ಚಾಲೆಂಜಿಂಗ್ ಸ್ಟಾರ್'ಗೆ ಹುಟ್ಟುಹಬ್ಬದ ಸಂಭ್ರಮ: ಶುಭ ಕೋರಿದ ಅಭಿಮಾನಿಗಳು,ಸಿನಿಮಾ ಮಂದಿ
entertainment
By Suvarna Web Desk | 03:17 PM Thursday, 16 February 2017

ದರ್ಶನ್ ಜನ್ಮ ದಿನ ಅಭಿಮಾನಿಗಳಿಗೆ ದೊಡ್ಡ ಹಬ್ಬ. 40 ನೇ ವಸಂತಕ್ಕೆ ಕಾಲಿಟ್ಟ ತಮ್ಮ ನೆಚ್ಚಿನ ನಾಯಕನನ್ನ ಕಂಡ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿಯೇ ಇದ್ದರು. ಅವರ ಅಭಿಮಾನದ ಪರಿ ಅಂತೂ ಉತ್ತುಂಗದಲ್ಲಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಖ್ಯೆ ಬೆಳೀತಾನೇ ಇದೆ.  ವರ್ಷದಿಂದ ವರ್ಷಕ್ಕೆ ಅಭಿಮಾನಿಗಳು ಹುಟ್ಟಿಕೊಳ್ತಾನೇ ಇದ್ದಾರೆ. ದರ್ಶನ್ 40ನೇ ಜನ್ಮ ದಿನದ ಆಚರಣೆಯಲ್ಲು ಅದು ಕಂಡು ಬಂತು.ಅದರಲ್ಲೂ ಈ ಸಲ ಮಹಿಳಾ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇತ್ತು.

ದರ್ಶನ್ ಜನ್ಮ ದಿನ ಅಭಿಮಾನಿಗಳಿಗೆ ದೊಡ್ಡ ಹಬ್ಬ. 40 ನೇ ವಸಂತಕ್ಕೆ ಕಾಲಿಟ್ಟ ತಮ್ಮ ನೆಚ್ಚಿನ ನಾಯಕನನ್ನ ಕಂಡ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿಯೇ ಇದ್ದರು. ಅವರ ಅಭಿಮಾನದ ಪರಿ ಅಂತೂ ಉತ್ತುಂಗದಲ್ಲಿತ್ತು. ದರ್ಶನ್ ಇಲ್ಲಿವರೆಗೂ ಏನ್ ಗಳಿಸಿದ್ದಾರೋ ಇಲ್ಲವೋ. ಅಭಿಮಾನಿಗಳನ್ನ ಹೆಚ್ಚು ಗಳಿಸಿದ್ದಾರೆ. ಅದು ಪ್ರತಿ ಜನ್ಮ ದಿನಕ್ಕೆ ಕಂಡು ಬರುತ್ತದೆ. ಆದರೆ, ದರ್ಶನ್ 40 ನೇ ಜನ್ಮ ದಿನಕ್ಕೆ ಮಹಿಳಾ ಅಭಿಮಾನಿಗಳ ಸಂಖ್ಯೆನೂ ಹೆಚ್ಚಾದಂತಿತ್ತು.
ಅಭಿಮಾನಿಗಳ ಅಪಾರ ಪ್ರೀತಿಯ ಮಧ್ಯೆ ದರ್ಶನ್ ಹೆಚ್ಚು ಹೊತ್ತು ಕಳೆದರು. ನಿನ್ನೆ ರಾತ್ರಿಯಿಂದಲೂ ಬಂದವರನ್ನ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದರು. ಇಂದು ಬೆಳೆಗ್ಗೆನೂ ಸರದಿ ಸಾಲಲ್ಲಿ ನಿಂತ ಅಭಿಮಾನಿಗಳು ಘೋಷಣೆ ಕೂಡಿದರು. ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದರು.

ದರ್ಶನ್ ಜನ್ಮ ದಿನಕ್ಕೆ ಒಂದಲ್ಲ ಒಂದು ಚಿತ್ರ ಸೆಟ್ಟೇರುತ್ತದೆ. ಈ ವರ್ಷ ಚಕ್ರವತಿ ಚಿತ್ರದ್ದೇ ಹವಾ ಇದೆ. ಅಲ್ಲದೇ ಈ ದಿನವೇ ಚಕ್ರವರ್ತಿ ಚಿತ್ರದ ಡಬ್ಬಿಂಗ್ ಮಾಡಿದ್ದಾರೆ ದರ್ಶನ್. ಚಾಲೆಂಜಿಂಗ್ ಸ್ಟಾರ್ ಜನ್ಮ ದಿನಕ್ಕೆ ಚಿತ್ರರಂಗದ  ಮುನಿರತ್ನ,ಅಣಜಿ ನಾಗರಾಜ್,ಎಂ.ಎಸ್.ರಮೇಶ್, ನಟ ಮಿತ್ರ ಸೇರಿದಂತೆ ಹಲವು ಸಿನಿಮಾ ಮಂದಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದ್ದಾರೆ.

ವರದಿ: ರೇವನ್ ಪಿ.ಜೇವೂರ್​

Show Full Article
COMMENTS

Currently displaying comments and replies