Asianet Suvarna News Asianet Suvarna News

ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ-02ರ ಫಲಿತಾಂಶ ಪ್ರಕಟ: ಇಲ್ಲಿದೆ ಪೂರ್ಣ ಮಾಹಿತಿ!

ದ್ವಿತೀಯ ಪಿಯುಸಿ ಪರೀಕ್ಷೆ -2 ಫಲಿತಾಂಶವು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

Result of second PUC Exam 02 will be announced may 21st gvd
Author
First Published May 20, 2024, 9:14 PM IST

ಬೆಂಗಳೂರು (ಮೇ.20): ದ್ವಿತೀಯ ಪಿಯುಸಿ ಪರೀಕ್ಷೆ -2 ಫಲಿತಾಂಶವು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ. ಫಲಿತಾಂಶವನ್ನು ಮಂಡಳಿ ವೆಬ್‌ಸೈಟ್ https://karresults.nic.in ನಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಏಪ್ರಿಲ್ 29ರಿಂದ ಮೇ 16-05-24 ರವರೆಗೆ ಪರೀಕ್ಷೆ ನಡೆಸಲಾಗಿತ್ತು. 1.49 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪಿಯುಸಿ, ಎಸ್‌ಎಸ್‌ಎಲ್‌ಸಿಯಲ್ಲಿ ದ.ಕ. ಪ್ರಥಮ: ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ದ.ಕ. ಜಿಲ್ಲೆ ಪ್ರಥಮ ಸ್ಥಾನ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಬಗ್ಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮತ್ತು ದ.ಕ. ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಅವರು ಹರ್ಷ ವ್ಯಕ್ತ ಪಡಿಸಿದ್ದು, ಇದು ದ.ಕ.ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ..

ಕಳೆದ 125 ಬಾರಿ ಪ್ರೌಢಶಾಲೆಗಳು ಎಸ್‌ಎಸ್‌ಎಲ್‌ಸಿಯಲ್ಲಿ ದ.ಕ.ಜಿಲ್ಲೆಯ ಶೇ. ನೂರು ಫಲಿತಾಂಶ ದಾಖಲಿಸಿದರೆ ಈ ಬಾರಿ 270 ಶಾಲೆಗಳು ಈ ಸಾಧನೆ ಮಾಡಿವೆ. ಕಳೆದ ವರ್ಷ 35 ಸರ್ಕಾರಿ ಪ್ರೌಢಶಾಲೆಗಳು ಶೇ.ನೂರು ಫಲಿತಾಂಶ ದಾಖಲಿಸಿದ್ದರೆ, ಈ ಬಾರಿ 84ಕ್ಕೆ ಏರಿಕೆಯಾಗಿದೆ. ಪಿಯುಸಿಯಲ್ಲೂ ಕಳೆದ ವರ್ಷ 37 ಕಾಲೇಜುಗಳು ಶೇ.ನೂರು ಫಲಿತಾಂಶ ದಾಖಲಿಸಿದ್ದರೆ, ಈ ಬಾರಿ 59ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ 9 ವಿದ್ಯಾರ್ಥಿಗಳು ರ್‍ಯಾಂಕ್‌ಗಳಿಸಿದ್ದರೆ, ಈ ಬಾರಿ 25 ವಿದ್ಯಾರ್ಥಿಗಳು ರ್‍ಯಾಂಕ್‌ ಗಳಿಸಿದ್ದಾರೆ. 

ಪಿಯು ಪರೀಕ್ಷೆ 2: ನೋಂದಾಯಿಸಿದ ವಿಷಯಕ್ಕೆ ಮಾತ್ರ ಹಾಜರಾದರೆ ಸಾಕು

ಇದು ಅತ್ಯುತ್ತಮ ಪ್ರಗತಿ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಶ್ಲಾಘಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿದ್ದರು. ಹಿಂದಿನ ವರ್ಷ ಕಡಿಮೆ ಫಲಿತಾಂಶ ಬಂದ ಶಾಲೆಗಳನ್ನು ಗುರುತಿಸಿ ಪೂರಕ ಕ್ರಮ ಕೈಗೊಂಡಿದ್ದರು. ವಿಷಯವಾರು ಅಂಕಗಳನ್ನು ಪರಿಶೀಲಿಸಿ ಕಲಿಕೆಯಲ್ಲಿ ಹಿಂದೆ ಇದ್ದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕ್ಲಾಸ್ ನಡೆಸಲಾಗಿತ್ತು. ಇದಕ್ಕೆ ಪಾಲಕರು ಮತ್ತು ಶಿಕ್ಷಕರು ಉತ್ತಮ ಸಹಕಾರ ನೀಡಿದ್ದು ಯಶಸ್ವಿಗೆ ಕಾರಣ ಎಂದು ದ.ಕ.ಜಿ.ಪಂ. ಸಿಇಒ ಡಾ.ಅನಂದ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios