Asianet Suvarna News Asianet Suvarna News

ಥ್ಯಾಂಕ್ಸ್ ಟು ಮೀಡಿಯಾ ನೀವು ಹೊಗಳುತ್ತಿದ್ದರೆ ನಾನು ಬೆಳೆಯುತ್ತಿರಲಿಲ್ಲ

ನಾವು ಚಿಕ್ಕವರಾಗಿದ್ದಾಗ ಅಪ್ಪಾಮ್ಮ ಹೇಳಿಕೊಟ್ಟಿದ್ರು, ಇಷ್ಟು ಹೊತ್ತಿಗೇ ಮಲಗಬೇಕು, ಎದ್ದ ತಕ್ಷಣ ಬಾತ್ ರೂಮ್ ಗೆ ಹೋಗಿ ಬರಬೇಕು. ಇಷ್ಟು ಹೊತ್ತಿಗೇ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಅಂತ ಇತ್ತು. ಪಾಲಿಸಿಕೊಂಡೇ ಬಂದಿದ್ದೆ. ಬರ್ತಾ ಬರ್ತಾ ನನ್ನ ಜೀವನ ನನ್ನ ಕಂಟ್ರೋಲ್‌ಗೆ ಬಂತು. ಎಷ್ಟು ಹೊತ್ತಿಗೆ ಊಟ, ಎಷ್ಟು ಹೊತ್ತಿಗೆ ಬಾತ್‌ರೂಮ್, ಎಷ್ಟು ಹೊತ್ತಿಗೆ ನಿದ್ದೆ, ತಿಂಡಿ ಅಂತ ನಾನೇ ಡಿಸೈಡ್ ಮಾಡ್ದೆ. ನಿದ್ದೆ ಬರ್ತಿದ್ಯಾ, ಮಲಗ್ಬೇಕು, ಹಸಿವಾಗ್ತಿದ್ಯಾ, ಊಟ, ತಿಂಡಿ ಮಾಡ್ಬೇಕು. ಹೀಗೇ ಮಾಡ್ಬೇಕು ಅಂತ ಅನ್ನೋ ಡಿಸಿಶನ್ ಅಲ್ಲ, ಮಾಡೋ ಹೊತ್ತಿಗೆ ಮಾಡಬೇಕಾಗಿದ್ದನ್ನು ಮಾಡ್ಬೇಕು ಅನ್ನೋದು! -ಹಾಗೆಂದರು ನಟ ಸುದೀಪ್.

Kiccha Sudeep Speaks After Releasing Hebbuli

ನಾವು ಚಿಕ್ಕವರಾಗಿದ್ದಾಗ ಅಪ್ಪಾಮ್ಮ ಹೇಳಿಕೊಟ್ಟಿದ್ರು, ಇಷ್ಟು ಹೊತ್ತಿಗೇ ಮಲಗಬೇಕು, ಎದ್ದ ತಕ್ಷಣ ಬಾತ್ ರೂಮ್ ಗೆ ಹೋಗಿ ಬರಬೇಕು. ಇಷ್ಟು ಹೊತ್ತಿಗೇ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಅಂತ ಇತ್ತು. ಪಾಲಿಸಿಕೊಂಡೇ ಬಂದಿದ್ದೆ. ಬರ್ತಾ ಬರ್ತಾ ನನ್ನ ಜೀವನ ನನ್ನ ಕಂಟ್ರೋಲ್‌ಗೆ ಬಂತು. ಎಷ್ಟು ಹೊತ್ತಿಗೆ ಊಟ, ಎಷ್ಟು ಹೊತ್ತಿಗೆ ಬಾತ್‌ರೂಮ್, ಎಷ್ಟು ಹೊತ್ತಿಗೆ ನಿದ್ದೆ, ತಿಂಡಿ ಅಂತ ನಾನೇ ಡಿಸೈಡ್ ಮಾಡ್ದೆ. ನಿದ್ದೆ ಬರ್ತಿದ್ಯಾ, ಮಲಗ್ಬೇಕು, ಹಸಿವಾಗ್ತಿದ್ಯಾ, ಊಟ, ತಿಂಡಿ ಮಾಡ್ಬೇಕು. ಹೀಗೇ ಮಾಡ್ಬೇಕು ಅಂತ ಅನ್ನೋ ಡಿಸಿಶನ್ ಅಲ್ಲ, ಮಾಡೋ ಹೊತ್ತಿಗೆ ಮಾಡಬೇಕಾಗಿದ್ದನ್ನು ಮಾಡ್ಬೇಕು ಅನ್ನೋದು! -ಹಾಗೆಂದರು ನಟ ಸುದೀಪ್.

ಪ್ರಶ್ನೆ ಹೀಗಿತ್ತು.

