Asianet Suvarna News Asianet Suvarna News

ಹೊಸವರ್ಷಕ್ಕೆ ಪೊಲೀಸರಿಗೆ ಬಂಪರ್.. ಏಕಕಾಲಕ್ಕೆ 11 ಸಾವಿರ ಪೊಲೀಸರಿಗೆ ಬಡ್ತಿ

ಪೇದೆಯಿಂದ ಮುಖ್ಯಪೇದೆ, ಮುಖ್ಯ ಪೇದೆಯಿಂದ ಎಎಸ್​ಐ, ಎಎಸ್​ಐ ಹುದ್ದೆಯಿಂದ ಪಿಎಸ್​ಐ ಹುದ್ದೆಗೆ ಒಟ್ಟು 11 ಸಾವಿರ ಪೊಲೀಸರಿಗೆ ಏಕಕಾಲಕ್ಕೆ ಬಡ್ತಿ ನೀಡಲು ಗೃಹ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

11 thousand police promotion in janaury

ಬೆಂಗಳೂರು(ಡಿ.07): ಪೊಲೀಸರಿಗೆ ರಾಜ್ಯಸರ್ಕಾರ ಹೊಸ ವರ್ಷದಲ್ಲಿ ಬಂಪರ್​ ಕೊಡುಗೆ ನೀಡಲು ಸಿದ್ಧತೆ ನಡೆಸಿದೆ. ಸಿಎಂ ಆದೇಶದ ಮೇರೆಗೆ 11 ಸಾವಿರ ಪೊಲೀಸರಿಗೆ ಬಡ್ತಿ  ನಿಡಲು ನಿರ್ಧರಿಸಲಾಗಿದೆ.

ಹೊಸ ವರ್ಷದ ಕೊಡುಗೆಯಾಗಿ ರಾಜ್ಯದ ಸಾವಿರಾರು ಪೊಲೀಸ್ ಸಿಬ್ಬಂದಿಗೆ ಬಡ್ತಿ ಅವಕಾಶ ಸಿಗಲಿದೆ. 11 ಸಾವಿರ ಪೊಲೀಸರು ಏಕಕಾಲಕ್ಕೆ ಬಡ್ತಿ ಆದೇಶವನ್ನು ಪಡೆದುಕೊಳ್ಳಲಿದ್ದು, ಈ ಆದೇಶ ಪ್ರಕಾರ ಪೊಲೀಸ್ ಪೇದೆಗಳು ಮುಖ್ಯ ಪೇದೆ ಹುದ್ದೆಗೆ, ಮುಖ್ಯ ಪೇದೆಗಳು ಸಹಾಯಕ ಸಬ್ ಇನ್ಸ್‍ಪೆಕ್ಟರ್, ಸಹಾಯಕ ಸಬ್ ಇನ್ಸ್`ಪೆಕ್ಟರ್`ಗಳು ಸಬ್ ಇನ್ಸ್`ಪೆಕ್ಟರ್ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ. ಬಡ್ತಿ ಆದೇಶ ಪತ್ರಗಳನ್ನು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಿಬ್ಬಂದಿಗೆ ನೇರವಾಗಿ ವಿತರಿಸಲಿರುವುದು ವಿಶೇಷ.

ಜೊತೆಗೆ 2016-17ನೇ ಸಾಲಿನಲ್ಲಿ 659 ಪಿಎಸ್‍ಐ, 7815 ಪೇದೆಗಳು, 2017-18ನೇ ಸಾಲಿಗೆ 333 ಪಿಎಸ್‍ಐ, 4560 ಪೇದೆಗಳು ಮತ್ತು 2018-19ನೇ ಸಾಲಿಗೆ 312 ಪಿಎಸ್‍ಐ ಮತ್ತು 4045 ಪೇದೆಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.