Asianet Suvarna News Asianet Suvarna News

ಮುತ್ತಪ್ಪ ರೈ ಸಿನಿಮಾ ಡ್ರಾಪ್ ಆಯ್ತು : ಆರ್'ಜಿವಿಯ ಕನ್ನಡ ಚಿತ್ರಕ್ಕೆ ಆರಂಭದಲ್ಲೇ ವಿಘ್ನ

ಆದರೆ, ಈಗಷ್ಟೆ ಬಂದ ಮಾಹಿತಿಯ ಪ್ರಕಾರ ಮುತ್ತಪ್ಪ ರೈ ಅವರ ಜೀವನ ಪುಟಗಳನ್ನು ಹೇಳುವರೈಚಿತ್ರವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಯಾವುದೇ ಕಾರಣಕ್ಕೂ ಸಿನಿಮಾ ಸೆಟ್ಟೇರುವ ಲಕ್ಷಣಗಳು ಇಲ್ಲ. ತಮ್ಮ ಜೀವನ ಚರಿತ್ರೆಯನ್ನು ಹೇಳುವರೈಚಿತ್ರವನ್ನು ಮಾಡುವುದು ಬೇಡ ಅಂತ ಸ್ವತಃ ಮುತ್ತಪ್ಪ ರೈ ಅವರು ರಾಮ್ಗೋಪಾಲ್ ವರ್ಮಾ ಅವರಿಗೆ ಸೂಚನೆ ನೀಡಿದ್ದಾರಂತೆ.

Rai Project stopped

ಬೆಂಗಳೂರು(ಜು.22): ಕಾಂಟ್ರವರ್ಸಿಗೆ ಕೇರಾಫ್ ಅಡ್ರಸ್‌ನಂತಿರುವ ರಾಮ್‌ಗೋಪಾಲ್ ವರ್ಮಾ, ಕನ್ನಡದಲ್ಲಿ ಸರದಿಯಂತೆ ಸಿನಿಮಾಗಳನ್ನು ನಿರ್ದೇಶಿಸುತ್ತಾರೆಂಬ ಸುದ್ದಿ ಜೋರಾಗಿಯೇ ಹಬ್ಬಿತು. ಅದಕ್ಕೆ ತಕ್ಕಂತೆ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದ ನಂತರ ಶಿವರಾಜ್‌ಕುಮಾರ್ ಅಭಿನಯದಲ್ಲಿ ‘ಸೌತ್’ ಹೆಸರಿನ ಚಿತ್ರವನ್ನು ಘೋಷಿಸಿದರು. ಸುದೀಪ್ ನಟನೆಯ ಚಿತ್ರವನ್ನು ಮಾಡುವುದಾಗಿ ಹೇಳಿಕೊಂಡರು. ಈ ನಡುವೆ ‘ರೈ’ ಚಿತ್ರ ಅನೌನ್ಸ್ ಮಾಡಿಕೊಂಡರು. ಮುತ್ತಪ್ಪ ರೈ ಅವರ ಭೂಗತ ಜೀವನ ಮತ್ತು ಈಗಿನ ಸಾಮಾಜಿಕ ಸೇವೆಯನ್ನು ಮಗನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ವರ್ಮಾ ಹೇಳಿಕೊಂಡಿದ್ದು ಮಾತ್ರವಲ್ಲ, ‘ರೈ’ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಬೇರೆ ಮಾಡಿದರು. ವಿವೇಕ್ ಒಬೆರಾಯ್ ನಾಯಕನಾಗಿ ನಟಿಸಬೇಕಿದ್ದ ಸಿನಿಮಾ ಇದು. ಆದರೆ, ಸಿನಿಮಾ ಸೆಟ್ಟೇರಿ ವರ್ಷಗಳು ಕಳೆಯುತ್ತಿದ್ದರೂ ‘ರೈ’ ಏನಾಯಿತು ಅಂತ ಮಾತ್ರ ಗೊತ್ತಿಲ್ಲ.

ಆದರೆ, ಈಗಷ್ಟೆ ಬಂದ ಮಾಹಿತಿಯ ಪ್ರಕಾರ ಮುತ್ತಪ್ಪ ರೈ ಅವರ ಜೀವನ ಪುಟಗಳನ್ನು ಹೇಳುವ ‘ರೈ’ ಚಿತ್ರವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಸೆಟ್ಟೇರುವ ಲಕ್ಷಣಗಳು ಇಲ್ಲ. ತಮ್ಮ ಜೀವನ ಚರಿತ್ರೆಯನ್ನು ಹೇಳುವ ‘ರೈ’ ಚಿತ್ರವನ್ನು ಮಾಡುವುದು ಬೇಡ ಅಂತ ಸ್ವತಃ ಮುತ್ತಪ್ಪ ರೈ ಅವರು ರಾಮ್‌ಗೋಪಾಲ್ ವರ್ಮಾ ಅವರಿಗೆ ಸೂಚನೆ ನೀಡಿದ್ದಾರಂತೆ. ಅಲ್ಲಿಗೆ ವಿವೇಕ್ ಓಬೆರಾಯ್ ಕನ್ನಡಕ್ಕೆ ಬಂದರು, ರಾಮ್ ಗೋಪಾಲ್ ವರ್ಮಾ ಮತ್ತೊಂದು ಕನ್ನಡ ಸಿನಿಮಾ ಶುರು ಮಾಡಿದ್ರು, ಮುತ್ತಪ್ಪ ರೈ ಜೀವನ ಸಿನಿಮಾ ಆಗುತ್ತಿದೆ' ಎಂದಲ್ಲ ಹಬ್ಬಿದ ಸುದ್ದಿಗಳು ಈಗ ತಣ್ಣಗೆ ಮಲಗಿದಂತೆ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ಕನ್ನಡ, ಹಿಂದಿ ಭಾಷೆಯಲ್ಲಿ ತಯಾರಾಗಬೇಕಿದ್ದ ಈ ಚಿತ್ರವನ್ನು ಕೈ ಬಿಟ್ಟಿದ್ದರ ಹಿಂದಿನ ಗುಟ್ಟೇನು?

