50ನೇ ಚಿತ್ರಕ್ಕೆ ರಿಯಲ್ ಸ್ಟಾರ್ ಆಕ್ಷನ್ ಕಟ್ : ಈ ಸಿನಿಮಾ ಹೊಸ ಅಲೆ ಸೃಷ್ಟಿಸುತ್ತದೆಯಂತೆ?
entertainment
By Suvarna Web Desk | 12:19 PM February 16, 2017

ಜಗ್ಗೇಶ್ ಅಭಿನಯದ ತರ್ಲೆ ನನ್ನ ಮಗ ಸಿನಿಮಾ ಮೂಲಕ ನಿರ್ದೇಶಕರಾದ ಉಪೇಂದ್ರ 10 ವಿಭಿನ್ನ ಪ್ರಯೋಗತ್ಮಕ ಸಿನಿಮಾಗಳನ್ನ ಮಾಡಿದ್ದಾರೆ. ಕಾಮಿಡಿ  ಜೊತೆ ಲವ್ ಸ್ಟೋರಿ ಹೊಂದಿದ ಸಿನಿಮಾ ತರ್ಲೆ ನನ್ನ ಮಗ.ಈ ಚಿತ್ರದ ನಂತರ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮಿದರು.

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡೋದಿಕ್ಕೆ ರೆಡಿಯಾಗಿದ್ದಾರೆ. ಸಾಹಿತ್ಯ ಬರೆಯುವವರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಉಪೇಂದ್ರ, ನಂತರ ಸ್ಯಾಂಡಲ್'ವುಡ್'ನಲ್ಲಿ ರಿಯಲ್ ಸ್ಟಾರ್ ಹಾಗೂ ಸೂಪರ್ ಸ್ಟಾರ್ ಆಗಿ ಮೆರೆದಿದ್ದು ಇತಿಹಾಸ. ತನ್ನ ಪ್ರತಿಭೆ ಹಾಗೂ ಟ್ಯಾಲೆಂಟ್'ನಿಂದ ಸ್ಯಾಂಡಲ್'ವುಡ್ ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಟನಾಗಿರೋ ರಿಯಲ್ ಸ್ಟಾರ್ ಉಪೇಂದ್ರ 50ನೇ ಚಿತ್ರಕ್ಕಾಗಿ ಮತ್ತೆ ಡೈರೆಕ್ಷನ್ ಕ್ಯಾಪ್ ಹಾಕಲಿದ್ದಾರೆ.

10 ಹಿಟ್ ಸಿನಿಮಾಗಳ ನಿರ್ದೇಶಕ ಉಪ್ಪಿ

ಜಗ್ಗೇಶ್ ಅಭಿನಯದ ತರ್ಲೆ ನನ್ನ ಮಗ ಸಿನಿಮಾ ಮೂಲಕ ನಿರ್ದೇಶಕರಾದ ಉಪೇಂದ್ರ 10 ವಿಭಿನ್ನ ಪ್ರಯೋಗತ್ಮಕ ಸಿನಿಮಾಗಳನ್ನ ಮಾಡಿದ್ದಾರೆ. ಕಾಮಿಡಿ  ಜೊತೆ ಲವ್ ಸ್ಟೋರಿ ಹೊಂದಿದ ಸಿನಿಮಾ ತರ್ಲೆ ನನ್ನ ಮಗ.ಈ ಚಿತ್ರದ ನಂತರ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮಿದರು.

ಪ್ರೇಕ್ಷಕರಿಗೆ ಭಯ ಹುಟ್ಟಿಸಿದ  'ಶ್'​ ಹಾಗೂ ಹೊಸ ಅಲೆ ಸೃಷ್ಟಿಸಿದ ಓಂ

ಚೊಚ್ಚಲ ಚಿತ್ರದಲ್ಲಿ ಕಾಮಿಡಿಯಿಂದ ನಿರ್ದೇಶಕನ ಪಟ್ಟಗಿಟ್ಟಿಸಿದ ಉಪೇಂದ್ರ, ನಿಜವಾದ ಕ್ರಿಯೇಟಿವಿಟಿ ಸಾಬೀತಾಗಿದ್ದೇ  ಸಸ್ಪೆನ್ಸ್ ಕಮ್ ಹಾರಾರ್ ಸಿನಿಮಾ 'ಶ್' ಚಿತ್ರದಿಂದ. ಭಕ್ತಿ,ಪ್ರೀತಿ ಹಾಗೂ ರೌಡಿಸಂ ಎಲ್ಲವು ಸೇರಿಸಿ ಮಾಡಿದ ಸಿನಿಮಾನೆ ಓಂ. ಶಿವರಾಜ್​ಕುಮಾರ್​ಗೆ ದೊಡ್ಡ ಬ್ರೇಕ್ ತಂದು ಕೊಟ್ಟ ಚಿತ್ರ. ಆ ಚಿತ್ರದ ಮೂಲಕ ಶಿವಣ್ಣನಿಗೆ ಹೊಸ ಇಮೇಜ್ ಹಾಗೂ ತಾವು ಅದ್ಭುತ ಸಿನಿಮಾ ಡೈರೆಕ್ಟರ್ ಅನ್ನೋದನ್ನ ಪ್ರೂವ್ ಮಾಡಿದ್ದರು ಉಪ್ಪಿ.

