Asianet Suvarna News Asianet Suvarna News

ಅಮೀರ್ ಖಾನ್ ಬಾಳಲ್ಲಿ ಹೊಸ ಗೆಳತಿ: ಶೀಘ್ರದಲ್ಲೇ ಕಿರಣ್ ರಾವ್'ಗೆ ಸೋಡಾ ಚೀಟಿ !

ಮೀರ್ ವರ್ತನೆಗೆ ಕಿರಣ್ ರಾವ್ ಸಿಟ್ಟಾಗಿದ್ರಂತೆ.ಆದರೆ,ಪ್ರೀತಿಸಿ ಮದುವೆ ಆದ ಕಿರಣ್ ರಾವ್ ಗೂ ಅಮಿರ್ ಕೈಗೊಡೋ ಹಂಗಿದೆ

Is Aamir Khan all set to divorce his wife Kiran Rao

ಬಾಲಿವುಡ್​ ನಲ್ಲಿ ಹೊಸ ಸುದ್ದಿ ಹೊರ ಬಿದ್ದಿದೆ.ಪರ್ಫೆಕ್ಟ್ ಅಮಿರ್ ಖಾನ್  ಬಾಳಲ್ಲಿ ಈಗ ಬಿರುಗಾಳಿ ಎದ್ದಂತಿದೆ.ಆಮಿರ್ ತಮ್ಮ 2 ನೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ಕೊಡ್ತಾರೆಂಬ ದೊಡ್ಡು ಸುದ್ದಿ ಹರಿದಾಡುತ್ತಿದೆ.

ಫಾತಿಮಾ ಸನಾ ಶೇಖ್ ಈಗ ಆಮೀರ್ ಜೀವನದ ಅಕಾಡದಲ್ಲಿ ಇಳಿದಿದ್ದಾರೆ.ಅಮೀರ್ ಮತ್ತು ಫಾತಿಮಾ ಒಟ್ಟಿಗೆ ಓಡಾಡ್ತಿರೋದು ನಿಜ. ಇದು ಬಿಡಿ, ಆಮೀರ್ ತಮ್ಮ ಮುಂದಿನ ಪ್ರೋಜೆಕ್ಟ್ ’ ಥಗ್ಸ್ ಆಫ್ ಹಿಂದುಸ್ತಾನಿ ’ಚಿತ್ರಕ್ಕೆ ಫಾತಿಮಾ ಸನಾ ಶೇಖ್ ರನ್ನೇ ಆಯ್ಕೆ ಮಾಡಿಸಿದ್ದಾರೆ.ಅಮೀರ್ ವರ್ತನೆಗೆ ಕಿರಣ್ ರಾವ್ ಸಿಟ್ಟಾಗಿದ್ರಂತೆ.ಆದರೆ,ಪ್ರೀತಿಸಿ ಮದುವೆ ಆದ ಕಿರಣ್ ರಾವ್ ಗೂ ಅಮಿರ್ ಕೈಗೊಡೋ ಹಂಗಿದೆ. ಈ ಹಿಂದೆ ರೀನಾ ದತ್ತರನ್ನ ಮದುವೆ ಆಗಿದ್ದು  2ಮಕ್ಕಳೂ ಇವೆ. ಆಗಲೇ ಆಮೀರ್ ಜೀವನದಲ್ಲಿ ಕಿರಣ್ ರಾವ್ ಬಂದ್ರು. ಈಗ ಆಮೀರ್ ಲೈಫ್​​ನಲ್ಲಿ ಫಾತಿಮಾ ಬಂದಿದ್ದಾರೆ. ಕಿರಣ್ ರಾವ್ ಗೆ ಡಿವೋರ್ಸ್ ಕೊಡ್ತಾರಾ..?ಅನ್ನೋ ಪ್ರಶ್ನೆಗೆ ಆಮೀರ್ ಖಾನ್ ಅವರೇ ಉತ್ತರ ಕೊಡಬೇಕು.ಈ ಬಗ್ಗೆ ಅಧಿಕೃತ ಮಾಹಿತಿ ಯಾರಿಂದಲೂ ಹೊರ ಬಿದ್ದಿಲ್ಲ.ಆದ್ರೂ ಸುದ್ದಿ ಮಾತ್ರ ಕಾಡ್ಗಿಚ್ಚಿನಂತೆ ಹರಡುತ್ತಿದೆ.

Follow Us:
Download App:
  • android
  • ios