Asianet Suvarna News Asianet Suvarna News

ಸುದೀಪ್ ತಾಯಿಯ ರಿಂಗ್ ಟೋನ್ ಯಾವುದು?: ‘ಮುಸ್ಸಂಜೆ ಮಾತು' ಹಾಡುಗಳ ಬಗ್ಗೆ ಕಿಚ್ಚ ಬಿಚ್ಚಿಟ್ಟಸತ್ಯ

ಕಿಚ್ಚ ಸುದೀಪ್‌ ಅಭಿನಯದ ‘ ಮುಸ್ಸಂಜೆ ಮಾತು' ಚಿತ್ರ ಬಂದು ಹೋಗಿ ಇಲ್ಲಿಗೆ 8 ವರ್ಷ. ಮಹೇಶ್‌ ನಿರ್ದೇಶನದ ಈ ಚಿತ್ರ ನಟ ಸುದೀಪ್‌ ಸಿನಿ ಜರ್ನಿಯ ಸಕ್ಸಸ್‌ಫುಲ್‌ ಚಿತ್ರಗಳಲ್ಲೊಂದು. ಕತೆ ಜತೆಗೆ ಹಾಡುಗಳೂ ಸುದ್ದಿ ಮಾಡಿದ್ದವು. ಆ ಚಿತ್ರದ ಮೂಲಕ ಶ್ರೀಧರ್‌ ಸಂಭ್ರಮ್‌ ಸಂಗೀತ ನಿರ್ದೇಶನ ಮಾಡಿದ್ದರು. ಲೇಟೆಸ್ಟ್‌ ಆಗಿ ಈ ಚಿತ್ರದ ಹಾಡುಗಳ ಪ್ರಸ್ತಾಪ ಆಗಿದ್ದು ನಟ ಸುದೀಪ್‌ ಅವರಿಂದ. ಆ ಚಿತ್ರದ ‘ಏನಾಗಲಿ ಮುಂದೆ ಸಾಗು ನೀ' ಗೀತೆ ಸುದೀಪ್‌ ತಾಯಿಯವರ ಮೊಬೈಲ್‌ರಿಂಗ್‌ ಟೋನ್‌ ಆಗಿ ಉಳಿದಿದೆಯಂತೆ!

Kiccha Sudeep Speaks On The Songs Of Mussanje Maatu

ಕಿಚ್ಚ ಸುದೀಪ್‌ ಅಭಿನಯದ ‘ ಮುಸ್ಸಂಜೆ ಮಾತು' ಚಿತ್ರ ಬಂದು ಹೋಗಿ ಇಲ್ಲಿಗೆ 8 ವರ್ಷ. ಮಹೇಶ್‌ ನಿರ್ದೇಶನದ ಈ ಚಿತ್ರ ನಟ ಸುದೀಪ್‌ ಸಿನಿ ಜರ್ನಿಯ ಸಕ್ಸಸ್‌ಫುಲ್‌ ಚಿತ್ರಗಳಲ್ಲೊಂದು. ಕತೆ ಜತೆಗೆ ಹಾಡುಗಳೂ ಸುದ್ದಿ ಮಾಡಿದ್ದವು. ಆ ಚಿತ್ರದ ಮೂಲಕ ಶ್ರೀಧರ್‌ ಸಂಭ್ರಮ್‌ ಸಂಗೀತ ನಿರ್ದೇಶನ ಮಾಡಿದ್ದರು. ಲೇಟೆಸ್ಟ್‌ ಆಗಿ ಈ ಚಿತ್ರದ ಹಾಡುಗಳ ಪ್ರಸ್ತಾಪ ಆಗಿದ್ದು ನಟ ಸುದೀಪ್‌ ಅವರಿಂದ. ಆ ಚಿತ್ರದ ‘ಏನಾಗಲಿ ಮುಂದೆ ಸಾಗು ನೀ' ಗೀತೆ ಸುದೀಪ್‌ ತಾಯಿಯವರ ಮೊಬೈಲ್‌ರಿಂಗ್‌ ಟೋನ್‌ ಆಗಿ ಉಳಿದಿದೆಯಂತೆ!

