Asianet Suvarna News Asianet Suvarna News

ಅತೀ ಹೆಚ್ಚು ನೀಲಿ ಚಿತ್ರಗಳನ್ನು ನೋಡುವುದರಿಂದ ಕಾದಿದೆ ಕಂಠಕ

ಸುದ್ದಿಸಂಸ್ಥೆಯು ಆಯ್ದ ವಿವಾಹಿತರನ್ನು ಸಂಶೋಧನೆ ಹಾಗೂ ಸಂದರ್ಶನದ ಮೂಲಕ ಪರೀಕ್ಷೆಗೊಳಪಡಿಸಿ ಮಾಹಿತಿ ಸಂಗ್ರಹಿಸಿತ್ತು.

Dont watck blue flim

ಲಂಡನ್(ಏ.23): ಯತೇಚ್ಛವಾಗಿ ನೀಲಿ ಚಿತ್ರಗಳನ್ನು ನೋಡುವುದರಿಂದ ದಾಂಪತ್ಯ ಸಂಬಂಧ ಹಾಗೂ ಸಂಸಾರಕ್ಕೆ ಕೇಡುಂಟಾಗುವ ಸಾಧ್ಯತೆಯಿದೆ ಎಂದು ಸಂಶೋಧನಾ ವರದಿ ತಿಳಿಸಿದೆ.

ಇಂಗ್ಲೆಂಡ್ ಮೂಲದ ಡೈಲಿ ಆನ್'ಲೈನ್ ಸುದ್ದಿಸಂಸ್ಥೆ ಈ ಸಂಶೋಧನಾ ವರದಿ ಮಾಡಿದ್ದು, ಮದುವೆಯಾಗಿರುವ ಪುರುಷ ಮಹಿಳೆಯರು ಹೆಚ್ಚೆಚ್ಚು ನೀಲಿ ಚಿತ್ರಗಳನ್ನು ವೀಕ್ಷಿಸುವುದರಿಂದ ಅವರ ಸಂಬಂಧ ಕೆಡಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಸುದ್ದಿಸಂಸ್ಥೆಯು ಆಯ್ದ ವಿವಾಹಿತರನ್ನು ಸಂಶೋಧನೆ ಹಾಗೂ ಸಂದರ್ಶನದ ಮೂಲಕ ಪರೀಕ್ಷೆಗೊಳಪಡಿಸಿ ಮಾಹಿತಿ ಸಂಗ್ರಹಿಸಿತ್ತು. ಇವರಲ್ಲಿ  ನೀಲಿ ಚಿತ್ರ ನೀಡುವ ಶೇ.50 ರಷ್ಟು ಕುಟುಂಬಗಳು ಹಾಳಾಗಿದ್ದು ಸಂಗಾತಿ ಜೊತೆ ವಾಸ ಮಾಡದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ನೀಲಿ ಚಿತ್ರ ನೋಡುವವರ ಮನಸ್ಸು ದೃಶ್ಯಗಳಲ್ಲಿರುವಂತೆ ಲೈಂಗಿಕ ಕ್ರಿಯೆ ನಡೆಸಲು ಹಾತೊರೆಯುತ್ತಾರೆ. ಇದು ಸಾಧ್ಯವಾಗದಿದ್ದಾಗ ಸಂಸಾರದಲ್ಲಿ ಬಿರುಕು ಮೂಡುತ್ತದೆ' ಎಂದು ಸಂಶೋಧನೆಯಲ್ಲಿ ದಾಖಲಿಸಲಾಗಿದೆ. ಯುವ ಜನತೆ ಬೆತ್ತಲೆ ಚಿತ್ರಗಳಿಂದ ಹೆಚ್ಚು ದೂರವಿರಬೇಕು ಎಂದು ಮನೋ ವಿಜ್ಞಾನಿಗಳು ಸಲಹೆಯಾಗಿದೆ.

Follow Us:
Download App:
  • android
  • ios