Asianet Suvarna News Asianet Suvarna News

ಜೈನ ತೀರ್ಥಂಕರರ ಅಪರೂಪದ ಮೂರ್ತಿ ಪತ್ತೆ

ಕಿ.ಶ.11 ನೇ ಶತಮಾನದ ಜೈನ ತೀರ್ಥಂಕರರ ಸುಂದರ ಮೂರ್ತಿಯೊಂದು ಭೂಮಿ ಕೆಲಸ ಮಾಡುತ್ತಿರುವಾಗ ದೊರಕಿದ್ದು,ಈ ಭಾಗದಲ್ಲಿ ಜೈನರು ಸಾಕಷ್ಟು ಪ್ರಮಾಣದಲ್ಲಿ ಇದ್ದಿರಬಹುದು ಎಂಬ ಕುರುಹು ಕಂಡುಬಂದಿದೆ.

Jaina Therthankara Idol Found

ಶಿವಮೊಗ್ಗ (ನ.06): ಕಿ.ಶ.11 ನೇ ಶತಮಾನದ ಜೈನ ತೀರ್ಥಂಕರರ ಸುಂದರ ಮೂರ್ತಿಯೊಂದು ಭೂಮಿ ಕೆಲಸ ಮಾಡುತ್ತಿರುವಾಗ ದೊರಕಿದ್ದು,ಈ ಭಾಗದಲ್ಲಿ ಜೈನರು ಸಾಕಷ್ಟು ಪ್ರಮಾಣದಲ್ಲಿ ಇದ್ದಿರಬಹುದು ಎಂಬ ಕುರುಹು ಕಂಡುಬಂದಿದೆ.

ಶಿಕಾರಿಪುರ ತಾಲ್ಲೂಕಿನ ಶರಣರ ನಾಡಿನಲ್ಲಿ ಸಾಕಷ್ಟು ಐತಿಹಾಸಿಕ ಶಿಲಾ ಶಾಸನಗಳು ಭೂಮಿಯಲ್ಲಿ ಇವೆ ಎಂಬುದನ್ನು ಶಿರಾಳಕೊಪ್ಪ ಹತ್ತಿರದ ಮಳೂರು ಗ್ರಾಮದ ಮಂಜಪ್ಪ ಎಂಬುವವರ ಜಮೀನಿನಲ್ಲಿ ಇತ್ತಿಚೆಗೆ ದೊರಕಿರುವ ಈ ಶಿಲೆಯಿಂದ ರುಜುವಾತು ಆಗಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಹಲವಾರು ಚಿಕ್ಕಚಿಕ್ಕ ವಸ್ತುಗಳು ದೊರಕಿದ್ದವು ಎಂದು ಜಮೀನಿನ ಮಾಲಿಕ ಮಳೂರಿನ ಮಡಿವಾಳರ ಮಂಜಪ್ಪ ಪತ್ರಿಕೆಗೆ ತಿಳಿಸಿದ್ದಾರೆ.ಈಗ ಸಿಕ್ಕಿರುವ ಮೂರ್ತಿ ಮಹಾವೀರರದ್ದು ಎಂದು ಗ್ರಾಮದಲ್ಲಿರುವ ಶಾಸನದಿಂದ ತಿಳಿದು ಬಂದಿರುವದಾಗಿ ಇತಿಹಾಸ ಬಲ್ಲ ಹಿರೇಜಂಬೂರ ರಮೇಶ್ ತಿಳಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಭೂಮಿ ಸಮಾ ಮಾಡುವಾಗ ಕಲ್ಲು ಕಂಡು ಬಂದ ಕಾರಣ ಹಾಗೆಯೇ ಬಿಟ್ಟು ,ನಂತರ ವಿಜಯ ದಶಮಿಯಂದು ಇಲ್ಲಿಗೆ ಹತ್ತಿರದ ಪಂಚಲಿಂಗೇಶ್ವರ ಬನದಲ್ಲಿ ಪೂಜೆ ಸಲ್ಲಿಸಿ ಮನೆಯವರು ಅಗೆದಾಗ ಈ ನಾಲ್ಕು ಅಡಿ ಅಗಲ ಹಾಗು ನಾಲ್ಕು ಅಡಿ ಎತ್ತರದ ಈ ಮೂರ್ತಿ ಗೋಚರವಾಯಿತು ಎಂದು ಮಂಜಪ್ಪ ತಿಳಿಸಿದ್ದಾರೆ.

