ಸಿಗರೇಟ್ ಸೇದಿ ಹಾಳಾದ ನಿಮ್ಮ ಶ್ವಾಸಕೋಶವನ್ನು ಮೂರೇ ದಿನದಲ್ಲಿ ಸ್ವಚ್ಛ ಮಾಡಲು ಸರಳ ಟಿಪ್ಸ್
life
By Suvarna Web Desk | 09:34 AM January 01, 2017

ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿ ಈ ಟಾನಿಕ್ ತಯಾರಿಸಬಹುದು. ಇದು ಮೂರೇ ದಿನದಲ್ಲಿ ನಮ್ಮ ಶ್ವಾಸಕೋಶವನ್ನು ಕ್ಲೀನ್ ಮಾಡಿಬಿಡುತ್ತದೆ.

ಬೆಂಗಳೂರು: ಧೂಮಪಾನ ಬಿಡುವುದು ಅಷ್ಟು ಸುಲಭದ ಮಾತಲ್ಲ. ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ನಮ್ಮನ್ನು ದಾಸರನ್ನಾಗಿಸುತ್ತದೆ. ಬಹುತೇಕ ಮಂದಿ ಸಿಗರೇಟ್ ಬಿಡಲು ವಿಫಲ ಯತ್ನ ನಡೆಸುತ್ತಲೇ ಇರುತ್ತಾರೆ. ಚಟ ಬಿಡಲು ಸಾಧ್ಯವಾಗದಿದ್ದವರು ಏನು ಮಾಡಬೇಕು? ಸಿಗರೇಟ್'ನಿಂದ ಆಗುವ ಹಾನಿಯನ್ನು ಸ್ವಲ್ಪವಾದರೂ ತಡೆಗಟ್ಟುವ ಅವಕಾಶ ಇದೆ. ಶ್ವಾಸಕೋಶವನ್ನು ತ್ವರಿತವಾಗಿ ಸ್ವಚ್ಛ ಮಾಡುವ ದಿವ್ಯೌಷಧವೊಂದಿದೆ. ಇದೇನು ಸಾವಿರಾರು ರುಪಾಯಿ ಕೊಟ್ಟು ಮಾರುಕಟ್ಟೆಯಲ್ಲಿ ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಬಳಸಿ ಈ ಟಾನಿಕ್ ತಯಾರಿಸಬಹುದು. ಇದು ಮೂರೇ ದಿನದಲ್ಲಿ ನಮ್ಮ ಶ್ವಾಸಕೋಶವನ್ನು ಕ್ಲೀನ್ ಮಾಡಿಬಿಡುತ್ತದೆ.

ಟಾನಿಕ್'ನ ಐಟಂಗಳು:
* ಕತ್ತರಿಸಿದ ಈರುಳ್ಳಿ - 400 ಗ್ರಾಂ
* ಅರಿಶಿಣಪುಡಿ - 2 ಸ್ಪೂನು
* ನೀರು - 1 ಲೀಟರ್
* ಬ್ರೌನ್ ಶುಗರ್ - 400 ಗ್ರಾಂ *
* ಶುಂಠಿ ಬೇರು - 1 ತುಂಡು

ತಯಾರಿಸುವ ವಿಧಾನ:
ದೊಡ್ಡ ಪಾತ್ರೆಯಲ್ಲಿ ನೀರು ತುಂಬಿ, ಅದಕ್ಕೆ ಬ್ರೌನ್ ಶುಗರ್ ಹಾಕಿ ಕುದಿಸಿರಿ. ಅರ್ಧತುಂಡು ಶುಂಠಿ ಮತ್ತು ಈರುಳ್ಳಿಯನ್ನು ಸೇರಿಸಿ. ಬಳಿಕ, ಕತ್ತರಿಸಿದ ಇನ್ನರ್ಧ ಶುಂಠಿ ಮತ್ತು ಅರಿಶಿಣವನ್ನು ಹಾಕಿರಿ. ಈ ಮಿಶ್ರಣ ಕುದಿಯುತ್ತಿರುವಂತೆಯೇ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಸ್ವಲ್ಪ ಹೊತ್ತು ಕುದಿದ ಬಳಿಕ ಸ್ಟೌವ್ ಆಫ್ ಮಾಡಿರಿ. ಈ ಮಿಶ್ರಣ ಆರಿದ ಬಳಿಕ ರೆಫ್ರಿಜರೇಟರ್'ನಲ್ಲಿಡಿ.

ಹೇಗೆ ಸೇವಿಸುವುದು?
ಪ್ರತೀ ದಿನ ಬೆಳಗಿನ ಉಪಾಹಾರಕ್ಕೆ ಮುನ್ನ ಹಾಗೂ ರಾತ್ರಿಯ ಭೋಜನವಾದ 2 ಗಂಟೆ ಬಳಿಕ ಈ ಕಷಾಯವನ್ನು ಸೇವಿಸಬೇಕು. ಜೊತೆಗೆ ದಿನವೂ ಒಂದಷ್ಟು ಹೊತ್ತು ವ್ಯಾಯಾಮ ಮಾಡಿದರೆ ಇನ್ನಷ್ಟು ಉತ್ತಮ ಫಲಿತಾಂಶ ಸಿಗುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ ನೀವು ನಿತ್ಯ ಸ್ನಾನ ಮಾಡುವಾಗ ತಣ್ಣೀರು ಬದಲು ಬಿಸಿನೀರು ಉಪಯೋಗಿಸಬೇಕು. ಸ್ನಾನದ ಅವಧಿ 20 ನಿಮಿಷ ಮೀರಬಾರದು.

(ಗಮನಿಸಿ: ಮೇಲೆ ತಿಳಿಸಿರುವ ಬ್ರೌನ್ ಶುಗರ್ ಬಗ್ಗೆ ಸಾಕಷ್ಟು ಓದುಗರು ಅಪಾರ್ಥ ಮಾಡಿಕೊಂಡಿದ್ದಾರೆ. ಇದು ಯಾವುದೇ ಮಾದಕ ವಸ್ತುವಲ್ಲ(ಡ್ರಗ್ಸ್) ಅಲ್ಲ. ಇದು ಒಂದು ಬಗೆ ಸಕ್ಕರೆಯಾಗಿದೆ. ಮಾರುಕಟ್ಟೆಯಲ್ಲಿ ಬ್ರೌನ್ ಶುಗರ್ ಹೆಸರಲ್ಲೇ ಇದು ಸಿಗುತ್ತದೆ)

Show Full Article