.14): ವಿಜಯಪುರ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ, ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 5 ಮಂದಿಯನ್ನು ಬಂಧಿಸಿದ್ದಾರೆ.

ವಿಜಯಪುರದ ಮಲಿಕ್ ಮುರಸಲ್, ಕಲ್ಲು ಮದಾಪೂರ ಜಾಯನಗೌಡ ಪಾಟೀಲ, ವಿಷ್ಣು ಹಳ್ಳದಮನಿ, ಸಂಗಣ್ಣ ಹರವಾಳ ಬಂಧಿತ ಆರೋಪಿಗಳು.

ಬಂಧಿತರಿಂದ 97 ಸಾವಿರ ನಗದು, 2 ಟಿವಿ, 10 ಮೊಬೈಲ್ ಫೋನ್, 12 ಸಿಎಂ ಹಾಗೂ 2 ಸೆಟ್’ಟಾಪ್ ಬಾಕ್ಸ್’ಗಳನ್ನು ವಶಪಡಿಸಿಕೊಂಡಿದ್ದಾರೆ.

ನಿನ್ನೆ ನಡೆದ ಕೊಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿಸಿದ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ. ಇವರೆಲ್ಲ ಗೋವಾದ ಬುಕ್ಕಿಗಳ ಜೊತೆ ಬೆಟ್ಟಿಂಗ್ ಆಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. 5 ಜನ ಏಜೆಂಟರ್‌ಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

Follow Us:
Download App:
  • android
  • ios