ಮೈನವಿರೇಳಿಸುವ ಬಾಹುಬಲಿ-2 ಟ್ರೇಲರ್; ಮೊದಲ ಭಾಗಕ್ಕಿಂತಲೂ ಉತ್ಕೃಷ್ಟವಾಗಿದೆ ದೃಶ್ಯವೈಭವ
entertainment
By Suvarna Web Desk | 07:45 AM March 16, 2017

ಕಟ್ಟಪ್ಪ ಯಾಕೆ ಬಾಹುಬಲಿಯನ್ನ ಕೊಂದ ಎಂಬ ಪ್ರಶ್ನೆಗೆ ಟ್ರೇಲರ್'ನಲ್ಲಿ ಉತ್ತರದ ಸುಳಿವನ್ನೂ ಕೊಟ್ಟಿಲ್ಲ. ಮೊದಲ ಭಾಗದಿಂದ ಉಳಿದ ಕುತೂಹಲವನ್ನು ರಾಜಮೌಳಿ ಹಾಗೇ ಉಳಿಸಿಕೊಂಡು ಬಂದಿದ್ದಾರೆ.

ಹೈದರಾಬಾದ್(ಮಾ. 16): ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷೆಯ ಬಾಹುಬಲಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್'ನಲ್ಲಿರುವ ದೃಶ್ಯಗಳನ್ನು ನೋಡಿದರೆ ಮೊದಲ ಭಾಗಕ್ಕಿಂತಲೂ ಇದು ದೊಡ್ಡ ನಿರೀಕ್ಷೆ ಹುಟ್ಟಿಸುವಂತಿದೆ. ಕ್ಷಣಕ್ಷಣವೂ ಮೈನವಿರೇಳಿಸುವ ದೃಶ್ಯಗಳ ಸಂಯೋಜನೆ ಈ ಟ್ರೇಲರ್'ನಲ್ಲಿದೆ. ಯೂಟ್ಯೂಬ್'ನಲ್ಲಿ ಅಪ್'ಲೋಡ್ ಆದ ಒಂದೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ದೃಶ್ಯದಲ್ಲಿ ವಿಎಫ್'ಎಕ್ಸ್ ಗ್ರಾಫಿಕ್ಸ್'ನ ಕೈಚಳಕ ಅದ್ಭುತವಾಗಿದೆ. ಪ್ರಭಾಸ್, ರಾಣಾ ದಗ್ಗುಬಾಟಿ ಎಂದಿನಂತೆ ತೀಕ್ಷ್ಣ ಅಭಿನಯ ನೀಡಿರುವಂತಿದೆ.

ಆದರೆ, ಕಟ್ಟಪ್ಪ ಯಾಕೆ ಬಾಹುಬಲಿಯನ್ನ ಕೊಂದ ಎಂಬ ಪ್ರಶ್ನೆಗೆ ಟ್ರೇಲರ್'ನಲ್ಲಿ ಉತ್ತರದ ಸುಳಿವನ್ನೂ ಕೊಟ್ಟಿಲ್ಲ. ಮೊದಲ ಭಾಗದಿಂದ ಉಳಿದ ಕುತೂಹಲವನ್ನು ರಾಜಮೌಳಿ ಹಾಗೇ ಉಳಿಸಿಕೊಂಡು ಬಂದಿದ್ದಾರೆ.

ಮುಂದಿನ ತಿಂಗಳು, ಏಪ್ರಿಲ್ 28ರಂದು ಬಾಹುಬಲಿ-2 ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಭಾಸ್, ಅನುಷ್ಕಾ, ತಮನ್ನಾ, ರಾಣಾ ದಗ್ಗುಬಾಟಿ, ಸತ್ಯರಾಜ್, ರಮ್ಯಾ ಕೃಷ್ಣ ಮೊದಲಾದ ನಟರು ಅಭಿನಯಿಸಿರುವ ಈ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಿಸಲಾಗಿದೆ.

Show Full Article