ಕಚೇರೀಲಿ ಉತ್ತಮ ಕೆಲಸಕ್ಕಾಗಿ ಮನೆಯಲ್ಲಿ ಹೆಚ್ಚು ಸೆಕ್ಸ್ ಮಾಡಿ!
life
By Suvarna Web Desk | 11:49 PM Tuesday, 07 March 2017

ಉತ್ತಮ ಸೆಕ್ಸ್‌ನಿಂದ ದೇಹದಲ್ಲಿ ಆಕ್ಸಿಟಾಸಿನ್ ಬಿಡುಗಡೆಯಾಗುತ್ತದೆ.

ನೀವು ಮಾಡುವ ಕೆಲಸಕ್ಕೂ ನಿಮ್ಮ ದಾಂಪತ್ಯ ಜೀವನಕ್ಕೂ ಸಂಬಂಧವಿದೆ ಎಂದರೆ ನಂಬುತ್ತೀರಾ?. ಹೌದು, ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗ ಬೇಕಾದರೆ, ನಿಮ್ಮ ದಾಂಪತ್ಯ ಜೀವನದಲ್ಲಿ ಸೆಕ್ಸ್‌ಗೆ ಹೆಚ್ಚು ಆದ್ಯತೆಯನ್ನು ನೀಡಲೇ ಬೇಕಾಗಿದೆ. ಯಾಕೆಂದರೆ, ವ್ಯಕ್ತಿಯ ಸೆಕ್ಸ್ ಜೀವನ ಆತನ ವೃತ್ತಿಯಲ್ಲಿ ಹೆಚ್ಚು ತೃಪ್ತಿಯನ್ನೂ ಮತ್ತು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆಂದು ಹೊಸ ಸಂಶೋಧನೆ ತಿಳಿಸಿದೆ. ಉತ್ತಮ ಸೆಕ್ಸ್‌ನಿಂದ ದೇಹದಲ್ಲಿ ಆಕ್ಸಿಟಾಸಿನ್ ಬಿಡುಗಡೆಯಾಗುತ್ತದೆ. ಆಕ್ಸಿಟಾಸಿನ್ ಅನ್ನು ಸಂತೋಷದ ಹಾರ್ಮೋನ್ ಎನ್ನುತ್ತಾರೆ. ಇದು ಮನಸ್ಸಿನ ಮೇಲೆ ಮುಂದಿನ 24 ಗಂಟೆಗಳ ಕಾಲ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಸೆಕ್ಸ್ ಹೊಂದುವ ವ್ಯಕ್ತಿಗೆ ಹೆಚ್ಚು ಕಾರ್ಯಕ್ಷಮತೆಯಿಂದ ಇರಲು ಸಾಧ್ಯವಾಗುತ್ತದೆ.

Show Full Article