ಮುರಿದು ಬಿದ್ದ ಬಿಗ್'ಬಾಸ್ ಸ್ಪರ್ಧಿ ಹಾಗೂ ನಟಿ ದಾಂಪತ್ಯ
entertainment
By Suvarna Web Desk | 06:06 PM Sunday, 12 March 2017

ಸಮನ್ಸ್'ಗೆ ಆಸದ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣದಿಂದ ಕೋರ್ಟ್ ವಿಚ್ಚೇದನ ನೀಡಿದೆ. ವೀಣಾ ತನ್ನ ಗಂಡನಿಗೆ ವರದಕ್ಷಿಣಿಯ ಶೇ.25 ರಷ್ಟು ಹಣ ನೀಡಬೇಕಾಗುತ್ತದೆ.

ನವದೆಹಲಿ(ಮಾ.12): ವಿವಾದದ ತಾರೆ ಎಂದು ಹೆಸರಾಗಿರುವ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್'ಳ ದಾಂಪತ್ಯ ಮುರಿದು ಬಿದ್ದಿದೆ.

ಪತಿ ಅಸಾದ್ ಖಟ್ಟಾಕ್' ಗೆ ನಟಿ ವೀಣಾ ಮಲ್ಲಿಕ್ ವಿಚ್ಚೇದನ ನೀಡಿದ್ದಾರೆ. ಮೂರು ವರ್ಷದ ಹಿಂದೆ ಅಸಾದ್ ಅವರನ್ನು ಮದುವೆಯಾಗಿದ್ದ ತಾರೆ ವಿಚ್ಚೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರುವ ಕಾರಣ ಒಟ್ಟಿಗೆ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಲಾಹೋರ್ ಕೌಟಿಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಸಮನ್ಸ್'ಗೆ ಆಸದ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣದಿಂದ ಕೋರ್ಟ್ ವಿಚ್ಚೇದನ ನೀಡಿದೆ. ವೀಣಾ ತನ್ನ ಗಂಡನಿಗೆ ವರದಕ್ಷಿಣಿಯ ಶೇ.25 ರಷ್ಟು ಹಣ ನೀಡಬೇಕಾಗುತ್ತದೆ. ಭಾರತದಲ್ಲಿ ನಡೆದ ಬಿಗ್ ಬಾಸ್ ಸ್ಪರ್ಧೆಯ ಸೀಸನ್ 4ರಲ್ಲಿ  ವೀಣಾ ಮಲ್ಲಿಕ್ ಭಾಗವಹಿಸಿದ್ದರು.

Show Full Article
COMMENTS

Currently displaying comments and replies