‘ನಿಮ್ಮ ಥರದ ಸ್ಟಾರ್‌ಗಳು ವರ್ಷಕ್ಕೊಂದು ಸಿನಿಮಾ ಅಂತ ಮಾಡುತ್ತಾ ಹೋದರೆ ಸಾಕಾ, ಜಾಸ್ತಿ ಚಿತ್ರ ಮಾಡಬಾರದಾ?’

-ಸುದೀಪ್ ಹೀಗೇ... ಮಾತು ಅಂದರೆ ಮಂತ್ರವಲ್ಲ, ಮೊಳೆ ಏಟು. ಹೇಳಿದ್ದನ್ನು ಖಡಕ್ ಆಗಿಯೇ ಹೇಳಿ ಅಭ್ಯಾಸ. ‘ಹೆಬ್ಬುಲಿ’ ಚಿತ್ರ ಬಿಡುಗಡೆಯ ಗಡಿಬಿಡಿಯಲ್ಲಿ ಇದ್ದ ಸುದೀಪ್ ಪತ್ರಕರ್ತರ ಜೊತೆ ಹರಟುತ್ತಾ ಹೋದರು, ತಮ್ಮ ಮನೆಯನ್ನೇ ಕನ್ನಡ ಚಿತ್ರರಂಗದ ಗಣ್ಯರ ಆಟೋ ಆಲ್ಬಂ ಮಾಡಿದ್ದರ ಸ್ವಾರಸ್ಯ ಹೇಳಿಕೊಂಡರು, ಸ್ಟ್ರಾಂಗ್ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟರು, ಸ್ವಲ್ಪ ಕುಟುಕಿದರು, ಸ್ವಲ್ಪ ಮೊಟಕಿದರು, ಕೆರಳಿದರು, ಮುಗುಳ್ನಕ್ಕರು, ಪ್ರೀತಿಯ ಮಾತನ್ನಾಡಿದರು, ನಿರ್ಮಾಪಕರನ್ನು ಮೆಚ್ಚಿಕೊಂಡರು. ಅವರ ಮಾತುಗಳು ಅವರದೇ ಹೇಳಿಕೆಗಳಲ್ಲಿ.

-ನಾನು ಬೇರೆ ಥರ ಸಿನಿಮಾವನ್ನೇ ಮಾಡಿಕೊಂಡು ಬರುತ್ತಿದ್ದೆ, ಅದನ್ನು ಬಿಟ್ಟು ರೆಗ್ಯುಲರ್ ಕಮರ್ಶಿಯಲ್ ಚಿತ್ರ ಮಾಡೋದಕ್ಕೆ ನೀವು ಮಾಧ್ಯಮದವರೇ ಕಾರಣ.

-ಈ ಚಿತ್ರದ ಟ್ರೇಲರ್‌ನಲ್ಲಿ ಡೈಲಾಗ್‌ಗಿಂತ ಮೌನವನ್ನೇ ಹೆಚ್ಚು ಬಳಸಿಕೊಂಡಿರೋದು ನನ್ನ ಸ್ಟೈಲ್. ಬೇರೆಯವರು ಡೈಲಾಗ್‌ನಲ್ಲಿ ಹೇಳಬಹುದು, ನಾನು ಹೀಗೆ ಹೇಳ್ತೇನೆ ಅಷ್ಟೇ!

-ನಾನು ಹೊಸ ಪಾತ್ರಕ್ಕೆ ಪ್ರವೇಶ ಮಾಡೋಲ್ಲ, ನಾನು ಆ ಪಾತ್ರ ಮಾಡಿದರೆ ಹೇಗೆ ಇರಬಹುದು ಅಂತ ನೋಡಿಕೊಳ್ತೇನೆ. ಸುದೀಪ್ ಪಾರಾ ಕಮಾಂಡರ್ ಆದರೆ, ಸುದೀಪ್ ಲವ್ವರ್ ಆದರೆ, ಸುದೀಪ್ ರೌಡಿ ಆದರೆ ಹೇಗೆ ವ್ಯವಹರಿಸ್ಬಹುದೋ ಹಾಗೆ ಪಾತ್ರವಾಗ್ತೀನಿ.

-ನಾನು ಬಾಹುಬಲಿ 2 ಮಾಡ್ತಿಲ್ಲ, ಮೊದಲ ಭಾಗದಲ್ಲಿ ಇದ್ದೆ, ನಟಿಸಿ ಬಂದೆ, 2ನೇ ಭಾಗಕ್ಕೆ ಕರೆ ಬರಲಿಲ್ಲ, ಮಾಡಲಿಲ್ಲ.

-ನನ್ನ ಸಿನಿಮಾ ನಿರ್ಮಿಸೋ ನಿರ್ಮಾಪಕರಿಗೆ ಬೇರೆ ಸ್ಟಾರ್‌ಗಳ ಚಿತ್ರವನ್ನೂ ಮಾಡಿ ಅಂತ ಹೇಳಿದ್ದೇನೆ, ನನಗೇ ಸೀಮಿತ ಆಗೋದು ಬೇಡ. ಆದರೆ ಬೇರೆ ಸ್ಟಾರ್‌ಗಳು ಅಷ್ಟೊಂದು ಉದಾರವಾಗಿಲ್ಲ!

