'ನನ್ನ ಆತ್ಮಹತ್ಯೆ ನಾನೇ ಖಂಡಿಸ್ತೇನೆ' ಪ್ರಥಮ್
entertainment
By Suvarna Web Desk | 04:44 AM April 20, 2017

 ಬಗ್ಗೆ ನಾನು ಏನೂ ಹೇಳೋದಿಲ್ಲ. ಕೆಲವರು ಕೆಟ್ಟದಾಗಿ ಬರೆದಿದ್ದನ್ನು ನಾನು ನೋಡಿದ್ದೇನೆ. ಅವರಿಗೆ ನನ್ನ ಮೇಲೆ ಅಷ್ಟೇಕೆ ಅಸಮಾಧಾನವೋ ಗೊತ್ತಿಲ್ಲ. ಈ ಘಟನೆ ಯಾಕೆ ನಡೆಯಿತು ಅನ್ನೋದು ಅವರಿಗೆ ಗೊತ್ತಿಲ್ಲ. ನಿಜ ಹೇಳುತ್ತೇನೆ, ನಾನಾಗಿದ್ದಕ್ಕೆ ಬದುಕಿದ್ದೇನೆ. ನನ್ನ ಜತೆಗಿದ್ದ ಕೆಲವರು ಅಷ್ಟುಕಿರುಕುಳ ನೀಡಿದ್ದಾರೆ. ಅದರಿಂದ ತೀವ್ರ ನೊಂದಿದ್ದೆ. ದಿಕ್ಕು ತೋಚದೇ ಅಂಥದೊಂದು ತಪ್ಪು ನಡೆದು ಹೋಯಿತು. ಇನ್ನು ಅದು ಮರುಕಳಿಸಲ್ಲ.

1) ಆತ್ಮಹತ್ಯೆ ಪ್ರಕರಣದ ವಾಸ್ತವ ಏನು?

 ಬಗ್ಗೆ ನಾನು ಏನೂ ಹೇಳೋದಿಲ್ಲ. ಕೆಲವರು ಕೆಟ್ಟದಾಗಿ ಬರೆದಿದ್ದನ್ನು ನಾನು ನೋಡಿದ್ದೇನೆ. ಅವರಿಗೆ ನನ್ನ ಮೇಲೆ ಅಷ್ಟೇಕೆ ಅಸಮಾಧಾನವೋ ಗೊತ್ತಿಲ್ಲ. ಈ ಘಟನೆ ಯಾಕೆ ನಡೆಯಿತು ಅನ್ನೋದು ಅವರಿಗೆ ಗೊತ್ತಿಲ್ಲ. ನಿಜ ಹೇಳುತ್ತೇನೆ, ನಾನಾಗಿದ್ದಕ್ಕೆ ಬದುಕಿದ್ದೇನೆ. ನನ್ನ ಜತೆಗಿದ್ದ ಕೆಲವರು ಅಷ್ಟುಕಿರುಕುಳ ನೀಡಿದ್ದಾರೆ. ಅದರಿಂದ ತೀವ್ರ ನೊಂದಿದ್ದೆ. ದಿಕ್ಕು ತೋಚದೇ ಅಂಥದೊಂದು ತಪ್ಪು ನಡೆದು ಹೋಯಿತು. ಇನ್ನು ಅದು ಮರುಕಳಿಸಲ್ಲ.

2) ಜತೆಗಿದ್ದವರೇ ಹೀಗೇಕೆ ಮಾಡಿದರು?

ಹೆಸರು ಹೇಳೋದಿಲ್ಲ, ಕೆಲವರಿಗೆ ಪ್ರಚಾರ ಬೇಕಿದೆ. ಪ್ರಥಮ್‌ಗೆ ಹೀಗೆಲ್ಲ ಮಾಡಿದ್ರೆ ಪ್ರಚಾರ ಸಿಗುತ್ತೆ ಅಂತ ಕಲ್ಪನೆ. ಬಿಗ್‌ಬಾಸ್‌ ಹಣದಲ್ಲಿ ತಮಗೂ ಷೇರು ಬೇಕಾಗಿತ್ತು. ಆದರೆ ಅದನ್ನು ಯೋಧರು, ರೈತರಿಗೆ ಕೊಡುವುದಾಗಿ ಹೇಳಿದ್ದೆ. ಅದು ಅವರಿಗೆ ಸಹಿಸಲಾಗ­ಲಿಲ್ಲ. ಹೀಗಾಗಿ ಕಿರುಕುಳ ಕೊಟ್ಟು ನನ್ನನ್ನು ಮುಗಿಸು­ವುದು ಅವರ ಉದ್ದೇಶ. ಅದೀಗ ನಡೆಯೋಲ್ಲ.