ಈ ಮೂರ್ತಿ ಮಧ್ಯದಲ್ಲಿ ಮಹಾವೀರರು ಅಕ್ಕಪಕ್ಕದಲ್ಲಿ ಚಾಮರ ಹಿಡಿದು ನಿಂತ ಸೇವಕಿಯರು ಮೇಲ್ಭಾಗದಲ್ಲಿ ಮಂಗ ಹಾಗು ಗಿಳಿ ಫಲತಿನ್ನುತ್ತಿರುವ ದೃಶ್ಯವಿದೆ. ಕೆಳಭಾಗದಲ್ಲಿ ಅಕ್ಕಪಕ್ಕ ಸಿಂಹ ಮತ್ತು ಆನೆಯ ಚಿತ್ರಹೊಂದಿರುವ ಮೂತಿರ ಇದಾಗಿದೆ,ಇದನ್ನು ಭಗ್ನವಾಗದಂತೆ ನೋಡಿಕೊಂಡಿದ್ದಾಗಿ ತಿಳಿಸಿದರು.ಹಾಗೆಯೇ ಈದೇ ಸ್ಥಳದಲ್ಲಿ ಆಗಿನ ಕಾಲದ ಗಟ್ಟಿ ಇಟ್ಟಿಗೆಗಳು ದೊರಕಿವೆ ಎಂದಿದ್ದಾರೆ.

ಈ ಹಿಂದೆ ಆಳ್ವಿಕೆ ಮಾಡಿದ್ದ ಚಿಕ್ಕರಸ ಎಂಬ ರಾಜರ ಕಾಲದಲ್ಲಿ ಈ ಭಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಿರಬಹುದು ಎಂಬುದಾಗಿ ಗ್ರಾಮಸ್ಥರು ತಿಳಿಸುತ್ತಾರೆ. ಕಾರಣ ಈಗಲೂ ಇಲ್ಲಿಯ ನೀರಿನ ಹೊಂಡಕ್ಕೆ ಚಿಕ್ಕಸರ ಎಂಬ ಹೆಸರು ಇದೆ,ಹಾಗೆಯೇ ದೊಣ್ಣೆಪ್ಪನಾಯಕನ ಹೊಂಡ ಎಂದು ಆಗಿನ ಆಶ್ವಿಕೆ ಮಾಡಿದ ರಾಜರ ಹೆಸರಿನಿಂದ ಕರೆಯಲ್ಪಡುತ್ತಿವೆ ಎಂದಿದ್ದಾರೆ.

ಈ ಕುರಿತು ಜಮೀನಿನ ಮಾಲಿಕ ಮಂಜಪ್ಪ ಜೈನರ ಕಾಲದ ಮೂರ್ತಿ ಇದಾದಕಾರಣ ಧಮರ್ಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆ ಅವರನ್ನು ಕಂಡು ವಿಷಯ ತಿಳಿಸಿದ್ದಾಗಿ ತಿಳಿಸಿದ ಅವರು ಅದನ್ನು ಧರ್ಮಸ್ಥಳಕ್ಕೆ ಕೊಡುವಂತೆ ತಿಳಿಸಿದರು ಎಂದರು.

ಆದರೆ ಮಂಜಪ್ಪ ಈ ವಿಷವನ್ನು ತಾನುನಂಬಿದ ಸ್ವಾಮಿಗಳಾದ ವೀರಾಪುರ ಶ್ರೀಗಳನ್ನು ಹಾಗು ಸಾಲೂರು ಶ್ರೀಗಳನ್ನು ಕಂಡು ಅವರ ಸಲಹೆಯನ್ನು ಪಡೆದು ನಂತರ ವಿವಿದ ದೇವರಲ್ಲಿ ಪ್ರಶ್ನೆಕೇಳಿ ನಮ್ಮ ಜಮೀನಿನಲ್ಲಿ ಸ್ಥಾಪಿಸಬೇಕು ಎಂಬ ತೀಮಾರ್ನಕ್ಕೆ ಬಂದದ್ದಾಗಿ ಪತ್ರಿಕೆಗೆ ತಿಳಿಸಿದರು.

ಪ್ರಾಚ್ಯವಸ್ತು ಇಲಾಖೆಗೆ ಮಾಹಿತಿಕೊಟ್ಟಿದ್ದರೂ ಈ ವರೆಗೆ ಯಾವ ಅಧಿಕಾರಿಗಳು ಗಮನಹರಿಸಿಲ್ಲ ಎಂಬ ಸಂಗತಿ ತಿಳಿದಿದ್ದು,ಸುತ್ತಮುತ್ತಲ ಭಾಗದ ನೂರಾರು ಗ್ರಾಸ್ಥರು ದೊರಕಿರುವ ಮೂತಿರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios