Asianet Suvarna News Asianet Suvarna News

ಹಸೆಮಣೆ ಏರಿದ ನಿರೂಪಕಿ ಅನುಶ್ರೀ!

ಕಿರುತೆರೆಯ ಪ್ರಖ್ಯಾತ ನಿರೂಪಕಿ, ಉಡುಪಿಯ ಬೆಡಗಿಯ ಮದುವೆಯಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗುವುದರಲ್ಲಿ ಅನುಮಾನವಿಲ್ಲ. ಅದ್ಯಾಕೆ ಈ ಮಾತಿನ ಮಲ್ಲಿ ಸುದ್ದಿ ಇಲ್ಲದೆ ಮದುವೆಯಾಗಿದ್ದಾಳೆ ಅಂತ ಅಂದ್ಕೊತಿದೀರಾ? ಶಾಕ್ ಆಗಬೇಡಿ ಯಾಕಂದ್ರೆ ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ

Anushrees Reel Marriage

ಉಡುಪಿ(ಮಾ.22): ಕಿರುತೆರೆಯ ಪ್ರಖ್ಯಾತ ನಿರೂಪಕಿ, ಉಡುಪಿಯ ಬೆಡಗಿಯ ಮದುವೆಯಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗುವುದರಲ್ಲಿ ಅನುಮಾನವಿಲ್ಲ. ಅದ್ಯಾಕೆ ಈ ಮಾತಿನ ಮಲ್ಲಿ ಸುದ್ದಿ ಇಲ್ಲದೆ ಮದುವೆಯಾಗಿದ್ದಾಳೆ ಅಂತ ಅಂದ್ಕೊತಿದೀರಾ? ಶಾಕ್ ಆಗಬೇಡಿ ಯಾಕಂದ್ರೆ ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ

ಮಾತಿನಲ್ಲಿ ಸೋಲಿಸಲಾಗದ ಅನುಶ್ರೀ ಜರಿ ಸೀರೆ ಉಟ್ಟು, ಬಾಸಿಂಗ ಕಟ್ಟಿಕೊಂಡು ಮದುಮಗಳಂತೆ ಸಿಂಗಾರಗೊಂಡಿದ್ದಾರೆ. ಈಕೆಯ ಈ ರೀಲ್ ಮದುವೆಗಾಗಿ ಉಡುಪಿಯ ಆರ್'ಎಸ್'ಬಿ ಸಭಾ ಭವನದಲ್ಲಿ ಮದುವೆ ಮಂಟಪದ ಸೆಟ್ ಕೂಡಾ ಹಾಕಲಾಗಿತ್ತು. ಅಲ್ಲದೇ ಗಣ್ಯರೂ, ಓಲಗದವರೂ ಇಲ್ಲಿದ್ದರು.

ಕೋಸ್ಟಲ್ ವುಡ್'ನ ಅತ್ಯಂತ ದುಬಾರಿ ಚಿತ್ರದಲ್ಲಿ ಅನುಶ್ರೀ ಅಭಿನಯಿಸುತ್ತಿದ್ದು, ಉಡುಪಿಯ ರಜನೀಶ್ ಈ ಚಿತ್ರವನ್ನು ನಿರ್ದೇಶಿಸಿ ನಾಯಕನಾಗಿ ನಟಿಸಿದ್ದಾರೆ. ಮೂಲತಃ ಅನುಶ್ರೀ ಕರಾವಳಿಯ ಹುಡುಗಿಯಾಗಿದ್ದರೂ ತುಳು ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿ. ದ್ದಾರೆ.  

 

Follow Us:
Download App:
  • android
  • ios