ಸಿನಿಮಾದಿಂದ ಸಿನಿಮಾಗೆ ವಿಭಿನ್ನತೆ ಹುಡುಕಿಹೊರಟ ಉಪ್ಪಿ ರೆಬೆಲ್ ಸ್ಟಾರ್​ಗೆ ಸಿನಿಮಾ ಮಾಡಿದರು .ಸಸ್ಪೆನ್ಸ್  ಥ್ರಿಲ್ಲರ್ ಅಪರೇಷನ್ ಅಂತ ಉಪ್ಪಿಯ ಇನ್ನೊಂದು ಮಗ್ಗುಲನ್ನ ಅನಾವರಣ ಮಾಡಿತ್ತು. ಸಕ್ಸಸ್​ಫುಲ್ ನಿರ್ದೇಶಕ ಉಪೇಂದ್ರರ ಅವತ್ತಿನ ಹೊಸ ಪ್ರಯೋಗ ‘ಎ’ . ಮನಸಿನ ಮನೆಗೆ ಕನ್ನಡಿ ಇಟ್ಟ ‘ಎ’ ಚಿತ್ರದಲ್ಲಿ ಉಪ್ಪಿಯ ಚೊಚ್ಚಲ ಅಭಿನಯವೂ ಇತ್ತು. ಹೊಸ ರೀತಿಯ ಸುರ್ಯ- ಚಾಂದಿನಿಯ ಲವ್ ಸ್ಟೋರಿಯನ್ನ ಅರ್ಥ ಮಾಡಿಕೊಳ್ಳೋಕೆ ಮತ್ತೆ ಮತ್ತೆ ಜನ ನೋಡಿದ್ದರು. ಅದು ಉಪ್ಪಿ ನಿರ್ದೇಶನದ ತಾಕತ್ತು.

ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ಧರಿಸುತ್ತಿದ್ದಾರೆ

ಉಪೇಂದ್ರ ಮತ್ತೆ ಬಾ, ಹೆಸರಿಡದ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಉಪೇಂದ್ರ. ತಮ್ಮ  ಅಭಿನಯದ 50ನೇ ಚಿತ್ರಕ್ಕೆ ತಾವೇ ನಿರ್ದೇಶನ ಮಾಡಿ ಅಭಿನಯಿಸಲಿದ್ದಾರೆ.ಸದ್ಯಕ್ಕೆ  ಒಂದು ತಿಂಗಳಿನಿಂದ ಚಿತ್ರದ ಸ್ಕ್ರಿಪ್ಟ್ ವರ್ಕ್​ ಶುರುವಾಗಿದೆ. ಉಪೇಂದ್ರ ಹೋಂ ಬ್ಯಾನರ್ ನಲ್ಲಿ ಈ ಚಿತ್ರ ಸೆಟ್ಟೇರಲಿದೆ. ಈಗಾಗಲೆ ವಿಭಿನ್ನ ಚಿತ್ರಗಳನ್ನ ಮಾಡಿ ಸಕ್ಸಸ್ ಕಂಡಿರುವ ಉಪ್ಪಿ ತಮ್ಮ 50ನೇ ಚಿತ್ರಕ್ಕೆ ವಿಶೇಷವಾಗಿ ವರ್ಕ್ ಮಾಡುತ್ತಿದ್ದಾರೆ. 50ನೇ ಚಿತ್ರವಾಗಿರುವ ಕಾರಣ ಅಭಿಮಾನಿಗಳಲ್ಲಿ ಸಹ  ಕೂತಹಲ ಮೂಡಿಸಿದೆ.ಇದೆಕ್ಕೆಲ್ಲಾ ಉತ್ತರ ಸಿಗಬೇಕು ಅಂದ್ರೆ ಸ್ವಲ್ಪ ದಿನಗಳವರೆಗ ಕಾಯಬೇಕು.

ವರದಿ: ರವಿಕುಮಾರ್, ಸುವರ್ಣ ನ್ಯೂಸ್

Show Full Article