Asianet Suvarna News Asianet Suvarna News

ಸಲ್ಲು ಮದುವೆ ಬಾಲಿವುಡ್ ಬೆಡಗಿ ಜೊತೆ !

ಸಲ್ಮಾನ್ ಖಾನ್ ಅವರಿಗೆ ಹಾಟ್ ಬೆಡಗಿ ಹಳೆಯ ಪ್ರೇಯಸಿ ಕತ್ರೀನಾ ಕೈಫ್ ಜೊತೆ ಪ್ರೇಮವಾಗಿದೆ.

Salman Khan and  Katrina Kaif pic on Kats Instagram is making fans go gaga

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮದುವೆಯಾಗುವ ಗಾಳಿ ಸುದ್ದಿಗಳಿಗೆ ಬರವಿಲ್ಲ. ಈಗ ಮತ್ತೊಂದು ಸೂಪರ್ ಗಾಳಿ ಸುದ್ದಿ ಬಾಲಿವುಡ್ ಟೌನ್'ನಲ್ಲಿ ಗುನುಗುತ್ತಿದೆ.

ಸಲ್ಮಾನ್ ಖಾನ್ ಅವರಿಗೆ ಹಾಟ್ ಬೆಡಗಿ ಹಳೆಯ ಪ್ರೇಯಸಿ ಕತ್ರೀನಾ ಕೈಫ್ ಜೊತೆ ಪ್ರೇಮವಾಗಿದೆ. ಶೀಘ್ರದಲ್ಲೇ ಇಬ್ಬರು ವಿವಾಹ'ವಾಗುತ್ತಾರೆ ಎಂಬ ಗುಸುಗುಸು  ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಇತ್ತೀಚಿಗಷ್ಟೆ ಕತ್ರೀನಾ ಸಲ್ಲೂ ಜೊತೆಗಿನ ಹಾಟೆಸ್ಟ್ ಚಿತ್ರವನ್ನು ತಮ್ಮ ಇನ್'ಸ್ಟಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನು ನೋಡಿದ ಅಭಿಮಾನಿಗಳೆಲ್ಲರೂ ಅಣ್ಣ - ಅತ್ತಿಗೆ ಜೋಡಿ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದರು. ಆದರೆ ವಾಸ್ತವದಲ್ಲಿ ಇದು 'ಟೈಗರ್ ಜಿಂದಾ ಹೈ' ಚಿತ್ರದ ದೃಶ್ಯವೇ ಹೊರತು ಮತ್ತೇನಿಲ್ಲ. ಇದನ್ನೇ ಕತ್ರೀನಾ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡಿಗ ಗಿರೀಶ್ ಕರ್ನಾಡ್ ಕೂಡ ೀ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಸಲ್ಲು ಜೊತೆ ಪ್ರೇಮ ಬಾಂಧವ್ಯ ಮುರಿದು ಬಿದ್ದ ನಂತರ ಕತ್ರೀನಾ ಕಳೆದ 6 ವರ್ಷಗಳಿಂದ ಮತ್ತೊಬ್ಬ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ಸುತ್ತಾಟ ಜೋರಾಗಿದೆ. ಇಬ್ಬರ ಜೊತೆಯೂ ಮದುವೆಯ ಮಾತುಗಳು ಆಗಾಗ ಕೇಳಿಬರುತ್ತಿವೆ.

Salman Khan and  Katrina Kaif pic on Kats Instagram is making fans go gaga

Follow Us:
Download App:
  • android
  • ios