ಸ್ವತಃ ಸುದೀಪ್‌ ಇದನ್ನು ‘ರಾಜರು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡರು. ಕಿಚ್ಚ ಸುದೀಪ್‌ ಗರಡಿಯಲ್ಲಿ ಬೆಳೆದ ಅನೇಕರಲ್ಲಿ ಗಿರೀಶ್‌ ಮೂಲಿಮನಿ ಕೂಡ ಒಬ್ಬರು. ‘ರಾಜರು' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಮಾಡುತ್ತಿರುವವರು ‘ಮುಸ್ಸಂಜೆ ಮಾತು' ಖ್ಯಾತಿಯ ಶ್ರೀಧರ್‌ ಸಂಭ್ರಮ್‌. ಆ ಸಮಾರಂಭಕ್ಕೆ ನಟ ಮುಖ್ಯ ಅತಿಥಿ ಆಗಿ ಬಂದಿದ್ದ ಸುದೀಪ್‌ ಹೇಳುತ್ತಾ ಹೋದರು: ‘ಮುಸ್ಸಂಜೆ ಮಾತು ಚಿತ್ರದ ಹಾಡಿಗೆ ಸಿಕ್ಕ ರೆಸ್ಪಾನ್ಸ್‌ ಅದ್ಭುತ. ಆಗಾಗ ನಾನೂ ಗುನುಗುನಿಸುತ್ತಲೇ ಇರುತ್ತೇನೆ. ಇವತ್ತಿಗೂ ನನ್ನ ತಾಯಿಯ ಮೊಬೈಲ್‌ ರಿಂಗ್‌ ಟೋನ್‌ ಅದೇ ಚಿತ್ರದ್ದು. ಫೋನ್‌ ಮಾಡಿದರೆ ‘ಏನಾಗಲಿ ಮುಂದೆ ಸಾಗು ನೀ' ಗೀತೆ ಕೇಳಿಸುತ್ತದೆ. ಇದೊಂದು ರೀತಿ ನನಗೆ ನಿತ್ಯ ಪ್ರೇರಣೆ. ಆ ಹಾಡಿಗಿರೋ ಶಕ್ತಿ ಅದು'. ಹಾಗೆನ್ನುತ್ತಲೇ ಅಭಿಮಾನಿಗಳ ಚಪ್ಪಾಳೆ ಮುಗಿಲು ಮುಟ್ಟಿತು. ಪಕ್ಕದಲ್ಲಿದ್ದ ಶ್ರೀಧರ್‌ ಮುಖದಲ್ಲಿ ನಗು ಕಾಣಿಸಿತು. 

ಸಹಜವಾಗಿಯೇ ಆಡಿಯೋ ಬಿಡುಗಡೆ ಮುನ್ನ ಚಿತ್ರದ ಹಾಡು ಮತ್ತು ಸಂಗೀತದ ಕುರಿತು ಮೊದಲ ಮಾತನಾಡಿದ್ದು ಶ್ರೀಧರ್‌. ವೇದಿಕೆ ಹತ್ತಿ ಮಾತಿಗೆ ನಿಂತಾಗ ಅವರು ನಟ ಸುದೀಪ್‌ ಕಾಂಬಿನೇಷ್‌ನಲ್ಲಿ ಕೆಲಸ ಮಾಡಿದ ಮೊದಲ ಚಿತ್ರದ ಅನುಭವ ತೆರೆದಿಟ್ಟರು. ತಾವು ಇವತ್ತು ಈ ಹಂತಕ್ಕೆ ಬರಲು ಸುದೀಪ್‌ ಅವರೇ ಕಾರಣ. ಯಾಕೆಂದರೆ ಅವರ ಜೊತೆಗಿನ ‘ಮುಸ್ಸಂಜೆ ಮಾತು ' ಬ್ಲಾಕ್‌ ಬಸ್ಟರ್‌ ಚಿತ್ರವಾಯಿತು, ಅದಕ್ಕೇ ತಾವು ಸಂಗೀತ ನಿರ್ದೇಶಕನಾಗಿ ಉಳಿಯಲು, ಬೆಳೆಯಲು ಕಾರಣವಾಯಿತು ಎಂದರು ಶ್ರೀಧರ್‌

-ಸಿನಿವಾರ್ತೆ, ಕನ್ನಡಪ್ರಭ

Follow Us:
Download App:
  • android
  • ios