ASK THE DOCTOR

ಡಾ. ರವಿ ಗೋಪಾಲ್ ವರ್ಮಾ

ನ್ಯೂರೋಸರ್ಜರಿ ವಿಭಾಗದ ಮುಖ್ಯ ಸಮಾಲೋಚಕರು ಹಾಗೂ ನರಶಾಸ್ತ್ರ ವಿಭಾಗದ ಮುಖ್ಯಸ್ಥರು

ಡಾ. ರವಿ ಗೋಪಾಲ್ ವರ್ಮಾ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ, ಅವರು ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 2008 ರಿಂದ ನರಶಾಸ್ತ್ರ ವಿಭಾಗದಲ್ಲಿ ವೆ ಸಲ್ಲಿಸಿಯಶಸ್ವಿಯಾಗಿ ಮುನ್ನಡೆಸಿದ್ದಾರೆ. ನರಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿರುವ ಡಾ. ರವಿ ಗೋಪಾಲ್ ವರ್ಮಾ ಅವರು 20ಕ್ಕೂ ಹೆಚ್ಚು ವರ್ಷ ಅನುಭವ ಹೊಂದಿದ್ದಾರೆ. ಚಲನೆ ದೌರ್ಬಲ್ಯ(Movement Disorders) ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಫಂಕ್ಷನಲ್ ಮತ್ತು ಸ್ಟೀರಿಯೋಟ್ಯಾಕ್ಟಿಕ್ ನ್ಯೂರೋಸರ್ಜರಿಯ ಎಲ್ಲಾ ವಿಧಾನಗಳಲ್ಲೂ ತರಬೇತಿ ಪಡೆದಿದ್ದಾರೆ. ಮೂರ್ಛೆರೋಗ (Epilepsy), ಚಲನೆ ದೌರ್ಬಲ್ಯ ಮತ್ತು ದೀರ್ಘಕಾಲದ ನೋವು(Chronic Pain), ಶಿಶುರೋಗ(Paediatric), ವ್ಯಾಸ್ಕುಲಾರ್, ಎಂಡೋಸ್ಕೋಪಿಕ್ ಮೊದಲಾದ ನ್ಯೂರೋಸರ್ಜರಿ ವಿಧಾನಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಪಾರ್ಕಿನ್ಸನ್ಸ್ ರೋಗಕ್ಕೆ ಮಾಡುವ ಡಿಬಿಎಸ್ ಸರ್ಜರಿಯಲ್ಲಿ ಹೆಚ್ಚು ಅನುಭವವಿರುವ ಭಾರತದ ಕೆಲವೇ ನ್ಯೂರೋಸರ್ಜನ್'ಗಳಲ್ಲಿ ಡಾ. ರವಿ ಗೋಪಾಲ್ ವರ್ಮಾ ಕೂಡ ಒಬ್ಬರು.

ಸಾಧನೆಗಳು:

1) ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನ ನರಶಾಸ್ತ್ರ (Neurosurgery at the Institute of Neurosciences) ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಕಲಿಯುತ್ತಿರುವವರಿಗೆ ತರಬೇತಿ ನೀಡಲು ಎಂಸಿಎಚ್ ಪ್ರೋಗ್ರಾಂ ಅನ್ನು ಅಳವಡಿಸಿದ್ದಾರೆ.
2) ಪಾರ್ಕಿನ್ ಸನ್ ರೋಗಗಳಿಗೆ ಚಿಕಿತ್ಸೆ ನೀಡುವ ಡಿಬಿಎಸ್ ಪ್ರೋಗ್ರಾಂ ಅನ್ನು ಹೈದರಾಬಾದ್ ನ ನಿಮ್ಸ್'ನಲ್ಲಿ, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ.
3) ಭಾರತ-ಕೆನಡಾ ಸಹಯೋಗದಲ್ಲಿ ನೆದರ್'ಲ್ಯಾಂಡ್ಸ್'ನಲ್ಲಿ ನಡೆದ ಪ್ರತಿಷ್ಠಿತ ಡಿಬಿಎಸ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
4) ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮೂವ್ಮೆಂಟ್ ಡಿಸಾರ್ಡರ್ಸ್ ಸರ್ಜರಿ ಕುರಿತಂತೆ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದ್ದರು. ಡಿಬಿಎಸ್ ಸರ್ಜರಿಯನ್ನು ಸಂವಾದಾತ್ಮಕ ವೇದಿಕೆಯಲ್ಲಿ (Interactive Forum) ನೇರ ಪ್ರಸಾರ ಮಾಡಿದ್ದು ಜಗತ್ತಿನಲ್ಲಿಯೇ ಇದು ಮೊದಲ ಬಾರಿಯಾಗಿದೆ.
5) ನಿಮ್ಹಾನ್ಸ್'ನ ಅಧ್ಯಯನ ಮಂಡಳಿಯಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
6) ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಹಿಂದೂಸ್ಥಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆಗೆ ಇವರನ್ನು ಅತಿಥಿ ಉಪನ್ಯಾಸಕರಾಗಿ ಆಹ್ವಾನಿಸಲಾಗಿತ್ತು. ದಲೈಲಾಮ, ಮನಮೋಹನ್ ಸಿಂಗ್, ಅಮೇರಿಕಾ ರಾಜಕಾರಣಿ, ಪರಿಸರವಾದಿ ಅಲ್ ಗೋರೆ, ಬ್ರಿಟನ್ ಮಾಜಿ ಪ್ರಧಾನಿ ಗೋರ್ಡನ್ ಬ್ರೌನ್ ಮುಂತಾದ ಗಣ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಹಿಂದೂಸ್ಥಾನ್ ಟೈಮ್ಸ್ ಶೃಂಗಸಭೆಗೆ ಉಪನ್ಯಾಸಕರಾಗಿ ಆಹ್ವಾನ ಪಡೆದ ಮೊದಲ ನರಶಾಸ್ತ್ರಜ್ಞ ಡಾ. ರವಿ ಗೋಪಾಲ್ ವರ್ಮಾರವರಾಗಿದ್ದು " Unravelling the Brain’s Enigmas" ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು.
7) ರಾಮನ್ ರೀಸರ್ಚ್ ಸೆಂಟರ್'ಗೆ ಸಂದರ್ಶಕ ಪ್ರಾಧ್ಯಾಪಕರಾಗಿ ನಿಯೋಜನೆಗೊಂಡಿದ್ದರು.
8) ಭಾರತದಲ್ಲಿ ಮೊದಲ ಬಾರಿಗೆ, ಜಗತ್ತಿನಲ್ಲಿ 3 ನೇ ಬಾರಿಗೆ ಡಿಬಿಎಸ್ ಸರ್ಜರಿಯನ್ನು ಯಶಸ್ವಿಯಾಗಿಸಿದ ಕೀರ್ತಿ ಇವರದ್ದಾಗಿದೆ.