3)ಇದೇ ಆತ್ಮಹತ್ಯೆಗೆ ನಿಜವಾದ ಕಾರಣಾನಾ?

ನಿಜ, ಇನ್ನೇನೂ ಇಲ್ಲ. ಇನ್ನೇನಾದ್ರೂ ಊಹಿಸಿದ್ದರೆ ಅದರಲ್ಲಿ ಸತ್ಯಾಂಶ ಇಲ್ಲ. ಪ್ರಥಮ್‌ ಯಾವತ್ತಿಗೂ ಏನನ್ನೂ ಮುಚ್ಚಿಟ್ಟಿಲ್ಲ.

4) ಮತ್ತೆ ಬಿಗ್‌ಬಾಸ್‌ ಹಣ ರೈತರು ಮತ್ತು ಯೋಧರಿಗೆ ನೀಡುವ ವಿಚಾರ?

ನಾಳೆಯಿಂದಲೇ ಆ ಕೆಲಸ ಶುರುವಾಗುತ್ತಿದೆ. ಶುಕ್ರ ವಾರ ಮಂಡ್ಯ, ಶನಿವಾರ ಗದಗಕ್ಕೆ ಹೋಗುತ್ತಿದ್ದೇನೆ. ಸಾಲದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಚೆಕ್‌ ವಿತರಣೆ ಮಾಡುತ್ತಿದ್ದೇನೆ. ಮುಂದಿನ ವಾರ ದೆಹಲಿಗೆ. ಯೋಧರ ಕಲ್ಯಾಣಕ್ಕಾಗಿ ಪ್ರಧಾನಿ ಮಂತ್ರಿ ನೆರವು ನಿಧಿಗೆ . 10 ಲಕ್ಷ ನೀಡುತ್ತಿದ್ದೇನೆ. ಬಿಗ್‌ಬಾಸ್‌ ಹಣ ಒಂದೇ ಒಂದು ಪೈಸೆಯೂಬೇಡ.

5) ನಿರ್ದೇಶಿಸಿಸಬೇಕಾದ ಸಿನಿಮಾ ಕತೆ ಎಲ್ಲಿಗೆ ಬಂತು?

‘ದೇವ್ರವ್ನೆ ಬುಡು ಗುರು' ನನ್ನ ಕನಸಿನ ಪ್ರಾಜೆಕ್ಟ್. ನೋಡ್ತಿರಿ, ಕನ್ನಡದ ಚಿತ್ರ ಪ್ರೇಮಿಗಳು ನಿರೀಕ್ಷೆ ಮಾಡದಂತೆ ಚಿತ್ರ ಮೂಡಿ ಬರಲಿದೆ. ಶ್ವೇತಾ ಬಸು, ನಾಸಿರುದ್ದೀನ್‌ ಶಾ ಅಥವಾ ಅನುಪಮ್‌ ಖೇರ್‌ ಈ ಚಿತ್ರಕ್ಕೆ ಬರುವುದು ಖಚಿತ. ಮಾತಲ್ಲಿ ಹೇಳುವುದಿಲ್ಲ. ಕರೆ ತಂದು ತೋರಿಸುತ್ತೇನೆ.

6) ಮತ್ತೆ ಹೀರೋ ಪ್ರಾಜೆಕ್ಟ್ಗಳು ಶುರುವಾಗೋದು, ಗ್ಯಾರಂಟೀನಾ?

ನಾನೀಗ ಮಾತಾಡ್ತಿರೋದೇ ‘ದೇವ್ರಂಥ ಮನುಷ್ಯ' ಚಿತ್ರದ ಸೆಟ್‌ನಿಂದ. ಯಾಕೆ ಈ ರೀತಿಯ ಅನು ಮಾನ? ನನ್ನ ಬಗ್ಗೆ ಏನೇನು ಹಬ್ಬಿದೆಯೋ ಗೊತ್ತಿಲ್ಲ. ಆದರೆ ನನ್ನ ನಂಬಿ ಸಿನಿಮಾ ಮಾಡಲು ಬಂದ ನಿರ್ದೇಶಕರು, ನಿರ್ಮಾಪಕರ ಜತೆ ನಾನು ಚೆನ್ನಾಗಿ ದ್ದೇನೆ. ನನ್ನ ಮೇಲೆ ಅವರಿಗೆ ವಿಶ್ವಾಸವಿದೆ. ನಾಲ್ಕು ಸಿನಿಮಾಗಳಿವೆ. ‘ದೇವ್ರಂಥ ಮನುಷ್ಯ' ಅನಂತರ ಹೊಸದೊಂದು ಪ್ರಾಜೆಕ್ಟ್ ಇದೆ. ಆ ಚಿತ್ರಕತೆ ಕೇಳಿದ್ರೆ ನೀವೇ ಅಚ್ಚರಿ ಪಡುತ್ತೀರಿ. ಕಾಮಿಡಿ ಸಬ್ಜೆಕ್ಟ್. ನನ್ನ ಕ್ಯಾರೆಕ್ಟರ್‌ಗೆ ತಕ್ಕಂತಿದೆ. ಹೀಗೆ ನಾಲ್ಕು ಪ್ರಾಜೆಕ್ಟ್ಗಳು ಒಂದೊಂದಾಗಿ ಬರಲಿವೆ.

7) ನಿಮ್ಮ ವಾಸ್ತವ್ಯ?

ಕೊಳ್ಳೆಗಾಲದ ಸಮೀಪದ ನನ್ನೂರು. ನಿತ್ಯ ಟ್ರಾವಲ್‌ ಮಾಡುತ್ತಿದ್ದೇನೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಉಳಿದುಕೊಳ್ಳುವುದು ಬೇಡ ಅಂತ ನಿರ್ಧರಿಸಿದ್ದೇನೆ. ಚಿತ್ರೀಕರಣ, ಇತ್ಯಾದಿ ಕೆಲಸಗಳು ಇದ್ದಾಗ ಇಲ್ಲಿ ಉಳಿದುಕೊಳ್ಳುತ್ತೇನೆ. ಬಿಟ್ಟರೆ ಊರೇ ಸೂಕ್ತ.

8) ‘ಸಂಜು ಮತ್ತು ನಾನು' ಶೋ ಕತೆ ಏನು?

ನಾನು, ಸಂಜನಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ವೀಕೆಂಡ್‌ ಶೋ. ಕಾನ್ಸೆಪ್ಟ್‌ ಚೆನ್ನಾಗಿದೆ. ಜನರಿಗೂ ಇಷ್ಟವಾಗುತ್ತೆ.ಒಂದೆರೆಡು ಎಪಿಸೋಡ್‌ ಚಿತ್ರೀಕರಣ ಆಗಿದೆ. ಪ್ರೋಮೋಗೆ ಒಳ್ಳೆಯ ರೆಸ್ಪಾನ್ಸ್‌ ಇದೆ.

9) ಅದು ಸರಿ, ಮಾನಸಿಕ ಕಿರುಕುಳ ಅಂತ ಮತ್ತೆ ಏನಾದರೂ ಮಾಡಿಕೊಂಡರೆ ಪ್ರಾಜೆಕ್ಟ್ಗಳ ಕತೆ?

ಅಯ್ಯೋ ಬಿಡಿ ಸರ್‌, ನನ್ನ ಮೇಲೆ ನನಗೆ ನಂಬಿಕೆ ಇದೆ. ಆ ನಂಬಿಕೆ ನನ್ನನ್ನು ನಂಬಿಕೊಂಡವರಿಗೂ ಇದೆ. ಮೂರನೆಯವರಿಗೆ ಆತಂಕ ಯಾಕೆ? ಆ ಹೊತ್ತಿನ ಪರಿಸ್ಥಿತಿ ಹಾಗಿತ್ತು. ತುಂಬಾ ನೋವಾಗಿತ್ತು. ಅದೇನೋ ನಡೆದು ಹೋಯಿತು. ಅದನ್ನ ನಾನು ಖಂಡಿಸ್ತೀನಿ. ಇನ್ನು ಮುಂದೆ ಹಾಗೆ ಆಗಲ್ಲ.

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

Show Full Article