-ಕಲಾವಿದನ ಯೋಗ್ಯತೆ ಅವನಿಗೇ ಗೊತ್ತಿರುವಾಗ ಬೇರೆಯವರಿಗೆ ಅವಕಾಶ ಹೋಯಿತು ಅಂತೆಲ್ಲಾ ಹತಾಶನಾಗುವ ಅವಶ್ಯಕತೆ ಇಲ್ಲ. ತನ್ನ ಬಗ್ಗೆ ತನಗೆ ಭರವಸೆ ಇಲ್ಲದೇ ಹೋದರೆ ಮಾತ್ರ ಈ ಸಮಸ್ಯೆ ಕಾಡುತ್ತದೆ.

- ಎಷ್ಟೋ ಮಂದಿ ಸಿನಿಮಾ ನಿರ್ಮಾಣ ವೆಚ್ಚ, ಗಳಿಕೆ ಬಗೆಗೆಲ್ಲಾ ತಪ್ಪು ಲೆಕ್ಕ ಕೊಟ್ಟು, ನಾಟಕ ಮಾಡುವಾಗ ನಾನು ಎಷ್ಟು ಕೆಟ್ಟ ನಟ ಅಂತ ನನಗೇ ಪಶ್ಚಾತ್ತಾಪವಾಗಿದೆ.

-ನಾನು ಮೊದಲು ಮಾಡುವಂಥ ಚಿತ್ರಗಳನ್ನೇ ಮಾಡಿಕೊಂಡು, ಮಾಧ್ಯಮದವರು ಹೊಗಳುತ್ತಿದ್ದರೆ ನಾನು ಇವತ್ತು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಥ್ಯಾಂಕ್ಸ್ ಟು ಮೀಡಿಯಾ.

-ಯಾವಾಗಲೂ ಇಂಥ ಟ್ರೆಂಡ್ ಗೆಲ್ಲುತ್ತದೆ ಅನ್ನುವುದು ಸುಳ್ಳು. ಎಲ್ಲರೂ ಹೇಳೋದು ಒಂದೇ ಕತೆಯನ್ನು, ಹೇಳೋ ರೀತಿ ಬೇರೆ ಅಷ್ಟೇ.

-ಯಾರೇ ಹಿಟ್ ಕೊಟ್ಟರೂ, ಫ್ಲಾಪ್ ಕೊಟ್ಟರೂ ಮತ್ತೊಂದು ಚಿತ್ರವನ್ನು ಎಬಿಸಿಡಿಯಿಂದಲೇ ಪ್ರಾರಂಭಿಸಬೇಕು.

-ನನ್ನ ಮುಂದಿನ ಚಿತ್ರ ನಿರ್ದೇಶಿಸೋ ‘ಜೋಗಿ’ ಪ್ರೇಮ್, ಬಹಳ ಉತ್ಸಾಹದ, ಎಂಥೂಸಿಯಾಸ್ಟಿಕ್ ನಿರ್ದೇಶಕ, ಅವರನ್ನು ತಪ್ಪಾಗಿ ಎಲ್ಲರೂ ಭಾವಿಸಿದ್ದಾರೆ, ಮುಂದೆ ಅವರ ಬಗ್ಗೆ ಹೇಳ್ತೀನಿ.

-ಕೆಲವೊಮ್ಮೆ ನಾನು ರಿಜೆಕ್ಟ್ ಮಾಡಿದ ಕತೆಗಳು ಇನ್ಯಾರೋ ನಟಿಸಿ, ಗೆದ್ದಿದ್ದಿದೆ. ಅದರರ್ಥ ಅದು ನನಗೆ ಹೊಂದೋದಿಲ್ಲ ಅಂತಷ್ಟೇ. ಈಗ ‘ದಂಗಲ್’ ಚಿತ್ರವನ್ನು ಅಮೀರ್ ಮಾತ್ರ ಮಾಡೋಕ್ಕೆ ಸಾಧ್ಯ.

-ಸಿನಿಮಾ ಒಂದೇ ಜೀವನ ಅನ್ನುವ ಭಾವನೆ ಇರಬಾರದು, ನೀವೂ ಅಷ್ಟೇ. ಇಷ್ಟೇ ಜೀವನ ಅಂತ ಅಂದುಕೊಂಡು ಓಡುತ್ತಿದ್ದರೆ ಎಷ್ಟೋ ಒಳ್ಳೆಯದನ್ನು ಕಳಕೊಳ್ಳುತ್ತೀರಿ.

-ವಿಕಾಸ ನೇಗಿಲೋಣಿ

 

Follow Us:
Download App:
  • android
  • ios