ಸ್ಯಾಂಡಲ್'ವುಡ್'ನಲ್ಲಿ ಅಲ್ಲಾಡ್ಸು ಅಲ್ಲಾಡ್ಸು ಆಯ್ತು, ಈಗ ಕುಲುಕು ಕುಲುಕು ಹವಾ
entertainment
By Suvarna Web Desk | 04:28 PM June 17, 2017

ಸ್ಯಾಂಡಲ್'ವುಡ್ ನಲ್ಲಿ ಇದೀಗ ಹೊಸ ರೀತಿಯ ಸಾಂಗ್ ಟ್ರೆಂಡಿಂಗ್ ಶುರುವಾಗಿದೆ. ಚೌಕ ಚಿತ್ರದ 'ಅಲ್ಲಾಡ್ಸು ಅಲ್ಲಾಡ್ಸು'  ಸಾಂಗ್ ಚಂದನವನದಲ್ಲಿ ತನ್ನದೇ ಹವಾ ಸೃಷ್ಟಿಸಿದೆ. ಚೌಕ ಚಿತ್ರದ ಅಲ್ಲಾಡ್ಸ್ ಹಾಡಿನ ದಾಟಿಯಲ್ಲೇ ಕುಲುಕು ಕುಲುಕು ಅಂತಾ ಮತ್ತೊಂದು ಟಪ್ಪಾಂಗುಚ್ಚಿ ಸಾಂಗ್ ರೆಡಿಯಾಗಿದೆ. ಯುವಕರನ್ನ ಹುಚ್ಚೆಬ್ಬಿಸಿ ಕುಣಿಸಿದ್ದ ಅಲ್ಲಾಡ್ಸು ಸಾಲಿಗೆ, ಇದೀಗ ಕುಲುಕು ಕುಲುಕು ಸಾಂಗ್ ಸೇರ್ಪಡೆಯಾಗಿದೆ.

ಬೆಂಗಳೂರು (ಜೂ.17): ಸ್ಯಾಂಡಲ್'ವುಡ್ ನಲ್ಲಿ ಇದೀಗ ಹೊಸ ರೀತಿಯ ಸಾಂಗ್ ಟ್ರೆಂಡಿಂಗ್ ಶುರುವಾಗಿದೆ. ಚೌಕ ಚಿತ್ರದ 'ಅಲ್ಲಾಡ್ಸು ಅಲ್ಲಾಡ್ಸು'  ಸಾಂಗ್ ಚಂದನವನದಲ್ಲಿ ತನ್ನದೇ ಹವಾ ಸೃಷ್ಟಿಸಿದೆ. ಚೌಕ ಚಿತ್ರದ ಅಲ್ಲಾಡ್ಸ್ ಹಾಡಿನ ದಾಟಿಯಲ್ಲೇ ಕುಲುಕು ಕುಲುಕು ಅಂತಾ ಮತ್ತೊಂದು ಟಪ್ಪಾಂಗುಚ್ಚಿ ಸಾಂಗ್ ರೆಡಿಯಾಗಿದೆ. ಯುವಕರನ್ನ ಹುಚ್ಚೆಬ್ಬಿಸಿ ಕುಣಿಸಿದ್ದ ಅಲ್ಲಾಡ್ಸು ಸಾಲಿಗೆ, ಇದೀಗ ಕುಲುಕು ಕುಲುಕು ಸಾಂಗ್ ಸೇರ್ಪಡೆಯಾಗಿದೆ.

ಕಲಾ ಸಾಮ್ರಾಟ್ ಎಸ್.ನಾರಾಯಣ್ ಈ ಹಾಡನ್ನ ಬರೆದಿದ್ದಾರೆ. ಸಂಗೀತವೂ ಅವರೇ ಕೊಟ್ಟಿದ್ದಾರೆ. ಅನೂಪ್ ರೇವಣ್ಣ ಅಭಿನಯದ ಪಂಟ ಚಿತ್ರದಲ್ಲಿರೋ ಈ ಹಾಡಲ್ಲಿ, ತಿಥಿ ಗಡ್ಡಪ್ಪ ಮತ್ತು ಸೆಂಚೂರಿ ಗೌಡ ಅಭಿನಯಿಸಿದ್ದಾರೆ. ಸೆಟ್​ನಲ್ಲಿ ಶೂಟ್ ಆಗಿರೋ ಈ ಗೀತೆ ಜನರಿಗೆ ಮಸ್ತ್ ಎಂಟರ್ಟೇನ್ಮೇಂಟ್ ಕೊಡೋದಂತು ಸತ್ಯ.

Show Full Article