ಸ್ವತಃ ರೈಗೆ ಇಷ್ಟವಿಲ್ಲ

ಒಂದು ಮಾಹಿತಿಯ ಪ್ರಕಾರ ತಮ್ಮ ಬದುಕಿನ ಮೇಲೆ ಸಿನಿಮಾ ಮಾಡುವುದು ಸ್ವತಃ ಮುತ್ತಪ್ಪ ರೈ ಅವರಿಗೇ ಇಷ್ಟವಿಲ್ಲವಂತೆ. ಅದಕ್ಕೆ ಕಾರಣಕ್ಕೆ ತಮ್ಮಗಿನ ಜೀವನ. ಸಿನಿಮಾದಲ್ಲಿ ಏನೇ ಪಾಸಿಟೀವ್ ಆಗಿ ತೋರಿಸಿದರೂ ಮುತ್ತಪ್ಪ ರೈ ಅವರ ಆ ದಿನಗಳ ಭೂಗತ ಲೋಕವನ್ನು ತೋರಿಸಲೇಬೇಕು. ಆದರೆ, ಎಲ್ಲವನ್ನೂ ಬಿಟ್ಟು ಜೀವನ ಮಾಡುತ್ತಿರುವ ಹೊತ್ತಿನಲ್ಲ ಹಳೆಯದು ಸಿನಿಮಾ ಹೆಸರಿನಲ್ಲಿ ಬಂದರೆ ಕೆಟ್ಟ ಹೆಸರು ಬರುತ್ತದೆ ಎಂಬುದು ಅವರ ಆಪ್ತರು ಸಲಹೆ. ಅಲ್ಲದೆ ರಾಜ್ಯದ ತುಂಬಾ ಜಯ ಕರ್ನಾಟಕ ಸಂಘಟನೆ ಮಾಡಿ ಅದರ ಮೂಲಕ ಸಾಮಾಜಿಕ ಹೋರಾಟ, ಜನರಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಮುತ್ತಪ್ಪ ರೈ ಅವರ ಹಳೆಯ ದಿನಗಳನ್ನು ನೆನಪಿಸುವ ಅಗತ್ಯವಿಲ್ಲ ಎನ್ನುವುದು ಅವರ ಸಂಘಟನೆಯ ಕಾರ್ಯಕರ್ತರ ಅಭಿಪ್ರಾಯವಾಗಿತಂತೆ.

ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ‘ರೈ’ಹೆಸರಿನ ಚಿತ್ರವನ್ನು ಮಾಡುವುದು ಬೇಡ ಅಂತ ಇತ್ತೀಚೆಗಷ್ಟೆ ರಾಮ್‌ಗೋಪಾಲ್ ವರ್ಮಾ ಅವರಿಗೆ ಮುತ್ತಪ್ಪ ರೈ ಅವರೇ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ವರ್ಮಾ ಅವರು ಕೂಡ ಮುತ್ತಪ್ಪ ರೈ ಅವರೇ ಸಿನಿಮಾ ಮಾಡುವುದು ಬೇಡ ಎಂದ ಮೇಲೆ ‘ರೈ’ ಚಿತ್ರವನ್ನು ಬದಿಗಿಟ್ಟಿದ್ದಾರೆ. ಇದರ ಜತೆಗೆ ಕನ್ನಡದಲ್ಲಿ ವರ್ಮಾ ಮಾಡುತ್ತಾರೆ ಎನ್ನಲಾಗುತ್ತಿರುವ ‘ಸೌತ್’ ಹಾಗೂ ಮತ್ತೊಂದು ಸಿನಿಮಾ ಕೂಡ ಟೇಕಪ್ ಆಗುವುದು ಅನುಮಾನ. ಅಲ್ಲಿಗೆ ವರ್ಮಾ ಎನ್ನುವ ಡಾರ್ಕ್ ರೂಮಿನ ನಿರ್ದೇಶಕನ ಕನ್ನಡ ಸಿನಿಮಾಗಳು ಎದ್ದೇಳುವ ಮುನ್ನವೇ ಗಾಢವಾಗಿ ಮಲಗಿಬಿಟ್ಟಿವೆ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios