Asianet Suvarna News Asianet Suvarna News

ಕೀಟ್ಲೆ ಕೃಷ್ಣನ ಕ್ವಾಟ್ಲೆ ಎಪಿಸೋಡು

ಕೀಟ್ಲೆ ಕೃಷ್ಣನ ಗೆಳೆಯ ಪರಮೇಶಿಗೆ ವಿಚಿತ್ರ ಗ್ಯಾಸ್ಟ್ರಬಲ್‌. ಅದಕ್ಕೆ ಕಾರಣ ಆತನಿಗೆ ಆಲೂ ಮೇಲಿನ ಪ್ರೀತಿ. ಶಾಲೆಯಲ್ಲಿ ಆತನದ್ದೇ ಹವಾ. ಮಕ್ಕಳು ಮೂಗು ಹಿಡಿದು ಕುಳಿತುಕೊಳ್ಳುವ ಸನ್ನಿವೇಶಗಳ ಮೂಲಕ ನಿರ್ದೇಶಕರು ಸಿಡಿಸಲೆತ್ನಿಸಿದ ನಗೆ ಬಾಂಬ್ಹುಸಿ ಆಗಿದೆ. ಅಸಲಿಗೆ ಅದು ತಮಾಷೆ ಅಂತ ಎನಿಸುವುದೇ ಇಲ್ಲ. ಆದರೂ, ಅನಾಮತ್‌ 15 ನಿಮಿಷದಷ್ಟುಕಾಲ ನಿರ್ದೇಶಕರು ಕತೆಯನ್ನು ಗ್ಯಾಸ್ಟ್ರಬಲ್ಪುರಾಣದಲ್ಲಿಯೇ ತಳ್ಳಿ ಬಿಟ್ಟಿದ್ದು ವಿಚಿತ್ರ. ಎಲ್ಲಿಂದಲೋ ಬಂದ ಕತೆ, ಮಕ್ಕಳ ಶಾಲೆ ದಿನಗಳ ಹಂತಕ್ಕೆ ಬಂದು ನಿಲ್ಲುತ್ತದೆ. ಅಲ್ಲೊಂದಿಷ್ಟುಬೋಧನೆಗಳು ಕೇಳುತ್ತವೆ. ಮಕ್ಕಳು ದೇವರು, ಅವರು ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು ಅಂತೆಲ್ಲ ಹೇಳುವುದಕ್ಕೆ ಕೆಲವು ದೃಶ್ಯಗಳು ವ್ಯಯವಾಗುತ್ತವೆ. ಇನ್ನೇನು ಮಕ್ಕಳ ಸಿನಿಮಾ ಎನ್ನುವುದಕ್ಕಾಗಿ ನಿರ್ದೇಶಕರು, ಮಕ್ಕಳಿಗೆ ಶಾಲೆಯ ಮಹತ್ವ ಹೇಳುತ್ತಾರೆಂದರೆ ಮುಂದೆ ಅದು ಕೂಡ ಹುಸಿ ಆಗುತ್ತದೆ. ಪ್ರಶಾಂತ್ಸಿದ್ದಿಗೆ ಮಕ್ಕಳ ಕೀಟ್ಲೆ, ಅಲ್ಲಿಂದ ಶಾಲೆಯಲ್ಲಿ ಗ್ಯಾಸ್ಟ್ರಬಲ್ಪುರಾಣದ ಜತೆಗೆ ಮಧ್ಯಂತರಕ್ಕೆ ಕೀಟ್ಲೆ ಕೃಷ್ಣನ ಹುಟ್ಟಿನ ಮೂಲಕ್ಕೆ ಬಂದು ನಿಲ್ಲುತ್ತದೆ.

Keetle Krishna Movie Review

ಮೊತ್ತಮೊದಲು ಮೂಡೋ ಪ್ರಶ್ನೆ, ನಿರ್ದೇಶಕ ಹೇಳಲು ಹೊರಟಿದ್ದಾದರೂ ಏನು?
‘ಕೀಟ್ಲೆ ಕೃಷ್ಣ 'ಹೆಸರಿನ ಹೊಸಬರ ಚಿತ್ರ ನೋಡಿ ಹೊರ ಬಂದಾಗ ಕಟ್ಟಕಡೆಯದಾಗಿ ನಿಮ್ಗೂ ಕಾಡುವ ಪ್ರಶ್ನೆ ಇದು. ಯಾಕಂದ್ರೆ, ಅಲ್ಲಿ ನಿರ್ದೇಶಕ ಆಯ್ಕೆ ಮಾಡಿಕೊಂಡ ಕತೆಯ ಮುಖ್ಯ ತಿರುಳೇನು? ನಿರ್ದೇಶಕರ ಗಮನ ಕೇಂದ್ರಿಕೃತವಾಗಿದ್ದು ಎಲ್ಲಿ? ಅಲ್ಲಿ ಹೇಳ ಹೊರಟ ವಿಚಾರಕ್ಕಾವುದಕ್ಕೂ ತಳವಿಲ್ಲ, ಬುಡವಿಲ್ಲ. ಹೀಗಾಗಿ ಇದು ಕೀಟ್ಲೆಯೋ ಕ್ವಾಟ್ಲೆಯೋ..ಅಕಟಕಟ ಎನ್ನುವುದು ನೋಡುಗನ ಅನುಭವ. ಟೈಟಲ್‌ ನೋಡಿದ್ರೆ ಇದೊಂದು ಕಾಮಿಡಿ ಸಿನಿಮಾ. ಚಿತ್ರಮಂದಿರಕ್ಕೆ ಹೋಗಿ ಕುಳಿತಾಗ ಪ್ರೇಕ್ಷಕರಿಗೆ ಆಗುವ ಮೊದಲ ಅನುಭವ ಕೂಡ ಅದೇ. ಮುಗ್ಧನಂತೆ ಕಾಣಿಸಿಕೊಂಡ ಹಾಸ್ಯ ನಟ ಪ್ರಶಾಂತ್‌ ಸಿದ್ಧಿಗೆ ಕೀಟ್ಲೆ ಕೃಷ್ಣ ಮತ್ತವನ ಗೆಣೆಕಾರರ ಕಾಟ. ಆತ ವಟವಟ ಮಾತಿನ ಮನುಷ್ಯ. ಜಗುಲಿ ಕಟ್ಟೆಮೇಲೆ ಮಲಗಿದ ಆತನಿಗೆ ಹುಡುಗರು ಪಟಾಕಿ ಸಿಡಿಸಿ, ಕೀಟ್ಲೆ ಕೊಡುತ್ತಾರೆ. ಆ ಕಾರಣಕ್ಕೆ ಹುಡುಗರ ಮೇಲೆ ತಿರುಗುವ ಆತನ ಸಿಟ್ಟು ಸೆಡುವು, ಟೆರಾಸ್‌ ಕಿತ್ತು ಹೋಗುವ ಮಾತಿನ ಮೂಲಕ ಪ್ರೇಕ್ಷಕರಿಗೆ ತಿವಿಯುತ್ತವೆ. ಸಾಕಪ್ಪ ಎಂದು ಸುಧಾರಿಸಿಕೊಳ್ಳುವ ಹೊತ್ತಿಗೆ ಕೀಟ್ಲೆ ಹುಡುಗರ ಗ್ಯಾಸ್‌ ಟ್ರಬಲ್‌ ಪುರಾಣ ಶುರು ಆಗುತ್ತದೆ.

ಕೀಟ್ಲೆ ಕೃಷ್ಣನ ಗೆಳೆಯ ಪರಮೇಶಿಗೆ ವಿಚಿತ್ರ ಗ್ಯಾಸ್‌ ಟ್ರಬಲ್‌. ಅದಕ್ಕೆ ಕಾರಣ ಆತನಿಗೆ ಆಲೂ ಮೇಲಿನ ಪ್ರೀತಿ. ಶಾಲೆಯಲ್ಲಿ ಆತನದ್ದೇ ಹವಾ. ಮಕ್ಕಳು ಮೂಗು ಹಿಡಿದು ಕುಳಿತುಕೊಳ್ಳುವ ಸನ್ನಿವೇಶಗಳ ಮೂಲಕ ನಿರ್ದೇಶಕರು ಸಿಡಿಸಲೆತ್ನಿಸಿದ ನಗೆ ಬಾಂಬ್‌ ಹುಸಿ ಆಗಿದೆ. ಅಸಲಿಗೆ ಅದು ತಮಾಷೆ ಅಂತ ಎನಿಸುವುದೇ ಇಲ್ಲ. ಆದರೂ, ಅನಾಮತ್‌ 15 ನಿಮಿಷದಷ್ಟುಕಾಲ ನಿರ್ದೇಶಕರು ಕತೆಯನ್ನು ಗ್ಯಾಸ್‌ ಟ್ರಬಲ್‌ ಪುರಾಣದಲ್ಲಿಯೇ ತಳ್ಳಿ ಬಿಟ್ಟಿದ್ದು ವಿಚಿತ್ರ. ಎಲ್ಲಿಂದಲೋ ಬಂದ ಕತೆ, ಮಕ್ಕಳ ಶಾಲೆ ದಿನಗಳ ಹಂತಕ್ಕೆ ಬಂದು ನಿಲ್ಲುತ್ತದೆ. ಅಲ್ಲೊಂದಿಷ್ಟುಬೋಧನೆಗಳು ಕೇಳುತ್ತವೆ. ಮಕ್ಕಳು ದೇವರು, ಅವರು ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು ಅಂತೆಲ್ಲ ಹೇಳುವುದಕ್ಕೆ ಕೆಲವು ದೃಶ್ಯಗಳು ವ್ಯಯವಾಗುತ್ತವೆ. ಇನ್ನೇನು ಮಕ್ಕಳ ಸಿನಿಮಾ ಎನ್ನುವುದಕ್ಕಾಗಿ ನಿರ್ದೇಶಕರು, ಮಕ್ಕಳಿಗೆ ಶಾಲೆಯ ಮಹತ್ವ ಹೇಳುತ್ತಾರೆಂದರೆ ಮುಂದೆ ಅದು ಕೂಡ ಹುಸಿ ಆಗುತ್ತದೆ. ಪ್ರಶಾಂತ್‌ ಸಿದ್ದಿಗೆ ಮಕ್ಕಳ ಕೀಟ್ಲೆ, ಅಲ್ಲಿಂದ ಶಾಲೆಯಲ್ಲಿ ಗ್ಯಾಸ್‌ ಟ್ರಬಲ್‌ ಪುರಾಣದ ಜತೆಗೆ ಮಧ್ಯಂತರಕ್ಕೆ ಕೀಟ್ಲೆ ಕೃಷ್ಣನ ಹುಟ್ಟಿನ ಮೂಲಕ್ಕೆ ಬಂದು ನಿಲ್ಲುತ್ತದೆ.

ಅಸಲು ಕತೆ ಅಲ್ಲಿಂದ ಶುರು. ಮುಂದೇನೋ ನಿರ್ದೇಶಕರು ಹೇಳಲು ಹೊರಟಿದ್ದಾರೆ ಎನ್ನುವ ನಿರೀಕ್ಷೆ ನೋಡುಗರದ್ದು. ಕೀಟ್ಲೆ ಕೃಷ್ಣ ಅನಾಥ. ತಾನು ತಂದೆ-ತಾಯಿ ಅಂದುಕೊಂಡವರು ಸಾಕು ಪೋಷಕರು. ಅಕಸ್ಮಾತ್‌ ಆ ವಿಷಯ ಗೊತ್ತಾಗಿ ದುಃಖಿತನಾಗುತ್ತಾನೆ. ಸಾಕು ತಂದೆ ತಾಯಿ ಸಂತೈಸುತ್ತಾರೆ. ಆತ ಯಾರು ಎಂಬುದಾಗಿ ಹೇಳುತ್ತಾರೆ. ಮುಂದೇನು ಎನ್ನುವ ಹೊತ್ತಿಗೆ ಶಾಲಾ ಮಕ್ಕಳ ಪ್ರವಾಸ ಆರಂಭ. ಪ್ರವಾಸಕ್ಕೆ ಹೋದ ಮಕ್ಕಳ ಪೈಕಿ ಪರಮೇಶಿ ಸೇರಿ ಮೂವರು ಮಕ್ಕಳು ಕಾಣೆ ಆಗುತ್ತಾರೆ. ವಿಚಿತ್ರ ಅಂದ್ರೆ ಎಳೆ ಮಕ್ಕಳು ಸಿಟಿಯಲ್ಲಿ ದುಡಿದು ದೊಡ್ಡವರಾಗಿ ಹಳ್ಳಿಗೆ ಮರಳುವ ಕನಸು ಕಾಣುತ್ತಾರೆ. ಎಳೆ ಮಕ್ಕಳ ಮನಸ್ಸಲ್ಲಿ ದುಡಿಯುವ ಕನಸು ಅದ್ಹೇಗೆ ಬಿತ್ತುತ್ತಾರೋ ನಿರ್ದೇಶಕರು ಗೊತ್ತೇ ಆಗುವುದಿಲ್ಲ. ಮಕ್ಕಳು ಕಾಣೆಯಾಗಿ ಮಕ್ಕಳನ್ನು ಅಪಹರಿಸುವ ಜಾಲಕ್ಕೆ ಸಿಲುಕುವ ಸಂದರ್ಭಕ್ಕೆ ಎಳೆ ಮಕ್ಕಳಲ್ಲಿ ದುಡಿಯುವ ಕನಸು ಬಿತ್ತಲಾಗಿದೆ. ಅಲ್ಲಿಂದ ಕತೆ ಮಕ್ಕಳ ಅಪಹರಣದ ಜಾಲಕ್ಕೆ ಬಂದು ನಿಲ್ಲುತ್ತದೆ. ಪೆಟ್ರೋಲ್‌ ಪ್ರಸನ್ನ ಆ್ಯಂಡ್‌ ಗ್ಯಾಂಗ್‌ ಈ ಜಾಲದಲ್ಲಿದ್ದಾಗ ಅವರಿಗೆ ಕೀಟ್ಲೆ ಕೃಷ್ಣ ಕೂಡ ಸಿಕ್ಕಿ ಬೀಳುತ್ತಾನೆ. ಆತ ತನ್ನ ಜಾಣತನದಿಂದ ಏನು ಮಾಡುತ್ತಾನೆ ಎನ್ನುವುದು ಕತೆಯ ಕ್ಲೈಮ್ಯಾಕ್ಸ್‌. ಎಷ್ಟೊಂದು ಸಂಗತಿಗಳು? ಅವ್ಯಾವೂ ಪ್ರೇಕ್ಷಕರನ್ನು ಕಾಡಿಸುವುದೇ ಇಲ್ಲ.
ಕೀಟ್ಲೆ ಕೃಷ್ಣನಾಗಿ ಮಾಸ್ಟರ್‌ ಹೇಮಂತ್‌, ಪರಿಮೇಶಿ ಪಾತ್ರದಲ್ಲಿ ಮಧುಸೂದನ್‌, ಕೃಷ್ಣನ ಪೋಷಕರಾಗಿ ನೀನಾಸಂ ಅಶ್ವತ್ಥ್ ಹಾಗೂ ಸ್ಪಂದನಾ, ಪೊಲೀಸ್‌ ಇನ್ಸ್‌ಸ್ಪೆಕ್ಟರ್‌ ಆಗಿ ಹರೀಶ್‌ ರಾಜ್‌ ಪಾತ್ರಗಳಲ್ಲಿ ನ್ಯಾಯ ತುಂಬಿದ್ದಾರೆ. ಆದರೆ ಯಾರ ಪಾತ್ರವೂ ಮನಸಲ್ಲಿ ಉಳಿಯುವುದಿಲ್ಲ. ರವಿ ಬಸ್ರೂರು ಸಂಗೀತ, ರಾಮ್‌ ರೆಡ್ಡಿಯವರ ಛಾಯಾಗ್ರಹಣದಲ್ಲೂ ಸೆಳೆತವಿಲ್ಲ. 12 ದಿನದಲ್ಲಿಯೇ ಚಿತ್ರೀಕರಣ ಮಾಡಿದ ನಿರ್ಮಾಪಕ ರಾಜೀವ್‌ ಕೊಠಾರಿ ಅವರಿಗೆ ಒಂದು ಸಿನಿಮಾ ನಿರ್ಮಾಣ ಮಾಡಿದ್ದಷ್ಟೇ ಖುಷಿ. 

ವಿಮರ್ಶೆ: ದೇಶಾದ್ರಿ ಹೊಸ್ಮನೆ

Follow Us:
Download App:
  • android
  • ios